ಯುವರತ್ನ' ಬಗ್ಗೆ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ ನಿರ್ದೇಶಕ

Recommended Video

Yuvaratna Movie: ಯುವರತ್ನ ಸಿನೆಮಾಕ್ಕೆ ಹೊಸ ಸಂಕಷ್ಟ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ಯುವರತ್ನ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೆ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡಕ್ಕೆ ಸುಳ್ಳುಸುದ್ದಿಯ ಕಾಟ ಶುರುವಾಗಿದೆ. 'ಯುವರತ್ನ' ಚಿತ್ರದ ಆಡಿಷನ್ ಬಗ್ಗೆ ಸುಳ್ಳು ಸುದ್ದಿಯೊಂದು ಈಗ ವೈರಲ್ ಆಗಿದೆ.

ಹೌದು, 'ಯುವರತ್ನ' ಚಿತ್ರದಲ್ಲಿ ಅಭಿನಯಿಸಲು ಕಲಾವಿದರು ಬೇಕಾಗಿದ್ದಾರೆ ಎಂದು ಪೋಸ್ಟರ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿದೆ. ಈ ಪೋಸ್ಟರ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಲಾವಿದರ ಆಡಿಷನ್ ಮಾಡುವ ಬಗ್ಗೆ ಮಾಹಿತಿ ಹಾಕಿ ಅವರ ಫೋನ್ ನಂಬರ್ ಅನ್ನು ಶೇರ್ ಮಾಡಲಾಗಿದೆ.

ಕಲಾವಿದರು ಬೇಕಾಗಿದ್ದಾರೆ ಎನ್ನುವ ಪೋಸ್ಟರ್ ನೋಡಿ ಆಗಲೆ ಅಭಿಮಾನಿಗಳು ಆಡಿಷನ್ ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೋಡಬೇಕು ಎನ್ನುವುದು ಅನೇಕರ ದೊಡ್ಡ ಕನಸಾಗಿರುತ್ತೆ. ಅಂತಾದ್ರಲ್ಲಿ ಪುನೀತ್ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಹುಡುಕಿಕೊಂಡು ಬಂದಿದೆ ಅಂದ್ರೆ ಅಭಿಮಾನಿಗಳು ಸುಮ್ಮನಿರುತ್ತಾರಾ. ಖುಷಿಯಿಂದ ಆಡಿಷನ್ ಗೆ ಸಿದ್ಧರಾಗಿದ್ದಾರೆ.

Santhosh Ananddram clarified fake news about Yuvaratna movie audition

ಅಂದ್ಹಾಗೆ ಈ ರೀತಿಯ ಸುಳ್ಳು ಸುದ್ದಿಯನ್ನು ಹನುಮಂತರಾವ್ ಎಂ ಮಾಕಡವಾಲೆ ಎನ್ನುವವರ ಹೆಸರಿನಲ್ಲಿ ಹಬ್ಬಿಸಲಾಗಿದೆ. ಕೇವಲ ಹುಬ್ಬಳ್ಳಿ-ಧಾರವಾಡದಲ್ಲಿ ಮಾತ್ರ ಆಡಿಷನ್ ನಡೆಯಲಿದೆ, 18 ರಿಂದ 28 ವರ್ಷದ ಪುರುಷರು ಮತ್ತು ಮಹಿಳೆಯರು ಸ್ಟೂಡೆಂಟ್ ಪಾತ್ರಕ್ಕೆ ಬೇಕಾಗಿದ್ದಾರೆ ಎನ್ನುವ ಜಾಹಿರಾತನ್ನು ಹಾಕಿ ವೈರಲ್ ಮಾಡಿದ್ದಾರೆ. ಮಾಹಿತಿಯ ಕೆಳಗೆ ಅವರ ಫೋನ್ ನಂಬರ್ ಅನ್ನು ಶೇರ್ ಮಾಡಿದ್ದಾರೆ.

ಈ ಪೋಸ್ಟರ್ ನೋಡಿ ಶಾಕ್ ಆದ 'ಯುವರತ್ನ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇದು ಸುಳ್ಳು ಸುದ್ದಿ ದಯವಿಟ್ಟು ನಂಬಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. " ಹುಬ್ಬಳ್ಳಿ-ಧಾರವಾಡ ಜನತೆ ಈ ಮಹಿತಿಯನ್ನು ನಂಬಬೇಡಿ. ಆ ವ್ಯಕ್ತಿಗೂ ನಮ್ಮ ಸಿನಿಮಾಗೂ ಸಂಬಂಧವಿಲ್ಲ. ಇದು ಸುಳ್ಳು ಸುದ್ದಿ. ನಮ್ಮ ಚಿತ್ರದ ಆಡಿಷನ್ ಈಗಾಗಲೆ ಮುಗಿದಿದೆ. ಇದನ್ನ ನಂಬಬೇಡಿ" ಎಂದು ಸ್ಪಷ್ಟನೆ ನೀಡಿದ್ದಾರೆ.

'ಯುವರತ್ನ' ಪುನೀತ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ ಎರಡನೇ ಸಿನಿಮಾ. ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಸಾಯೇಶಾ ಕಾಣಿಸಿಕೊಳ್ಳುತ್ತಿದ್ದಾರೆ. ರಾಧಿಕಾ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪುನೀತ್ ರಾಜ್ ಕುಮಾರ್ ಕಾಲೇಜ್ ಸ್ಟೂಡೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Director Santhosh Ananddram clarified fake news about 'Yuvaratna' movie audition. Power star Puneeth Rajkumar starrer 'Yuvaratna' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X