For Quick Alerts
  ALLOW NOTIFICATIONS  
  For Daily Alerts

  ಪುನೀತ್‌ ಗೆ ಮೂರನೇ ಬಾರಿ ಆಕ್ಷನ್-ಕಟ್ ಹೇಳಲಿರುವ ಹಿಟ್ ನಿರ್ದೇಶಕ

  |

  ಪುನೀತ್ ರಾಜ್‌ಕುಮಾರ್ ಜೊತೆ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ ನಿರ್ದೇಶಕ ಸಂತೋಶ್ ಆನಂದ್ ರಾಮ್.

  ಮತ್ತೊಂದು ದೊಡ್ಡ ಪ್ರಾಜೆಕ್ಟ್ ಅನೌನ್ಸ್ ಮಾಡಿದ Santosh Anandram | Filmibeat Kannada

  ಈಗಾಗಲೇ ಎರಡು ಸಿನಿಮಾಗಳನ್ನು ಪುನೀತ್ ರಾಜ್‌ಕುಮಾರ್ ಗಾಗಿ ನಿರ್ದೇಶಿಸಿರುವ ಸಂತೋಶ್ ಆನಂದ್ ರಾಮ್ ಈಗ ಮೂರನೇ ಸಿನಿಮಾ ತಯಾರಿಯಲ್ಲಿದ್ದು, ಈ ಸಿನಿಮಾವನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಿಸುತ್ತಿದ್ದಾರೆ.

  ಪುನೀತ್ ರಾಜ್‌ಕುಮಾರ್ ನಟನೆಯ ಹಿಟ್ ಸಿನಿಮಾ 'ರಾಜಕುಮಾರ' ನಿರ್ದೇಶಿಸಿದ್ದ ಸಂತೋಷ್, ಯುವರತ್ನ ಸಹ ನಿರ್ದೇಶಿಸಿದ್ದರು. ಯುವರತ್ನ ಬಿಡುಗಡೆ ಆಗುವ ಮುನ್ನವೇ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ.

  ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಸಿನಿಮಾದ ಮೂಲಕ ನಿರ್ದೇಶನ ಪ್ರಾರಂಭಿಸಿದ ಸಂತೋಶ್ ಆನಂದ್ ರಾಮ್ ಆ ನಂತರ ಸೂಪರ್ ಹಿಟ್ ರಾಜಕುಮಾರ ಸಿನಿಮಾ ನಿರ್ದೇಶಿಸಿದ್ದರು. ಸಂತೋಷ್ ಅವರಿಗೆ ನಿರ್ದೇಶಕರಾಗಿ ಇದು ನಾಲ್ಕನೇ ಸಿನಿಮಾ, ಇದರಲ್ಲಿ ಮೂರು ಸಿನಿಮಾಗಳು ಪುನೀತ್ ಅವರ ಜೊತೆಯೇ ಮಾಡಿದ್ದಾರೆ ಸಂತೋಷ್.

  ಪುನೀತ್ ರಾಜ್‌ಕುಮಾರ್ ಪ್ರಸ್ತುತ 'ಜೇಮ್ಸ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾದ ಚಿತ್ರೀಕರಣದ ಬಳಿಕ ಸಂತೋಷ್ ಅವರ ಹೊಸ ಸಿನಿಮಾ ಸೆಟ್ಟೇರಲಿದೆ.

  English summary
  Santhosh Ananddram Confirms his next movie with Puneeth Rajkumar, producer will be Vijay Kiragandur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X