ಸುದೀಪ್ ಗೆ ಹೊಸ ಟೈಟಲ್ ನೀಡಿದ ಸಂತೋಷ್ ಆನಂದ್ ರಾಮ್
ಅಭಿನಯ ಚಕ್ರವರ್ತಿ ಎಂಬ ಬಿರುದು ಪಡೆದಿದ್ದ ಕಿಚ್ಚ ಸುದೀಪ್ ಗೆ 'ಪೈಲ್ವಾನ್' ಚಿತ್ರತಂಡ ಬಾದ್ ಷಾ ಎಂಬ ಬಿರುದು ನೀಡಿತ್ತು. ಈಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಿಚ್ಚನಿಗೆ ಮತ್ತೊಂದು ಟೈಟಲ್ ನೀಡಿದ್ದಾರೆ.
ನಿನ್ನೆ (ಮಂಗಳವಾರ) 'ಪೈಲ್ವಾನ್' ಸಿನಿಮಾದ ರೊಮ್ಯಾಟಿಂಕ್ ಹಾಡು ಬಿಡುಗಡೆಯಾಗಿದೆ. 'ಬಂದ ನೋಡು ಪೈಲ್ವಾನ್..' ಎಂಬ ಮಾಸ್ ಹಾಡಿನ ಬಳಿಕ ಕ್ಯೂಟ್ ಹಾಡನ್ನು ಚಿತ್ರತಂಡ ಪ್ರೇಕ್ಷಕರ ಮುಂದೆ ತಂದಿದೆ.

ಈ ಹಾಡಿಗೆ ದೊಡ್ಡ ಮೆಚ್ಚುಗೆ ಸಿಕ್ಕಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಡು ನೋಡಿದ ಸುದೀಪ್ ಗೆ ಹೊಸ ಟೈಟಲ್ ನೀಡಿದ್ದಾರೆ. ಸುದೀಪ್ ರನ್ನು ''ಪೈಲ್ವಾನ್ ಆಫ್ ರೊಮ್ಯಾನ್ಸ್'' ಎಂದು ಸಂತೋಷ್ ಕರೆದಿದ್ದಾರೆ. ಸಂತೋಷ್ ಆನಂದ್ ರಾಮ್ ನೀಡಿರುವ ಹೊಸ ಟೈಟಲ್ ಸುದೀಪ್ ಗೂ ಇಷ್ಟ ಆಗಿದೆ.

ಹಾಡಿನಲ್ಲಿ ಸುದೀಪ್ ರೊಮ್ಯಾನ್ಸ್ ನೋಡಬಹುದಾಗಿದೆ. ಸುದೀಪ್ ಹಾಗೂ ಆಕಾಂಕ್ಷ ಎಕ್ಸ್ ಪ್ರೆಶನ್ ತುಂಬ ಚೆನ್ನಾಗಿದೆ. 'ಕಣ್ಣು ಮಣಿಯೇ ಕಣ್ಣು ಹೊಡೆಯೇ..' ಹಾಡು ಸದ್ಯ, ಯೂ ಟ್ಯೂಬ್ ನಲ್ಲಿ 7 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ.
More from Filmibeat
English summary
Kannada director Santhosh Ananddram gave pailwaan of romance title to Sudeep.


Click it and Unblock the Notifications











