ಕನ್ನಡದ ಈ ಮೂವರು ನಿರ್ದೇಶಕರಿಗೆ ಹ್ಯಾಟ್ರಿಕ್ ಗೆಲುವು ಸಿಗುತ್ತಾ?

ಹ್ಯಾಟ್ರಿಕ್ ಹಿಟ್ ನೀಡಿದ ನಾಯಕ ನಟರು ಸಾಕಷ್ಟು ಮಂದಿ ಸಿಗುತ್ತಾರೆ. ಹಾಗೆ ಹ್ಯಾಟ್ರಿಕ್ ಹಿಟ್ ನೀಡಿದ ನಿರ್ದೇಶಕರು ಕೂಡ ಇದ್ದಾರೆ. ಆದ್ರೆ ಆ ಹ್ಯಾಟ್ರಿಕ್ ಅನ್ನೊ ಪದವನ್ನು ಹೀರೋಗಳಿಗೆ ಮಾತ್ರ ಕರೆಯಲಾಗುತ್ತಿದೆ. ನಿರ್ದೇಶಕರ ಪಾಲಿಗೆ ಹ್ಯಾಟ್ರಿಕ್ ಪದ ಕನಸಿನ ಮಾತಾಗಿತ್ತು.

ಆದ್ರೀಗ ಈ ಹ್ಯಾಟ್ರಿಕ್ ಅನ್ನೊ ಪದ ನಿರ್ದೇಶಕರಿಗೂ ಸಿಗುವ ಕಾಲ ಬಂದಿದೆ. ಸದ್ಯ ಸ್ಯಾಂಡಲ್ ವುಡ್ ನ ಮೂವರು ನಿರ್ದೇಶಕರು ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದಾರೆ. ಈಗಾಗಲೆ ಎರಡು ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿ ಚಿತ್ರಾಭಿಮಾನಿಗಳ ನಿರೀಕ್ಷೆ ಹೆಚ್ಚಿಸಿಕೊಂಡಿರುವ ಈ ಮೂವರು ನಿರ್ದೇಶಕರು ಮೂರನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಹ್ಯಾಟ್ರಿಕ್ ಅಂಚಿನಲ್ಲಿರುವ ಆ ಮೂವರು ನಿರ್ದೇಶಕರು ಮತ್ಯಾರು ಅಲ್ಲ, ಸಂತೋಷ್ ಆನಂದ್ ರಾಮ್, ಕೃಷ್ಣ ಮತ್ತು ಚೇತನ್ ಕುಮಾರ್. ಈ ಮೂವರು ನಿರ್ದೇಶಕರು ಈಗ ಖ್ಯಾತ ನಟರ ಸಿನಿಮಾಗಳನ್ನು ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟಕ್ಕೂ ಆ ಚಿತ್ರಗಳು ಯಾವುದು? ಮುಂದೆ ಓದಿ..

ಸಂತೋಷ್ ಆನಂದ್ ರಾಮ್

ಸಂತೋಷ್ ಆನಂದ್ ರಾಮ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಚರ್ ಅಂಡ್ ಮಿಸ್ಸಸ್ ರಾಮಾಚಾರಿ' ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸಂತೋಷ್ ಆನಂದ್ ರಾಮ್ ಮೊದಲ ಚಿತ್ರದಲ್ಲೇ ಯಶಸ್ವಿ ನಿರ್ದೇಶಕರೆನಿಸಿಕೊಂಡರು. ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ರಾಜಕುಮಾರ ಸಿನಿಮಾ ನಿರ್ದೇಶನ ಮಾಡಿದ್ರು. ಎರಡನೇ ಚಿತ್ರವು ದೊಡ್ಡ ಮಟ್ಟಕ್ಕೆ ಖ್ಯಾತಿ ತಂದು ಕೊಟ್ಟಿತು. ಸದ್ಯ ಮತ್ತೆ ಅಪ್ಪು ಜೊತೆ 'ಯುವರತ್ನ' ಚಿತ್ರ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿದ ಸಂತೋಷ್ ಆನಂದ್ ರಾಮ್ ಗೆ ಮೂರನೆ ಸಿನಿಮಾ ಹ್ಯಾಟ್ರಿಕ್ ಗೆಲುವು ತಂದು ಕೊಡುತ್ತಾ?

ಭರ್ಜರಿ ಚೇತನ್ ಕುಮಾರ್

ಭರ್ಜರಿ ಚೇತನ್ ಕುಮಾರ್

ನಟ ಧ್ರುವ ಸರ್ಜಾ ಅಭಿನಯದ 'ಬಹದ್ದೂರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ಚೇತನ್ ಗೆ ಮೊದಲ ಸಿನಿಮಾನೇ ಬ್ರೇಕ್ ಕೊಟ್ಟಿತು. ಆ ನಂತರ ಮತ್ತೆ ಧ್ರುವ ಸರ್ಜಾ ಜೊತೆ 'ಭರ್ಜರಿ' ಚಿತ್ರ ಮಾಡಿ ಭರ್ಜರಿ ಯಶಸ್ಸು ಕಂಡರು. ಇದೇ ಸಕ್ಸಸ್ ಖುಷಿಯಲ್ಲಿ ಈಗ ಶ್ರೀಮುರಳಿ ಜೊತೆ 'ಭರಾಟೆ' ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೆ ಟೀಸರ್ ಮತ್ತು ಮೇಕಿಂಗ್ ಮೂಲಕ ಸದ್ದು ಮಾಡುತ್ತಿರುವ 'ಭರಾಟೆ' ಸಾಕಷ್ಟು ಕುತೂಹಲ ಮೂಡಿಸಿದೆ. 'ಭರಾಟೆ' ಚೇತನ್ ಮೂರನೇ ಸಿನಿಮಾ ಆಗಿರುವ ಕಾರಣ ಚೇತನ್ ಮೇಲೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

ಪೈಲ್ವಾನ್ ಕೃಷ್ಣ

ಪೈಲ್ವಾನ್ ಕೃಷ್ಣ

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಡುತ್ತಿರುವ ಸಿನಿಮಾಗಳ ಲಿಸ್ಟ್ ನಲ್ಲಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಕೂಡ ಒಂದು. ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ 'ಪೈಲ್ವಾನ್' ಕೃಷ್ಣ ನಿರ್ದೇಶನದ ಮೂರನೇ ಸಿನಿಮಾ ಎನ್ನುವುದು ವಿಶೇಷ. ರಾಕಿಂಗ್ ಸ್ಟಾರ್ ಯಶ್ ಜೊತೆ 'ಗಜಕೇಸರಿ' ಸಿನಿಮಾ ಮಾಡಿದ್ದ ಕೃಷ್ಣ ಆ ನಂತರ ಸುದೀಪ್ ಜೊತೆ 'ಹೆಬ್ಬುಲಿ' ಸಿನಿಮಾ ಮಾಡಿ ಸ್ಟಾರ್ ನಿರ್ದೇಶಕರಾದರು. ಈಗ 'ಪೈಲ್ವಾನ್' ಮೂಲಕ ಮತ್ತೆ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಕನಸಿನ ನಿರೀಕ್ಷೆಯಲ್ಲಿದ್ದಾರೆ ಕೃಷ್ಣ.

ಮೂರನೆ ಸಿನಿಮಾದ ತಯಾರಿಯಲ್ಲಿ ಈ ನಿರ್ದೇಶಕರು

ಮೂರನೆ ಸಿನಿಮಾದ ತಯಾರಿಯಲ್ಲಿ ಈ ನಿರ್ದೇಶಕರು

'ರಾಮಾ ರಾಮಾ ರೇ' ಮತ್ತು 'ಒಂದಲ್ಲಾ ಎರಡಲ್ಲಾ' ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸತ್ಯ ಪ್ರಕಾಶ್ ಸದ್ಯ ಮೂರನೆ ಸಿನಿಮಾದ ತಯಾರಿಯಲ್ಲಿದ್ದಾರೆ. ಮೂರನೇ ಸಿನಿಮಾ ಅನೌನ್ಸ್ ಮಾಡದ ಸತ್ಯ ಪ್ರಕಾಶ್ ಸಿನಿಮಾದ ಮೇಲೆ ಭಾರಿ ಕುತೂಹಲ ಮೂಡಿಸಿದೆ. ಇನ್ನು 'ರಂಗಿತರಂಗ' ಖ್ಯಾತಿಯ ಅನೂಪ್ ಬಂಡಾರಿ ನಿರ್ದೇಶನದ 'ಬಿಲ್ಲ ರಂಗ ಭಾಷ' ಕೂಡ ಭಾರಿ ಕತೂಹಲ ಮೂಡಿಸಿದೆ. 'ರಂಗಿತರಂಗ' ಸಿನಿಮಾ ನಂತರ ಬಂದ 'ರಾಜರಥ' ನಿರೀಕ್ಷೆಯ ಗೆಲುವು ತಂದು ಕೊಡಲಿಲ್ಲ. ಆದ್ರೀಗ 'ಬಿಲ್ಲ ರಂಗ ಭಾಷ' ಮೂಲಕ ಕಿಚ್ಚ ಸುದೀಪ್ ಅವರಿಗೆ ಮೂರನೇ ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.

More from Filmibeat

English summary
Kannada director Santhosh Ananddram, Krishna, Chetan Kumar will expecting hatrick success. Santhosh Ananddram 'Yuvaratna', Krishna's 'Pailwan', Chethan Kumar 'Bharate' movies are created most expectation to audience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X