ಬರ್ತ್‌ಡೇಯಂದು ಸಂತೋಷ್ ಆನಂದ್ ರಾಮ್ ಸರ್ಪ್ರೈಸ್: ಮುಂದಿನ ಸಿನಿಮಾ ಶಿವಣ್ಣನಿಗೆ?

ಕನ್ನಡದ ಹೆಸರಾಂತ ನಿರ್ದೇಶಕರಲ್ಲಿ ಸಂತೋಷ್ ಆನಂದ್ ರಾಮ್ ಕೂಡ ಒಬ್ಬರು. ಸಂತೋಷ್ ಆನಂದ್ ರಾಮ್, ಸಾಲು ಸಾಲು ಹಿಟ್‌ಗಳನ್ನು ಕೊಟ್ಟ ನಿರ್ದೇಶಕ. ಇವರ ಬಗ್ಗೆ ಮಾತನಾಡೋಕೆ ಎರಡು ಕಾರಣಗಳಿವೆ. ಒಂದು ಇಂದು (ಆಗಸ್ಟ್‌ 15) ಸಂತೋಷ್ ಆನಂದ್ ರಾಮ್ ಹುಟ್ಟುಹಬ್ಬ. ಮತ್ತೊಂದು ಅವರ ಮುಂದಿನ ಸಿನಿಮಾ.

ಹೌದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಒಂದಾದ ಮೇಲೆ ಒಂದು ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ. ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ನಿರೀಕ್ಷೆಯನ್ನು ಹುಟ್ಟು ಹಾಕುವ ಸಿನಿಮಾಗಳೇ. ಕೊನೆಯದಾಗಿ ಪುನೀತ್ ರಾಜ್‌ಕುಮಾರ್‌ಗೆ 'ಯುವರತ್ನ' ಸಿನಿಮಾ ಮಾಡಿದ್ದಾರೆ.

ಇನ್ನು ಈಗಾಗಲೇ ಸಂತೋಷ್ ಆನಂದ್ ರಾಮ್ ಮುಂದಿನ ಎರಡು ಸಿನಿಮಾಗಳು ಯಾವುವು ಎನ್ನುವುದು ಗೊತ್ತೇ ಇದೆ. ಆದರೆ 3ನೇ ಸಿನಿಮಾ ಯಾವುದು ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಇದಕ್ಕೆ ಕಾರಣ ಸ್ವತಃ ಸಂತೋಷ್ ಆನಂದ್ ರಾಮ್ ಅವ್ರೇ....

ಸಂತೋಷ್ ಆನಂದ್ ರಾಮ್, ಹೊಂಬಾಳೆ!

ಸಂತೋಷ್ ಆನಂದ್ ರಾಮ್, ಹೊಂಬಾಳೆ!

ಸಂತೋಷ್ ಆನಂದ್ ರಾಮ್ ಯಶ್ ನಟನೆಯ 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ಸಿನಿಮಾದ ಮೂಲಕ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ. ಬಳಿಕ ಪುನೀತ್ ರಾಜ್‌ಕುಮಾರ್ ಅಭಿನಯದ 'ರಾಜಕುಮಾರ' ಮತ್ತು ಯುವರತ್ನ ಸಿನಿಮಾಗಳನ್ನು ಮಾಡಿದ್ದಾರೆ. ಇನ್ನು 'ರಾಘವೇಂದ್ರ ಸ್ಟೋರ್ಸ್' ಮತ್ತು ಯುವರಾಜ್‌ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ 4 ಚಿತ್ರಗಳನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದೆ. ಇಷ್ಟೇ ಅಲ್ಲ ಇವರ ಮುಂದಿನ ಸಿನಿಮಾ ಕೂಡ ಹೊಂಬಾಳೆ ಸಂಸ್ಥೆಯೆ ನಿರ್ಮಾಣ ಮಾಡಲಿದೆ.

ಆ ಸರ್ಪ್ರೈಸ್ ಏನು?

ಆ ಸರ್ಪ್ರೈಸ್ ಏನು?

ಸಂತೋಷ್ ಆನಂದ್ ರಾಮ್ ಹುಟ್ಟುಹಬ್ಬಕ್ಕೆ, ನಿರ್ಮಾಪಕ ವಿಜಯ್ ಕಿರಗಂದೂರು ಶುಭಕೋರಿದ್ದಾರೆ. ಇದನ್ನು ರೀ ಟ್ವೀಟ್ ಮಾಡಿರುವ ಸಂತೋಷ್ ಆನಂದ್ ರಾಮ್. "ಧನ್ಯವಾದಗಳು ಅಣ್ಣ, ರಾಘವೇಂದ್ರ ಸ್ಟೋರ್ಸ್, ಯುವ01 ಮತ್ತು ಮುಂದಿನದು ಸರ್ಪ್ರೈಸ್" ಎಂದು ಬರೆದುಕೊಂಡಿದ್ದಾರೆ. ಹಾಗಾಗಿ ಇವರ ಮುಂದಿನ ಸಿನಿಮಾವನ್ನು ಹೊಂಬಾಳೆ ನಿರ್ಮಾಣ ಮಾಡಲಿದೆ ಎನ್ನುವುದು ಖಚಿತ. ಆದರೆ ಸಿನಿಮಾ ಯಾವುದು ಎನ್ನುವ ಸುಳಿವು ಕೊಟ್ಟಿಲ್ಲ. ಮೂಲಗಳ ಮಾಹಿತಿಯಂತೆ ಸಂತೋಷ್ ಆನಂದ್ ರಾಮ್, ಶಿವರಾಜ್‌ಕುಮಾರ್ ಜೊತೆಗೆ ಮಾಡಲಿರುವ ಮುಂದಿನದ ಈ ಟ್ವೀಟ್‌ನಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಯುವರಾಜ್‌ಗೆ ನಿರ್ದೇಶನ!

ಯುವರಾಜ್‌ಗೆ ನಿರ್ದೇಶನ!

ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಅಣಿಯಾಗಿದ್ದಾರೆ. ಮೊದಲ ಸಿನಿಮಾದ ಮೂಲಕ ಜಬರ್‌ದಸ್ತಾಗಿ ಎಂಟ್ರಿ ಕೊಡಲು ತಯರಾಗಿದ್ದಾರೆ. ಯುವ ಮೊದಲ ಸಿನಿಮಾವನ್ನ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಯುವ01 ಎಂದು ಕರೆಯಲಾಗುತ್ತಿದ್ದು, ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇನ್ನೂ ಈ ವರ್ಷ ಅಂತ್ಯದ ವೇಳೆಗೆ ಸಿನಿಮಾ ಶೂಟಂಗ್ ಆರಂಭವಾಗಲಿದೆ.

'ರಾಘವೇಂದ್ರ ಸ್ಟೋರ್ಸ್' ರಿಲೀಸ್!

'ರಾಘವೇಂದ್ರ ಸ್ಟೋರ್ಸ್' ರಿಲೀಸ್!

'ಯುವ 01' ಚಿತ್ರಕ್ಕೂ ಮುನ್ನ, ಸಂತೋಷ್ ಆನಂದ್ ರಾನ್ ನಿರ್ದೇಶನದ ಮತ್ತೊಂದು ಸಿನಿಮಾ ತೆರೆಕಣಬೇಕಿದೆ. ನಟ ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಚಿತ್ರವೂ ರಿಲೀಸ್ ಆಗಬೇಕಿದೆ. ಈಗಾಗಲೇ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ರಾಘವೇಂದ್ರ ಸ್ಟೋರ್ಸ್ ಚಿತ್ರದ ರಿಲೀಸ್ ದಿನಾಂಕವನ್ನು ಈ ಹಿಂದೆಯೇ ಪ್ರಕಟ ಮಾಡಲಾಗಿತ್ತು. ಆದರೆ ಪೋಸ್ಟ್‌ಪೋನ್ ಮಾಡಲಾಗಿದೆ. ಸದ್ಯದಲ್ಲೇ ಈ ಸಿನಿಮಾದ ಹೊಸ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಾಗುತ್ತದೆ.

More from Filmibeat

English summary
Santhosh Ananddram One More Film With Hombale Films, With Shivarajkumar, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X