ಅಪ್ಪು ಟ್ವಿಟರ್ ಖಾತೆಯಿಂದ ನೀಲಿ ಟಿಕ್ ಮಾಯ: ನಿರ್ದೇಶಕ ಸಂತೋಷ್ ಆನಂದ್‌ರಾಮ್ ವಿಶೇಷ ಮನವಿ!
ನಟ ಪುನೀತ್ ರಾಜ್‌ಕುಮಾರ್ ಸಹಸ್ರಾರು ಮನಸ್ಸುಗಳಲ್ಲಿ ಎಂದಿಗೂ, ಎಂದೆಂದಿಗೂ ಜೀವಂತ. ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಇಲ್ಲದೇ ಇರಬಹುದು. ಅದರೆ ಅವರನ್ನು ಪ್ರೀತಿಸುವ ಕೋಟ್ಯಾನು ಕೋಟಿ ಮನಸ್ಸುಗಳಲ್ಲಿ ಅವರು ಎಂದಿಗೂ ಜೀವಂತವಾಗಿ ಅಜರಾಮರವಾಗಿ ಇದ್ದೇ ಇರುತ್ತಾರೆ.
Recommended Video
ಇನ್ನು ಅಪ್ಪು ಬಗ್ಗೆ ನಿತ್ಯವೂ ಒಂದಲ್ಲಾ, ಒಂದು ವಿಚಾರ ಚಾಲ್ತಿಯಲ್ಲಿ ಇರುತ್ತೆ. ಅವರ ಬಗ್ಗೆ ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ಹರಿದಾಡುತ್ತಲೆ ಇರುತ್ತವೆ. ಪುನೀತ್ ರಾಜ್‌ಕುಮಾರ್ ಅವರನ್ನು ಮನಸ್ಸಲ್ಲಿ ಇಟ್ಟು ಪೂಜಿಸುವವರಿಗೆ ಟ್ವಟ್ಟರ್ ಬೇಸರ ತಂದಿದೆ.
ಹೌದು ಕಳೆದ ಎರಡು ದಿದನಗಳಿಂದ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಖಾತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಅಪ್ಪು ಟ್ವಿಟ್ಟರ್ ಖಾತೆಗೆ ಇದ್ದ ಅಧಿಕೃತ ನೀಲಿ ಟಿಕ್ ತೆಗೆದು ಹಾಕಿದ್ದಕ್ಕೆ ಭಾರಿ ಅಸಮಾಧಾನ ವ್ಯಕ್ತವಾಗಿದೆ. ಈಗ ಖ್ಯಾತ ನಿರ್ದೇಶಕ ಸಂತೋಷ್ ಆನಂತ್ ರಾಮ್ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ.

ಅಪ್ಪು ಟ್ವಿಟ್ಟರ್ ಖಾತೆಯ ನೀಲಿ ಟಿಕ್ ಮಾಯ!
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಸುಮಾರು 9 ತಿಂಗಳುಗಳಾಗುತ್ತಿದೆ. ಇನ್ನು ಈಗ ಟ್ವಿಟ್ಟರ್ ತೆಗೆದುಕೊಂಡ ನಿರ್ಧಾರ ಅಪ್ಪು ಅಭಿಮಾನಿಗಳಲ್ಲಿ, ಅಪ್ಪು ಅವರನ್ನು ಪ್ರೀತಿಸುವ ಮನಸ್ಸುಗಳಿಗೆ ಘಾಸಿಗೊಳಿಸಿದೆ. ಇಷ್ಟು ದಿನ ಪುನೀತ್ ರಾಜ್‌ಕುಮಾರ್ ಟ್ವಿಟರ್ ಖಾತೆಯಲ್ಲಿದ್ದ ನೀಲಿ ಟಿಕ್ ಈಗ ಮಾಯವಾಗಿದೆ. ಈ ಬೆಳವಣಿಗೆಯನ್ನು ನೋಡಿ ಪವರ್‌ಸ್ಟಾರ್ ಫ್ಯಾನ್ಸ್ ಮತ್ತಷ್ಟು ನೋವು ಅನುಭವಿಸುವಂತಾಗಿದೆ.

ಸಂತೋಷ್ ಆನಂದ್‌ರಾಮ್ ಮನವಿ!
ಪವರ್ ಸ್ಟಾರ್ ಟ್ವಿಟ್ಟರ್ ಖಾತೆ ಅಧಿಕೃತ ಎಂದು ಸೂಚಿಸುವ ನೀಲಿ ಟಿಕ್ ಮಾಯವಾಗಿದೆ. ಇದನ್ನು ಗಮನಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವಿಟ್ಟರ್ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಇನ್ನಿಲ್ಲ ಎಂದು ಯಾರೂ ಭಾವಿಸಿಲ್ಲ. ಅಧಿಕೃತ ಖಾತೆಗೆ ನೀಡಿದ್ದ ಧೃಡೀಕರಣದ ನೀಲಿ ಚಿನ್ಹೆಯನ್ನು ಮತ್ತೆ ಹಾಕಿ ಎಂದು ಟ್ವೀಟ್ ಮಾಡುವ ಮೂಲಕವೇ ಮನವಿ ಮಾಡಿದ್ದಾರೆ.
ಅಪ್ಪು ಎಂದಿಗೂ ಜೀವಂತ-ಸಂತೋಷ್ ಆನಂದ್‌ರಾಮ್!
ಟ್ವಿಟ್ಟರ್ ಸಂಸ್ಥೆಗೆ ಮನವಿ.. ದಯವಿಟ್ಟು ಪುನೀತ್ ರಾಜ್‌ಕುಮಾರ್ ಸರ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಮತ್ತೊಮ್ಮೆ ಧೃಢೀಕರಿಸಿ. ಅವರು ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರು ಇನ್ನಿಲ್ಲ ಎಂದು ಯಾರು ಭಾವಿಸಿಲ್ಲ. ಇವತ್ತಿನವರೆಗೂ ನನ್ನನ್ನೂ ಸೇರಿದಂತೆ, ಹಲವರು ಅವರಿಗೆ ಸಂಬಂಧ ಪಟ್ಟ ಪೋಸ್ಟ್‌ಗಳಿಗೆ ಅವರ ಖಾಗೆಯನ್ನು ಟ್ಯಾಗ್ ಮಾಡುತ್ತಿದ್ದೇವೆ." ಎಂದು ಬರೆದುಕೊಂಡಿದ್ದಾರೆ.

ಅಪ್ಪುಗಾಗಿ ಅಭಿಯಾನ ಶುರು!
ಪುನೀತ್ ರಾಜ್‌ಕುಮಾರ್‌ಗಾಗಿ ಅಭಿಮಾನಿಗಳು ಅಭಿಯಾನವನ್ನೇ ಶುರು ಮಾಡಿದ್ದಾರೆ. #ReverifyPuneethRajkumarTwitter ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಶುರು ಮಾಡಿದ್ದಾರೆ. ಈ ಟ್ಯಾಗ್ ಈಗ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಹುಟ್ಟು ಹಾಕುತ್ತಿದೆ. ಇಷ್ಟೇ ಆದ ಬಳಿಕ, ಟ್ವಿಟ್ಟರ್ ಮುಂದೆ ಯಾವ ಹೆಜ್ಜೆ ಇಡುತ್ತದೆ ಎನ್ನವುದನ್ನು ನೋಡಬೇಕಿದೆ. ಮನವಿಗೆ ಮಣಿದು ನೀಲ್ ಟಿಕ್ ಮತ್ತೆ ಅವಳಡಿಸುತ್ತಾ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











