'ಯುವರತ್ನ' ಸಿನಿಮಾದಲ್ಲಿ 'ಓಂ' ಸತ್ಯ ಪ್ರತ್ಯಕ್ಷ

'ಯುವರತ್ನ' ಮತ್ತು 'ಓಂ' ಸಿನಿಮಾಗೆ ಯಾವುದೇ ಸಂಬಂಧ ಇಲ್ಲ. ಆದರೆ, ಈಗ 'ಯುವರತ್ನ'ನ ಅಡ್ಡದಲ್ಲಿ 'ಓಂ' ಸತ್ಯನ ಆಗಮನ ಆಗಿದೆ.

'ಓಂ' ಸತ್ಯ ಎಂದ ತಕ್ಷಣ ಶಿವರಾಜ್ ಕುಮಾರ್ 'ಯುವರತ್ನ' ಸಿನಿಮಾದಲ್ಲಿ ನಟಿಸುತ್ತಿದ್ದಾರೆಯೇ ಎನ್ನುವ ಕುತೂಹಲ ಮೂಡುತ್ತದೆ. ಆದರೆ, ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿಲ್ಲ. ಅದರ ಬದಲಿಗೆ ಅವರ ಸತ್ಯ ಪಾತ್ರದ ಪೋಸ್ಟರ್ ಗಳು ಬಂದು ಹೋಗುತ್ತದೆ.

'ಯುವರತ್ನ' ಸಿನಿಮಾ ಚಿತ್ರೀಕರಣದ ಫೋಟೋವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಂಚಿಕೊಂಡಿದ್ದಾರೆ. ಚಿತ್ರದ ಸೆಟ್ ನೋಡಿದರೆ, ಇದು ಚಿತ್ರಮಂದಿರದ ಸೆಟಪ್ ಆಗಿರಬಹುದು ಎನಿಸುತ್ತದೆ. 'ಯುವರತ್ನ' ಸಿನಿಮಾದಲ್ಲಿ ಪುನೀತ್ ಕಾಲೇಜ್ ಹುಡುಗನ ಪಾತ್ರ ಮಾಡುತ್ತಿದ್ದಾರೆ. ಕಾಲೇಜ್ ಹುಡುಗ ಎಂದ ಮೇಲೆ ಸಿನಿಮಾ ನೋಡುವುದು ಕಾಮನ್. ಸೋ, ಚಿತ್ರದಲ್ಲಿ ಅಪ್ಪು ಚಿತ್ರಮಂದಿರಕ್ಕೆ ಬರುವ ದೃಶ್ಯ ಇದಾಗಿರಬಹುದು.

Santhosh Ananddram Shared Yuvaratna Kannada Movie Making Photo

'ಅಪ್ಪು' ಚಿತ್ರದಲ್ಲಿ ಕಾಲೇಜ್ ವಿದ್ಯಾರ್ಥಿ ಪಾತ್ರ ಮಾಡಿದ್ದ ಪುನೀತ್ ಅಮ್ಮನ ಬಳಿ ದುಡ್ಡು ಪಡೆದ ರಾಜ್ ಕುಮಾರ್ ಸಿನಿಮಾ ನೋಡಲು ಹೋಗಿರುತ್ತಾರೆ. ಈಗ ಅದೇ ರೀತಿಯ ದೃಶ್ಯ ಇಲ್ಲಿಯೂ ಬಂದಿರಬಹುದು. ಆಗ ಅಪ್ಪನ ಸಿನಿಮಾ ನೋಡಿದ್ದ ಅಪ್ಪು ಈಗ ಅಣ್ಣನ ಸಿನಿಮಾ ನೋಡುತ್ತಿದ್ದಾರೆ.

ಅಂದಹಾಗೆ, 'ಯುವರತ್ನ' ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿದೆ. ಸಯ್ಯೇಶಾ ಚಿತ್ರದ ನಾಯಕಿಯಾಗಿದ್ದಾರೆ.

More from Filmibeat

English summary
Director Santhosh Ananddram shared 'Yuvaratna' Kannada movie-making photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X