'ಯುವರತ್ನ' ಬಿಡುಗಡೆ ಯಾವಾಗ?, ಉತ್ತರ ನೀಡಿದ ಸಂತೋಷ್
'ಕುರುಕ್ಷೇತ್ರ' ಬಂತು, 'ಪೈಲ್ವಾನ್' ಬಂತು, ಮುಂದೆ 'ಯುವರತ್ನ' ಸಿನಿಮಾ ಯಾವಾಗ? ಎನ್ನುವದು ಚಿತ್ರ ಪ್ರೇಮಿಗಳ ಪ್ರಶ್ನೆ. ಈ ಪ್ರಶ್ನೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಉತ್ತರ ನೀಡಿದ್ದಾರೆ.
'ಯುವರತ್ನ' ಸಿನಿಮಾ ಡಿಸೆಂಬರ್ ಕೊನೆಯಲ್ಲಿ ಅಥವಾ ಜನವರಿ ಪ್ರಾರಂಭದಲ್ಲಿ ರಿಲೀಸ್ ಆಗಲಿದೆ. ಇದುವರೆಗೆ 70 ದಿನದ ಚಿತ್ರೀಕರಣ ಆಗಿದೆ. ಇನ್ನು 35 ರಿಂದ 40 ದಿನಗಳ ಶೂಟಿಂಗ್ ಬಾಕಿ ಇದೆ. 4 ಹಾಡುಗಳು ಚಿತ್ರೀಕರಣ, ಒಂದು ಚೆಸ್ಸಿಂಗ್ ಸೀನ್ ಹಾಗೂ ಪುನೀತ್ - ಧನಂಜಯ್ ನಡುವಿನ ಫೈಟ್ ದೃಶ್ಯಗಳು ಇನ್ನು ಶೂಟಿಂಗ್ ಆಗಬೇಕಿದೆ. ಇದರ ಜೊತೆಗೆ 15 ದಿನದ ಸಣ್ಣ ಪುಟ್ಟ ದೃಶ್ಯಗಳ ಚಿತ್ರೀಕರಣ ಮಾಡಬೇಕಿದೆ.
ಸಿನಿಮಾದ ಕಲಾವಿದರ ಸಂಖ್ಯೆ ಹೆಚ್ಚಿದ್ದು, ಇದು ಚಿತ್ರೀಕರಣಕ್ಕೆ ದೊಡ್ಡ ಸವಾಲು ಆಗಿದೆ. ಮೂರು ಕಾಲೇಜುಗಳಲ್ಲಿ ಶೂಟಿಂಗ್ ನಡೆಯುತ್ತಿದ್ದು, ಇದೆಲ್ಲದರಿಂದ ಸಮಯ ಹಿಡಿಯುತ್ತಿದೆಯಂತೆ. ದೊಡ್ಡ ಸಿನಿಮಾ ಆಗಿರುವ ಕಾರಣ ಚಿತ್ರೀಕರಣದ ಸಮಯ ಕೂಡ ಹೆಚ್ಚಾಗುತ್ತಿದೆ.

''ಅಭಿಮಾನಿಗಳು ಸಿನಿಮಾಗಾಗಿ ಒತ್ತಾಯ ಮಾಡುತ್ತಿದ್ದಾರೆ. ಅದಷ್ಟು ಬೇಗ ಸಿನಿಮಾ ನೋಡಬೇಕು ಎನ್ನುವುದು ಅವರ ಆಸೆ. ಆದರೆ, ಬೇಗ ಬಿಡುಗಡೆ ಮಾಡಬೇಕು ಎನ್ನುವ ಕಾರಣ ಆತುರದಲ್ಲಿ ಸಿನಿಮಾ ಮಾಡುವುದಿಲ್ಲ. ಚಿತ್ರದ ಕ್ವಾಲಿಟಿ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ.'' ಎಂದು ನಿರ್ದೇಶಕ ಸಂತೋಷ್ ಹೇಳಿದ್ದಾರೆ.
'ಯುವರತ್ನ' ಹೊಂಬಾಳೆ ಫಿಲ್ಮ್ಸ್ ನಲ್ಲಿ ನಿರ್ಮಾಣ ಆಗಿರುವ ಸಿನಿಮಾ. ಪುನೀತ್ ರಾಜ್ ಕುಮಾರ್ ಹಾಗೂ ಸುಯೇಶಾ ಸೈಗಲ್ ಸಿನಿಮಾದ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.


Click it and Unblock the Notifications











