ಹೊಂಬಾಳೆ ಫಿಲ್ಮ್ಸ್ ನಲ್ಲಿ ಮತ್ತೆರಡು ಸಿನಿಮಾ ಮಾಡ್ತಾರೆ ಸಂತೋಷ್
Recommended Video

ಹೊಂಬಾಳೆ ಫಿಲ್ಮ್ಸ್ ನಲ್ಲಿ ಇನ್ನೂ ಎರಡು ಸಿನಿಮಾಗಳನ್ನ ಮಾಡಲಿದ್ದಾರೆ ಸಂತೋಷ್ ಆನಂದ್ ರಾಮ್ | Oneindia Kannada
ನಿರ್ದೇಶಕ ಸಂತೋಷ್ ಆನಂದ್ ರಾಮ್ ಕನ್ನಡದ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ಮಾಡಿರೋದು ಎರಡೇ ಸಿನಿಮಾಗಳಾದರೂ ಎರಡೂ ಸಿನಿಮಾಗಳು ಸೂಪರ್ ಹಿಟ್ ಆದ ಖ್ಯಾತಿ ಅವರಿಗಿದೆ.
ಅಂದಹಾಗೆ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಗೂ 'ರಾಜಕುಮಾರ' ಸಿನಿಮಾದ ನಂತರ ಸಂತೋಷ್ ಆನಂದ್ ರಾಮ್ ಹೊಸ ಸಿನಿಮಾ ಶುರು ಮಾಡಿದ್ದಾರೆ. ಪುನೀತ್ ಹಾಗೂ ಸಂತೋಷ್ ಹೊಸ ಚಿತ್ರಕ್ಕೆ 'ಯುವರತ್ನ' ಎಂಬ ಹೆಸರು ಫಿಕ್ಸ್ ಆಗಿದೆ.
ಅಂದಹಾಗೆ, ಈ ಸಿನಿಮಾದ ನಂತರ ಸಂತೋಷ್ ಮತ್ತೆರಡು ಚಿತ್ರಗಳನ್ನು ಮಾಡುತ್ತಾರೆ. ವಿಶೇಷ ಅಂದರೆ, ಆ ಸಿನಿಮಾಗಳು ಕೂಡ ಹೊಂಬಾಳೆ ಫಿಲ್ಮ್ಸ್ ನಲ್ಲಿ ನಿರ್ಮಾಣ ಆಗಲಿದೆಯಂತೆ. ಈಗಾಗಲೇ ಹೊಂಬಾಳೆ ಬ್ಯಾನರ್ ನ 'ರಾಜಕುಮಾರ' ಹಾಗೂ 'ಯುವರತ್ನ' ಚಿತ್ರಗಳಿಗೆ ಸಂತೋಷ್ ನಿರ್ದೇಶನವಿದೆ.

'ಯುವರತ್ನ' ಸಿನಿಮಾ ನಂತರ ಕೂಡ ಸಂತೋಷ್ ಆನಂದ್ ರಾಮ್ ಹೊಂಬಾಳೆ ಬ್ಯಾನರ್ ಜೋಡಿಯ ಸಿನಿಮಾಗಳು ಮುಂದುವರೆದಿದೆ. ನಿರ್ದೇಶಕ, ನಿರ್ಮಾಪಕ ಎನ್ನುವುದಕ್ಕಿಂತ ಇಬ್ಬರ ನಡುವೆ ಒಳ್ಳೆಯ ಅನುಬಂಧ ಇದೆ.
More from Filmibeat
English summary
Kannada director Santhosh Ananddram will be directing another two movies to Hombale Films.
yuvaratna puneeth rajkumar santhosh ananddram sandalwood ಯುವರತ್ನ ಪುನೀತ್ ರಾಜ್ ಕುಮಾರ್ ಸಂತೋಷ್ ಆನಂದ್ ರಾಮ್ ಸ್ಯಾಂಡಲ್ ವುಡ್


Click it and Unblock the Notifications











