For Quick Alerts
  ALLOW NOTIFICATIONS  
  For Daily Alerts

  ಮೂರನೇ ಬಾರಿ ಒಂದಾದ ಪುನೀತ್-ಸಂತೋಶ್: ಚಿತ್ರೀಕರಣ ಆರಂಭ ಯಾವಾಗ?

  By ಫಿಲ್ಮಿಬೀಟ್ ಡೆಸ್ಕ್
  |

  ನಟ ಪುನೀತ್ ರಾಜ್‌ಕುಮಾರ್, ನಿರ್ದೇಶಕ ಸಂತೋಶ್ ಆನಂದ್ ಅವರುಗಳು ಮೂರನೇ ಬಾರಿ ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆ. ಈ ಹಿಂದೆ ಎರಡು ಸೂಪರ್ ಹಿಟ್ ಸಿನಿಮಾ ನೀಡಿರುವ ಈ ಜೋಡಿಯ ಮೂರನೇ ಸಿನಿಮಾದ ಬಗ್ಗೆ ಈಗಾಗಲೇ ಕುತೂಹಲ ಆರಂಭವಾಗಿದೆ.

  ಇದೆ ನನ್ನ ಮುಂದಿನ ಚಿತ್ರ ಎಂದ ಸಂತೋಷ್ ಆನಂದ್ ರಾಮ್

  ಈ ಹಿಂದೆ ಸಂತೋಶ್ ಆನಂದ್‌ ರಾಮ್ ಪುನೀತ್ ರಾಜ್‌ಕುಮಾರ್‌ಗಾಗಿ 'ರಾಜಕುಮಾರ' ಸಿನಿಮಾ ನಿರ್ದೇಶಿಸಿದ್ದರು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಅದರ ಬಳಿಕ ಮತ್ತೆ 'ಯುವರತ್ನ' ಸಿನಿಮಾ ನಿರ್ದೇಶನ ಮಾಡಿದರು. ಆ ಸಿನಿಮಾ ಕೊರೊನಾ ಕಾರಣಕ್ಕೆ ಹಲವು ಅಡೆ-ತಡೆ ಅನುಭವಿಸಿತಾದರೂ ಸಿನಿಮಾ ಹಿಟ್ ಆಯಿತು. ಹಾಗಾಗಿ ಈ ಜೋಡಿ ಈಗ ಮತ್ತೆ ಒಂದಾಗಿದೆ.

  ಈ ಹಿಂದೆ ಸಂತೋಶ್ ಆನಂದ್‌ ರಾಮ್ ಹಾಗೂ ಪುನೀತ್ ಒಟ್ಟಿಗೆ ನಟಿಸಿದ್ದ ಎರಡೂ ಸಿನಿಮಾಗಳನ್ನು ಹೊಂಬಾಳೆ ಫಿಲಮ್ಸ್‌ನ ವಿಜಯ್ ಕಿರಗಂದೂರು ಅವರೇ ನಿರ್ಮಾಣ ಮಾಡಿದ್ದರು. ಇದೀಗ ಈ ನಿರ್ದೇಶಕ-ನಟ ಜೋಡಿಯ ಮೂರನೇ ಸಿನಿಮಾವನ್ನು ಸಹ ವಿಜಯ್ ಕಿರಗಂದೂರು ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಮ್ಸ್ ಮೂಲಕವೇ ಈ ಸಿನಿಮಾ ಹೊರಗೆ ಬರಲಿದೆ.

  ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ

  ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ

  ತಮ್ಮ ಹಾಗೂ ಪುನೀತ್ ರಾಜ್‌ಕುಮಾರ್‌ರ ಮುಂದಿನ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಸಂತೋಶ್ ಆನಂದ್‌ರಾಮ್, ''ನನ್ನ ಹಾಗೂ ಪುನೀತ್ ನಟನೆಯ ಸಿನಿಮಾ ಮುಂದಿನ ವರ್ಷಾರಂಭದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ'' ಎಂದಿದ್ದಾರೆ. ನಿಮ್ಮ ಪ್ರೀತಿ, ಅಭಿಮಾನ ಹೀಗೆಯೇ ನಮ್ಮ ಮೇಲೆ ಮುಂದುವರೆಯಲಿ'' ಎಂದು ಸಂತೋಶ್ ಆನಂದ್‌ರಾಮ್ ಹೇಳಿದ್ದಾರೆ.

  ಪುನೀತ್‌ ನಟನೆಯ ಹಲವು ಸಿನಿಮಾ ನಿರ್ಮಿಸಿರುವ ಹೊಂಬಾಳೆ

  ಪುನೀತ್‌ ನಟನೆಯ ಹಲವು ಸಿನಿಮಾ ನಿರ್ಮಿಸಿರುವ ಹೊಂಬಾಳೆ

  ಸಂತೋಶ್ ಆನಂದ್‌ರಾಮ್ ಹಾಗೂ ಪುನೀತ್ ನಟನೆಯ 'ರಾಜಕುಮಾರ' ಹಾಗೂ 'ಯುವರತ್ನ' ಸಿನಿಮಾಗಳನ್ನು ಹೊಂಬಾಳೆ ಫಿಲಮ್ಸ್ ಅವರೇ ನಿರ್ಮಾಣ ಮಾಡಿದ್ದರು. ಅಲ್ಲದೆ ಪುನೀತ್ ನಟನೆಯ 'ನಿನಗಾಗಿ' ಸಿನಿಮಾವನ್ನು ಸಹ ಹೊಂಬಾಳೆ ಫಿಲಮ್ಸ್ ಅವರೇ ನಿರ್ಮಾಣ ಮಾಡಿದ್ದರು. ಅದು ಆ ಬ್ಯಾನರ್‌ನ ಮೊತ್ತ ಮೊದಲ ಸಿನಿಮಾ ಆಗಿತ್ತು. ಮೊದಲಿನಿಂದಲೂ ಹೊಂಬಾಳೆ ಫಿಲಮ್ಸ್ ಹಾಗೂ ಪುನೀತ್ ನಡುವೆ ಒಳ್ಳೆಯ ಬಾಂದವ್ಯವಿದೆ.

  ಹಲವು ಸಿನಿಮಾಗಳಲ್ಲಿ ಪುನೀತ್ ಬ್ಯುಸಿ

  ಹಲವು ಸಿನಿಮಾಗಳಲ್ಲಿ ಪುನೀತ್ ಬ್ಯುಸಿ

  ಪುನೀತ್ ರಾಜ್‌ಕುಮಾರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚೇತನ್ ಕುಮಾರ್ ನಿರ್ದೇಶಿಸುತ್ತಿರುವ 'ಜೇಮ್ಸ್' ಸಿನಿಮಾದಲ್ಲಿ ಪುನೀತ್ ನಟಿಸುತ್ತಿದ್ದಾರೆ. ಅದರ ಬಳಿಕ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಲಿರುವ 'ದ್ವಿತ್ವ' ಸಿನಿಮಾದಲ್ಲಿ ಪುನೀತ್ ನಟಿಸಲಿದ್ದಾರೆ. ಈ ಸಿನಿಮಾವನ್ನೂ ಸಹ ಹೊಂಬಾಳೆ ಫಿಲಮ್ಸ್‌ನವರೇ ನಿರ್ಮಾಣ ಮಾಡುತ್ತಿದ್ದಾರೆ. ಅದರ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಬಳಿಕ ಸಂತೋಶ್ ಆನಂದ್‌ರಾಮ್ ಜೊತೆಗಿನ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಅಥವಾ ಸಂತೋಶ್ ಆನಂದ್‌ರಾಮ್ ಸಿನಿಮಾದ ಬಳಿಕ ದಿನಕರ್ ತೂಗುದೀಪ್ ಜೊತೆ ಸಿನಿಮಾ ಮಾಡಲಿದ್ದಾರೆ ಪುನೀತ್.

  ಸಂತೋಶ್ ಆನಂದ್‌ರಾಮ್ ನಿರ್ದೇಶನದ ಸಿನಿಮಾಗಳು

  ಸಂತೋಶ್ ಆನಂದ್‌ರಾಮ್ ನಿರ್ದೇಶನದ ಸಿನಿಮಾಗಳು

  ಇನ್ನು ಸಂತೋಶ್ ಆನಂದ್‌ರಾಮ್ ಈವರೆಗೆ ನಿರ್ದೇಶನ ಮಾಡಿರುವುದು ಮೂರು ಸಿನಿಮಾಗಳಷ್ಟೆ. ಅದರಲ್ಲಿ ಎರಡು ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್ ನಾಯಕ ನಟ. ಸಂತೋಶ್ ಆನಂದ್‌ರಾಮ್ ನಿರ್ದೇಶನ ಮಾಡಿದ ಮೊದಲ ಸಿನಿಮಾ ಯಶ್ ಮತ್ತು ರಾಧಿಕಾ ಪಂಡಿತ್ ನಟನೆಯ 'ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ'. ಆ ಸಿನಿಮಾದ ಬಳಿಕ ಪುನೀತ್ ರಾಜ್‌ಕುಮಾರ್ ಜೊತೆಗೆ 'ರಾಜಕುಮಾರ' ಸಿನಿಮಾ ಮಾಡಿದರು. ಅದರ ಬಳಿಕ, 'ಯುವರತ್ನ' ಸಿನಿಮಾ ನಿರ್ದೇಶನ ಮಾಡಿದರು. 'ಯುವರತ್ನ' ಸಿನಿಮಾ ಬಿಡುಗಡೆ ಆದ ಎರಡೇ ದಿನದಲ್ಲಿ ಸರ್ಕಾರವು ಚಿತ್ರಮಂದಿರದ ಮೇಲೆ ಲಾಕ್‌ಡೌನ್ ಹೇರಿತ್ತು. ಆಗ ಪುನೀತ್ ರಾಜ್‌ಕುಮಾರ್, ಸಿಎಂ ಯಡಿಯೂರಪ್ಪ ಅವರನ್ನು ಮನವಿ ಮಾಡಿಕೊಂಡು ಇನ್ನೂ ಕೆಲವು ದಿನ ಚಿತ್ರಮಂದಿರಗಳು ತೆರೆದಿರುವಂತೆ ಮಾಡಿದ್ದರು. ನಂತರ ಆ ಸಿನಿಮಾವನ್ನು ಅಮೆಜಾನ್ ಪ್ರೈಂಗೆ ಮಾರಾಟ ಮಾಡಲಾಯ್ತು.

  English summary
  Director Santhosh Anandram and Puneeth Rajkumar's new movie shooting will start early next year. Santhosh Anandram and Puneeth collaborating for third time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X