ಅಕ್ಕ ಪಕ್ಕದ ಚಿತ್ರಮಂದಿರಗಳಲ್ಲಿ ಸುದೀಪ್, ದರ್ಶನ್ ಸಿನಿಮಾಗಳು

Recommended Video

ಅಕ್ಕ ಪಕ್ಕದ ಚಿತ್ರಮಂದಿರಗಳಲ್ಲಿ ಸುದೀಪ್, ದರ್ಶನ್ ಸಿನಿಮಾಗಳು | FILMIBEAT KANNADA

'ಪೈಲ್ವಾನ್' ಸಿನಿಮಾ ಇದೇ ಗುರುವಾರ (ಸಪ್ಟೆಂಬರ್ 12) ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರಮಂದಿರಗಳ ಪಟ್ಟಿ ಅಧಿಕೃತವಾಗಿ ಹೊರಬಂದಿದೆ. ವಿಶೇಷ ಅಂದರೆ, ಗಾಂಧಿನಗರದ ಅಕ್ಕ ಪಕ್ಕದ ಚಿತ್ರಮಂದಿರಗಳಲ್ಲಿ ಸುದೀಪ್ ಹಾಗೂ ದರ್ಶನ್ ಸಿನಿಮಾಗಳು ರಿಲೀಸ್ ಆಗುತ್ತಿವೆ.

ಗಾಂಧಿನಗರದ ಸಂತೋಷ್, ನರ್ತಕಿ ಹಾಗೂ ಸ್ವಪ್ನ ಚಿತ್ರಮಂದಿರಗಳು ಅಂಟಿಕೊಂಡೆ ಇವೆ. ಇವುಗಳಲ್ಲಿ ಸಂತೋಷ್ 'ಪೈಲ್ವಾನ್'ಗೆ ಸಿಕ್ಕ ಮುಖ್ಯ ಚಿತ್ರಮಂದಿರವಾಗಿದೆ. ಆದರೆ, ಅದರ ಪಕ್ಕದಲ್ಲಿಯೇ ಇರುವ ನರ್ತಕಿ ಚಿತ್ರಮಂದಿರದಲ್ಲಿ 'ಕುರುಕ್ಷೇತ್ರ' ಸಿನಿಮಾ ಪ್ರದರ್ಶನ ಆಗುತ್ತಿದೆ.

ದರ್ಶನ್ ಅದೃಷ್ಟದ ಥಿಯೇಟರ್ ಆಗಿರುವ ನರ್ತಕಿಯಲ್ಲಿ ಬಿಡುಗಡೆಯಾದ 'ಕುರುಕ್ಷೇತ್ರ' 25 ದಿನಗಳನ್ನು ಪೂರೈಸಿ ಮುನ್ನುಗುತ್ತಿದೆ. ಆಗಸ್ಟ್ 9 ರಂದು ಈ ಸಿನಿಮಾ ರಾಜ್ಯಾದಂತ್ಯ ಬಿಡುಗಡೆ ಆಗಿತ್ತು.

Santhosh Is The Main Theatre For Pailwan Kannada Movie

ದರ್ಶನ್ ಮತ್ತು ಸುದೀಪ್ ನಡುವೆ ಮುನಿಸು ಈಗಲೂ ಮುಂದುವರೆದಿದೆ. ಇದರ ಪರಿಣಾಮ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕೋಳಿ ಜಗಳ ಮಾಡುತ್ತಾರೆ. ಇನ್ನು ಅಕ್ಕ ಅಕ್ಕದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು ಒಳಿತು.

ಅಂದಹಾಗೆ, ಸುದೀಪ್ ಹಾಗೂ ಆಕಾಂಕ್ಷ ಸಿಂಗ್ ಅಭಿನಯದ 'ಪೈಲ್ವಾನ್' ಸಿನಿಮಾ ಬೆಂಗಳೂರಿನ 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಮೊದಲ ಶೋ ಬೆಳಗ್ಗೆ 5 ಗಂಟೆಗೆ ಪ್ರಾರಂಭ ಆಗುತ್ತಿದೆ. ಈ ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Santhosh is main theatre for Sudeep's 'Pailwan' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X