ಕೆಜಿಎಫ್ ಬಳಿಕ ಯಶ್ ನಟನೆಯ ಇನ್ನೊಂದು ಚಿತ್ರ ತಮಿಳಿನಲ್ಲಿ ರಿಲೀಸ್
Recommended Video
ಕೆಜಿಎಫ್ ಸಿನಿಮಾದ ಬಳಿಕ ಯಶ್ ಅವರ ಖ್ಯಾತಿ ವಿಶಾಲ ಭಾರತಕ್ಕೆ ವಿಸ್ತರಿಸಿದೆ. ಇಷ್ಟು ದಿನ ಕನ್ನಡದಲ್ಲಿ ಮಾತ್ರ ಮಿಂಚುತ್ತಿದ್ದ ಯಶ್, ಕೆಜಿಎಫ್ ಬಳಿಕ ಬಹುಭಾಷೆಯಲ್ಲೂ ಸೌಂಡ್ ಮಾಡ್ತಿದ್ದಾರೆ.
ಸದ್ಯ, ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಬ್ಯುಸಿಯಿದ್ದು, ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರಲಿದೆ. ಚಾಪ್ಟರ್ 2 ಬಳಿಕ ಯಶ್ ಅವರು ಇಮೇಜ್ ಮತ್ತಷ್ಟು ಎತ್ತರಕ್ಕೆ ಹೋಗುವುರದಲ್ಲಿ ಯಾವುದೇ ಸಂಶಯವಿಲ್ಲ.

ಕೆಜಿಎಫ್ 2 ಬರುವವರೆಗೂ ಯಶ್ ಯಾವ ಚಿತ್ರವನ್ನು ಮಾಡುತ್ತಿಲ್ಲ. ಆದರೂ ತಮಿಳಿನಲ್ಲಿ ಯಶ್ ನಟನೆಯ ಚಿತ್ರವೊಂದು ರಿಲೀಸ್ ಆಗುತ್ತಿದೆ. ಹೌದು, ರಾಕಿ ಭಾಯ್ ನಟನೆಯ 'ಸಂತು ಸ್ಟ್ರೈಟ್ ಫಾರ್ವಾಡ್' ಸಿನಿಮಾ ತಮಿಳಿನಲ್ಲಿ ಡಬ್ ಆಗಿದ್ದು, ಸೂರ್ಯವಂಶಿ ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ.
2016ರಲ್ಲಿ ತೆರೆಕಂಡಿದ್ದ 'ಸಂತು ಸ್ಟ್ರೈಟ್ ಫಾರ್ವಾಡ್' ಚಿತ್ರವನ್ನು ಕೆ ಮಂಜು ನಿರ್ಮಾಣ ಮಾಡಿದ್ದರು. ಮಹೇಶ್ ರಾವ್ ನಿರ್ದೇಶನವಿತ್ತು. ಯಶ್, ರಾಧಿಕಾ ಪಂಡಿತ್ ನಟಿಸಿದ್ದರು. ಯಶ್ ಮತ್ತು ರಾಧಿಕಾ ಮದುವೆಗೆ ಮುಂಚೆ ಈ ಸಿನಿಮಾದಲ್ಲಿ ನಟಿಸಿದ್ದರು.
ಮತ್ತೊಂದೆಡೆ ಕೆಜಿಎಫ್ ಚಾಪ್ಟರ್ 2 ಮುಗಿದ ತಕ್ಷಣ, ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಜೊತೆಯಲ್ಲಿ ಜನಗಣಮನ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಆದರೆ, ಈ ಸುದ್ದಿ ಬಗ್ಗೆ ಎರಡು ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications











