ಆಕೆಯ ದೇಹ.. ಆಕೆಯ ದೇವರು.. ಕೇಳಲು ನೀನ್ಯಾರು? ಸಾನ್ವಿ ಸುದೀಪ್ ಬೆಂಬಲಕ್ಕೆ ಚಕ್ರವರ್ತಿ ಚಂದ್ರಚೂಡ್

ನಟ ಕಿಚ್ಚ ಸುದೀಪ್ ಪುತ್ರಿ ತಮ್ಮ ಬೆನ್ನಿನ ಮೇಲೆ ಗಣೇಶ ಮೂರ್ತಿ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವುದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ದೇವರ ಚಿತ್ರವನ್ನು ಬೆನ್ನಿನ ಮೇಲೆ ಹಾಕಿಸಿಕೊಳ್ಳುವುದು ಸರಿಯಲ್ಲ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆದರೆ ಸಾನ್ವಿ ಪರ ಅಭಿಮಾನಿಗಳು ನಿಂತಿದ್ದಾರೆ.

ಸಾನ್ವಿ ಟ್ಯಾಟೂ ಹಾಕಿಸಿಕೊಂಡ ಬಗ್ಗೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇದೇ ವಿಚಾರದ ಬಗ್ಗೆ ಸುದೀಪ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಪ್ರತಿಕ್ರಿಯಿಸಿದ್ದಾರೆ. "ಆಕೆಯ ದೇಹ.. ಆಕೆಯ ದೇವರು.. ಕೇಳಲು ನೀನ್ಯಾರು?" ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಕಾಮೆಂಟ್ ಮಾಡಿದ್ದಾರೆ.

Sanvi Sudeep ss Ganesh Tattoo Sparks Debate Chakravarthy Chandrachud Slams Trolls

"ದೇವರು ಎಂಬುದೇ ಅತ್ಯಂತ ಖಾಸಗಿ ಅದು ಅಂತರಂಗ ಸಾರ್ವಜನಿಕ ಅಲ್ಲ. ಎಲ್ಲಾದರೂ ಹಾಕಿಸಿಕೊಳ್ಳುತ್ತಾಳೆ. ಶಕ್ತಿಪೀಠಗಳಲ್ಲಿ ಶಿವೆಯ ಯೋನಿಗೆ ಪೂಜಿಸುವುದು ಅಂತರ್ಯದ ಭಕ್ತಿ. ಅದನ್ನು ಕೇಳಲು ನೀನು ಯಾರು?" ಎಂದು ಚಕ್ರವರ್ತಿ ಚಂದ್ರಚೂಡ್ ಕಿಡಿ ಕಾರಿದ್ದಾರೆ.

ಅಕ್ಕ ಮಹಾದೇವಿಯನ್ನು ಶಾಂಪೂ ಜಾಹಿರಾತು ಎಂದು ಕೊಳ್ಳುವ ನೀನು ನಿನ್ನಂಥವರಿಗೆ ಎಲ್ಲಿ ದೇವರು ಕಂಡರೂ ಕೈ ಮುಗಿಯುವುದನ್ನು ನಿನ್ನ ಧರ್ಮ ಇನ್ನು ಕಲಿಸಿಲ್ಲವೇ... ಪಕ್ಕದಲ್ಲಿದ್ದ ಪತ್ನಿಯ ಕುಚಗಳನ್ನೇ ಶಿವಲಿಂಗ ಎಂದು ನಂಬಿ ಪೂಜಿಸಿದರೆ ಪರಮ ಭಕ್ತಿ ನಿನಗೆ ನಿನ್ನಂಥವರ ಅರಿವಿನಿಂದ ಬಲು ದೂರ ಎಂದು ಚಕ್ರವರ್ತಿ ಚಂದ್ರಚೂಡ್ ಬರೆದುಕೊಂಡಿದ್ದಾರೆ. ಗಾಯಕಿ ಸುಹಾನಾ ಸೈಯದ್ ಸೇರಿ ಸಾಕಷ್ಟು ಜನ ಈ ಪೋಸ್ಟ್‌ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಎರಡು ದಿನಗಳ ಹಿಂದೆ ಹೈದರಾಬಾದ್ ಏಲಿಯನ್ಸ್ ಟ್ಯಾಟೂ ಇಂಡಿಯಾ ಸ್ಟುಡಿಯೋದಲ್ಲಿ ಸಾನ್ವಿ ಸುದೀಪ್ ಈ ಟ್ಯಾಟೂ ಹಾಕಿಸಿಕೊಂಡಿದ್ದರು. ಈ ಬಗ್ಗೆ ವೀಡಿಯೋ ಮಾಡಿ ಮಾತನಾಡಿ 8 ಗಂಟೆಗಳ ಕಾಲ ಈ ಟ್ಯಾಟೂ ಹಾಕಲಾಯಿತು. ಪ್ರಶಸ್ತಿ ವಿತೇತ ಟ್ಯಾಟೂ ಆರ್ಟಿಸ್ಟ್ ಬಹಳ ತಾಳ್ಮೆಯಿಂದ ಟ್ಯಾಟೂ ಹಾಕಿದ್ರು ಎಂದು ಹೇಳಿದ್ದರು. ಕೊನೆಗೆ ಕನ್ನಡಿಯಲ್ಲಿ ಹಿಂದೆ ತಿರುಗಿ ನಿಂತು ಗಣೇಶನ ಚಿತ್ರ ಸುಂದರವಾಗಿ ಬೆನ್ನಿನ ಮೇಲೆ ಟ್ಯಾಟೂ ರೂಪದಲ್ಲಿ ಮೂಡಿ ಬಂದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

ನಟಿ ಕಾರುಣ್ಯಾ ರಾಮ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸೇರಿದಂತೆ ಸಾಕಷ್ಟು ಜನ ಸಾನ್ವಿ ಪೋಸ್ಟ್ ನೋಡಿ ಮೆಚ್ಚುಗೆ ಸೂಚಿಸಿದ್ದರು. ಸಾಕಷ್ಟು ಜನ ಕಾಮೆಂಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದರು. ಬೆನ್ನಿನ ಬದಲು ಭುಜದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರೆ ಚೆನ್ನಾಗಿತ್ತು ಎಂದು ಕೆಲವರು ಹೇಳಿದ್ದರು. ಬೆನ್ನಿನ ಮೇಲೆ ಗಣೇಶ ಟ್ಯಾಟೂ ಹಾಕಿಸಿಕೊಂಡರೆ ಗಣೇಶ ನಮ್ಮ ಬೆಂಬಲಕ್ಕೆ ನಿಂತಿದ್ದಾನೆ ಎಂದು ಅರ್ಥ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು.

ಕೆಲವರು ಬೇಕೆಂದೇ ಟಾರ್ಗೆಟ್ ಮಾಡಿ ಸಾನ್ವಿ ಬಗ್ಗೆ ಟ್ರೋಲ್ ಮಾಡಿದ್ದರು. ಸುದೀಪ್ ಅಭಿಮಾನಿಗಳೇ ಅಂತಹವರಿಗೆ ತಿರುಗೇಟು ನೀಡಿದ್ದರು. ಗಾಯಕಿಯಾಗಿ ಸಾನ್ವಿ ಕನ್ನಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಈಗಾಗಲೇ ನಟನೆಯ ಪಟ್ಟುಗಳನ್ನು ಕಲಿಯುತ್ತಿದ್ದು ಶೀಘ್ರದಲ್ಲೇ ನಟಿಸುವ ಸಾಧ್ಯತೆಯಿದೆ. ಕಳೆದ ವರ್ಷ 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಹಾಡು ಹಾಕಿ ಸಾನ್ವಿ ಗಮನ ಸೆಳೆದಿದ್ದರು. ಸಾಂಗ್ 50 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿದೆ.

'ಮ್ಯಾಂಗೋ ಪಚ್ಚ' ಚಿತ್ರದ 'ಅರಗಿಣಿಯೇ' ಸಾಂಗ್ ಕೂಡ ಸಾನ್ವಿ ಸುದೀಪ್ ಕಂಠದಲ್ಲಿ ಮೂಡಿ ಬಂದಿದೆ. ಅಂದಹಾಗೆ ಸಾನ್ವಿ ಸುದೀಪ್‌ಗೆ ಟ್ರೋಲ್‌ಗಳು ಹೊಸದೇನು ಅಲ್ಲ. ಅದರ ಬಗ್ಗೆ ಆಕೆ ತಲೆ ಕೆಡಿಸಿಕೊಳ್ಳುವುದು ಇಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

Read more about: sudeep controversy kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X