ಚಿತ್ರರಂಗದಲ್ಲಿ ಸುದೀಪ್ 25 ವರ್ಷ: ಮಗಳು ಹೇಳಿದ್ದು ಹೀಗೆ
ಚಿತ್ರರಂಗದಲ್ಲಿ ಸುದೀಪ್ 25 ವರ್ಷ ಪೂರೈಸಿದ್ದಾರೆ. ಸಹ ನಟನಾಗಿ ಚಿತ್ರರಂಗ ಪ್ರವೇಶಿಸಿದ ಸುದೀಪ್ ಎರಡು ದಶಕದಿಂದಲೂ ನಾಯಕನಟನಾಗಿ ಮೆರೆಯುತ್ತಿದ್ದಾರೆ.
Recommended Video
ಚಿತ್ರರಂಗದಲ್ಲಿ ನಟನೊಬ್ಬ 25 ವರ್ಷ ಪೂರೈಸಿ ಇನ್ನೂ ಬೇಡಿಕೆಯಲ್ಲಿರುವುದು ಸುಲಭದ ಮಾತಲ್ಲ. ಹಾಗಾಗಿ 25 ವರ್ಷ ಪೂರೈಸಿದ ಸುದೀಪ್ ಸಾಧನೆಗೆ ಹಲವು ಕಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಸುದೀಪ್ ರ ಮಗಳು ಸಾನ್ವಿ ಸಹ ಅಪ್ಪನ ಸಾಧನೆ ಬಗ್ಗೆ ಮಾತನ್ನಾಡಿದ್ದು, ಅಪ್ಪನಿಗೆ ವಿಶೇಷ ಸಂದೇಶದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಆದ ವಿಡಿಯೋ ಹಂಚಿಕೊಂಡಿರುವ ಸಾನ್ವಿ, '25 ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು ಅಪ್ಪ. ಇಂಥಹಾ ಮೇರು ಸ್ಥಾನಕ್ಕೆ ಏರಲು ನೀವು ಬಹಳ ಪರಿಶ್ರಮ ಪಟ್ಟಿದ್ದೀರಿ. ಸಾಕಷ್ಟು ಅನುಭವಿಸಿದ್ದೀರಿ. ಆದರೆ ಕೊನೆಗೆ ನೀವು ಹೊಳೆಯುತ್ತಲೇ ಬಂದಿದ್ದೀರಿ. ನಿಮ್ಮ ಈ ಸಾಧನೆ ಬಗ್ಗೆ ನನಗಿಂತಲೂ ಹೆಚ್ಚು ಹೆಮ್ಮೆ ಪಡುವವರು ಬೇರೆ ಯಾರೂ ಇಲ್ಲ. ನೀವು ಊಹಿಸುವುದಕ್ಕಿಂತಲೂ ನಾನು ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ' ಎಂದಿದ್ದಾರೆ ಸಾನ್ವಿ.
ಸುದೀಪ್ ಕನ್ನಡ ಚಿತ್ರರಂಗದ ಸಹನಟ, ನಟಿಯರು, ಕಿರಿಯ ನಟರಿಂದ ಅಭಿನಂದನೆಗಳು ಹರಿಬಂದಿವೆ. ಇದರ ಜೊತೆಗೆ ತಮಿಳಿನ ವಿಜಯ್ ಸೇತುಪತಿ, ಬಾಲಿವುಡ್ ನ ಸುನಿಲ್ ಶೆಟ್ಟಿ, ತೆಲುಗಿನ ರಾಮ್ ಚರಣ್ ತೇಜ, ಮಲಯಾಳಂ ನ ಮೋಹನ್ ಲಾಲ್, ಕ್ರಿಕೆಟಿಗ ಅನಿಲ್ ಕುಂಬ್ಳೆ ಇನ್ನೂ ಹಲವಾರು ಮಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾವು ಬಿಡುಗಡೆಗೆ ತಯಾರಾಗಿದೆ. ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದು ಅದೂ ಸಹ ಕೆಲವೇ ತಿಂಗಳಲ್ಲಿ ಬಿಡಗುಡೆ ಆಗಲಿದೆ. ಈ ಮಧ್ಯೆ ಮಲಯಾಳಂ ಸಿನಿಮಾ ಒಂದನ್ನು ಸುದೀಪ್ ಒಪ್ಪಿಕೊಂಡಿದ್ದಾರೆ. ಅದರ ಜೊತೆಗೆ ಫೆಬ್ರವರಿಯಲ್ಲಿ 'ಬಿಗ್ ಬಾಸ್ 8' ಸಹ ಪ್ರಾರಂಭವಾಗಲಿದೆ.


Click it and Unblock the Notifications











