SSE -SIDE B -OTT ; ಮನೆಯಲ್ಲಿಯೇ ಕಣ್ತುಂಬಿಕೊಳ್ಳಿ 'ಮನು-ಪ್ರಿಯಾ'ಳ ಪ್ರೀತಿಯ ಉತ್ಕಟತೆ..!

ನಿಶ್ಯಬ್ದವಾಗಿ, ನಿರುಮ್ಮಳವಾಗಿ, ಹಿತವಾಗಿ ಹರಿಯುವ ನದಿಯಂತೆ ಭಾಸವಾಗಿದ್ದ ಸಪ್ತ ಸಾಗರದಾಚೆ ಎಲ್ಲೋ - ಸೈಡ್ A ಯನ್ನ ಮನೆಯಲ್ಲಿಯೇ ಕುಳಿತು ಕಣ್ತುಂಬಿಕೊಂಡವರ ಕಣ್ಣುಗಳೆಲ್ಲ, ಸಪ್ತಸಾಗರದಾಚೆ ಎಲ್ಲೋ - ಸೈಡ್ B ನೋಡಲು ಕಾತುರದಿಂದ ಕಾಯುತ್ತಿದ್ದವು. ಆದರೆ ಮನು-ಪ್ರಿಯಾ-ಸುರಭಿಯ ಪ್ರೀತಿಯ ಪಯಣ ಒಟಿಟಿಯ ನಿಲ್ದಾಣಕ್ಕೆ ತಲುಪಿರಲಿಲ್ಲ. ಹೀಗಾಗಿಯೇ ಸಾಮಾಜಿಕ ಜಾಲತಾಣದ ಮೂಲಕ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಹೇಮಂತ್ ರಾವ್ ಅವರ ಬಳಿ ನಿರಂತರ ಮನವಿಯನ್ನ ಅನೇಕರು ಮಾಡಿಕೊಳ್ತಿರುವ ಸಮಯದಲ್ಲಿಯೇ ರಕ್ತವರ್ಣದಲ್ಲಿ ಕಳೆದು ಹೋದ ನೀಲಿ ಬಣ್ಣವನ್ನು ಮರುಹೆಣಿಯುವ ನಾಯಕನ ತವಕ, ತುಡಿತದ ಕಥೆ ಒಟಿಟಿಯಲ್ಲಿ ಅನಾವರಣಗೊಂಡಿದೆ. ನಿರೀಕ್ಷಿಸಿದಂತೆ ಜನಮನ್ನಣೆಯನ್ನೂ ಗಳಿಸುತ್ತಿದೆ.

ಇನ್ನೂ ಸಪ್ತಸಾಗರದಾಚೆ ಎಲ್ಲೋ - ಸೈಡ್ A ಸಿನಿಮಾ ಚಿತ್ರಮಂದಿರದಲ್ಲಿ ತೆರೆಗೆ ಬಂದು ನಾಲ್ಕು ವಾರದ ನಂತರ ಒಟಿಟಿ ಅಂಗಳಕ್ಕೆ ಬಂದಿತ್ತು. ಈ ಕಾರಣಕ್ಕೆ ಮೊದಲ ಭಾಗದಂತೆ ಎರಡನೇ ಭಾಗ ಕೂಡ ನಾಲ್ಕೇ ವಾರಕ್ಕೆ ಒಟಿಟಿಗೆ ಬರುತ್ತೆ ಎಂದು ಎಲ್ಲರು ಭಾವಿಸಿದ್ದರು.ಆದರೆ ಸಪ್ತಸಾಗರದಾಚೆ ಎಲ್ಲೋ - ಸೈಡ್ B ವಿಚಾರದಲ್ಲಿ ಹೀಗಾಗಲಿಲ್ಲ. ನವೆಂಬರ್ 17ಕ್ಕೆ ತೆರೆಗೆ ಬಂದಿದ್ದ ಸಪ್ತಸಾಗರದಾಚೆ ಎಲ್ಲೋ - ಸೈಡ್ B ಅಮೆಜಾನ್ ಪ್ರೈಮ್ ಅಂಗಳಕ್ಕೆ ಬರಲು ಎರಡು ತಿಂಗಳ ಸಮಯ ಬೇಕಾಯಿತು.

Sapta Saagardaache Ello Side B Now Available On OTT

ಡಿಸೆಂಬರ್ 22ಕ್ಕೆ ಅಮೆಜಾನ್ ನಲ್ಲಿ ಪ್ರಸಾರವಾಗಬೇಕಿದ್ದ ಸೈಡ್ B

ಹಾಗೇ ನೋಡಿದರೆ ಸಪ್ತಸಾಗರದಾಚೆ ಎಲ್ಲೋ - ಸೈಡ್ B ಅಮೆಜಾನ್ ನಲ್ಲಿ ಡಿಸೆಂಬರ್ 22ಕ್ಕೆ ಪ್ರಸಾರವಾಗಬೇಕಿತ್ತು. ಅಮೆಜಾನ್ ಹಾಗೂ ಚಿತ್ರತಂಡ ಈ ಕುರಿತು ಪ್ರಕಟಣೆಯನ್ನೂ ಹೊರಡಿಸಿತ್ತು. ಆದರೆ ಅವತ್ತು ದಕ್ಕಿದ್ದು ನಿರಾಸೆ ಮಾತ್ರ. ಇದಕ್ಕೆ ಕಾರಣವೇನು ಅನ್ನುವುದನ್ನ ಖುದ್ದು ಚಿತ್ರತಂಡವೇ ಹೇಳಬೇಕಾದರೂ, ಈ ವಿಚಾರದ ಕುರಿತು ಚರ್ಚೆ ನಡೆಯುತ್ತಿದೆ. ಅಂತೂ-ಇಂತೂ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಆದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮದ ಅಲೆಯೂ ಎದ್ದಿದೆ.

ಕಥಾಹಂದರ

ಸಪ್ತಸಾಗರದಾಚೆ ಎಲ್ಲೋ - ಸೈಡ್ ಎ ಚಿತ್ರಕ್ಕೆ 2010 ವೇದಿಕೆಯಾಗಿದ್ದರೆ, ಸೈಡ್ ಬಿ ಗೆ 2020 ವೇದಿಕೆ. ಇಲ್ಲಿಯೂ ಕೂಡ ಭಾವನೆಗಳ ತೀವೃತೆ ಗಾಢವಾಗಿದೆ. ಜೈಲಿಂದ ಹೊರ ಬಂದ ಮನುಗೆ ಪ್ರಿಯಾಳ ಧ್ವನಿ ಕೇಳುವ ಹಂಬಲ, ನೋಡುವ ತುಡಿತ. ಅವಳ ಕನವರಿಕೆಯಲ್ಲಿಯೇ ಇರುವ ಮನು ಕೆಂಪು ದೀಪದಡಿ ಸಿಗುವ ಸುರಭಿಯಲ್ಲಿಯೇ ಪ್ರಿಯಾಳನ್ನ ಕಾಣುವ ಪ್ರಯತ್ನ ಮಾಡ್ತಾನೆ. ಈ ಪ್ರಯತ್ನದಲ್ಲಿ ಸೋಮು ಮತ್ತೆ ಮನುಗೆ ಎದುರಾಗ್ತಾನೆ. ಮುಂದೇನಾಗುತ್ತೆ ಎಂಬ ಕುತೂಹಲಕ್ಕೆ ಉತ್ತರವನ್ನ ನೀವು ಮನೆ ಮಂದಿಯ ಜೊತೆ ಮನೆಯಲ್ಲಿಯೇ ಸಿನಿಮಾ ನೋಡಿ ಪಡೆಯಬೇಕು.

More from Filmibeat

English summary
Rakshit Shetty’s romantic drama film Sapta Sagaradaache Ello - Side B has finally released on OTT platform
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X