Sapta Sagaradaache Ello: ಬಿಡುಗಡೆಗೂ ಒಂದು ದಿನ ಮುಂಚೆಯೇ ಸಪ್ತ ಸಾಗರ ದರ್ಶನ; ಟಿಕೆಟ್ ದರವೆಷ್ಟು?

ಕಳೆದ ವರ್ಷ ಚಾರ್ಲಿ 777 ಮೂಲಕ ಗೆದ್ದು ಬೀಗಿದ್ದ ನಟ ರಕ್ಷಿತ್ ಶೆಟ್ಟಿ ಸದ್ಯ ತಮ್ಮ ಮುಂದಿನ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಚಾರ್ಲಿ 777 ಜತೆಗೆ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಚಿತ್ರೀಕರಣದಲ್ಲೂ ಸಹ ಬ್ಯುಸಿಯಾಗಿದ್ದರು. ಈ ಚಿತ್ರದ ಚಿತ್ರೀಕರಣ ಚಿತ್ರ ಸೆಟ್ಟೇರಿದ ಬರೋಬ್ಬರಿ ಎರಡು ವರ್ಷಗಳ ಬಳಿಕ ಮುಕ್ತಾಯಗೊಂಡಿದ್ದು, ಇದೀಗ ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ.

ಹೌದು, ಚಂದನವನದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಸೈಡ್ ಎ ನಾಡಿದ್ದು ( ಸೆಪ್ಟೆಂಬರ್ 1 ) ತೆರೆಗೆ ಬರಲಿದ್ದು, ಎರಡನೇ ಭಾಗ ಸೈಡ್ ಬಿ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ. ಹೀಗೆ ಎರಡೂ ಭಾಗಗಳ ಚಿತ್ರೀಕರಣವನ್ನು ಒಟ್ಟಿಗೆ ಮುಕ್ತಾಯಗೊಳಿಸಿಕೊಂಡಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರತಂಡ ಇದೀಗ ಮೊದಲ ಭಾಗವನ್ನು ಸಿನಿ ರಸಿಕರ ಮುಂದಿಡಲು ಸಿದ್ಧವಾಗಿದೆ.

Sapta Sagadache Ello: SSE movie paid premiere shows booking started

ಇನ್ನು ಚಿತ್ರತಂಡ ಬಿಡುಗಡೆಗೂ ಹಿಂದಿನ ದಿನವೇ ಚಿತ್ರದ ಪ್ರೀಮಿಯರ್ ಶೋಗಳನ್ನು ಆಯೋಜಿಸಿದೆ. ಸೆಲೆಬ್ರಿಟಿ ಪ್ರೀಮಿಯರ್ ಶೋಗಳು ಮಾತ್ರವಲ್ಲದೇ ಸಾಮಾನ್ಯ ಸಿನಿ ರಸಿಕರಿಗೂ ಸಹ ಪ್ರೀಮಿಯರ್ ಶೋಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ನಗರಗಳಲ್ಲಿ ನಾಳೆ ( ಆಗಸ್ಟ್ 31 ) ಸಂಜೆಯೇ ಸಪ್ತ ಸಾಗರದಾಚೆ ಎಲ್ಲೋ ಸಿನಿ ರಸಿಕರಿಗೆ ದರ್ಶನ ನೀಡಲಿದೆ.

ಈ ಪ್ರೀಮಿಯರ್ ಶೋಗಳ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭಗೊಂಡಿದ್ದು ಚಿತ್ರವನ್ನು ವೀಕ್ಷಿಸಲು ಕಾದಿದ್ದ ಸಿನಿ ರಸಿಕರು ಒಂದು ದಿನ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈವರೆಗೆ ಬೆಂಗಳೂರಿನಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಒಟ್ಟು 28 ಪೇಯ್ಡ್ ಪ್ರೀಮಿಯರ್ ಶೋಗಳು ಬೆಂಗಳೂರಿನಲ್ಲಿ ಆಯೋಜನೆಗೊಂಡಿವೆ. ಇನ್ನು ಪಿವಿಆರ್ ಹಾಗೂ ಇತರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 700 ರಿಂದ 900 ರೂಪಾಯಿಗಳವರೆಗೆ ಇದ್ದು, ಸಾಮಾನ್ಯ ಕ್ಲಬ್ ಕ್ಲಾಸ್ ಮಲ್ಟಪ್ಲೆಕ್ಸ್‌ಗಳಲ್ಲಿ 300 ರಿಂದ 500 ರೂಪಾಯಿಗಳವರೆಗೂ ಸಹ ಇದೆ.

ಇನ್ನು ಮೈಸೂರಿನಲ್ಲಿ ಚಿತ್ರದ ನಾಲ್ಕು ಪ್ರದರ್ಶನಗಳು ನಾಳೆ ಆಯೋಜನೆಗೊಂಡಿದ್ದು ಅಲ್ಲಿ ಟಿಕೆಟ್ ದರ 250 ರೂಪಾಯಿಗಳಾಗಿವೆ. ಇನ್ನು ಚಿತ್ರದ ಬಹುತೇಕ ಎಲ್ಲಾ ಪ್ರದರ್ಶನಗಳ ಟಿಕೆಟ್‌ಗಳೂ ಭರ್ಜರಿಯಾಗಿ ಸೇಲ್ ಆಗುತ್ತಿದ್ದು, ನಾಳೆಯಷ್ಟರಲ್ಲಿ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ.

More from Filmibeat

English summary
Sapta Sagadache Ello: SSE movie paid premiere shows booking started
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X