'ಸಪ್ತಸಾಗರದಾಚೆ' ಸುರಭಿಯನ್ನು ಬಿಕಿನಿಯಲ್ಲಿ ಕಂಡು ಬೆಸ್ತು ಬಿದ್ದ ನೆಟ್ಟಿಗರು; ಫೋಟೊಗಳು ಫುಲ್ ವೈರಲ್

ನಟಿ ಚೈತ್ರಾ ಜೆ. ಆಚಾರ್ ಕಳೆದೆರಡು ದಿನಗಳಿಂದ ಬಿಕಿನಿ ತೊಟ್ಟು ಬಿಂದಾಸ್ ಆಗಿ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿದ್ದಾರೆ. ಚೆಲುವೆಯ ಈಜುಡುಗೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. 'ಮಹೀರ, 'ಆ ದೃಶ್ಯ', 'ತಲೆತಂಡ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ಚೈತ್ರಾ ನಟಿಸಿದ್ದಾರೆ. ಸದ್ಯ 'ಸಪ್ತಸಾಗರದಾಚೆ ಎಲ್ಲೋ' ಚಿತ್ರದಲ್ಲಿ ಈಗ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ನಟಿಯಾಗಿ ಮಾತ್ರವಲ್ಲದೇ ಗಾಯಕಿಯಾಗಿಯೂ ಚೈತ್ರಾ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚೆಲುವೆ ಕಾಲೇಜು ದಿನಗಳಲ್ಲೇ ವೆಬ್‌ಸೀರಿಸ್‌ನಲ್ಲಿ ನಟಿಸಲು ಆರಂಭಿಸಿದರು. 'ಮಹಿರ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಸದಾ ಸೀರೆ, ಸಲ್ವಾರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೈತ್ರಾ ಏಕ್‌ದಮ್ ಬಿಕಿನಿಯಲ್ಲಿ ದರ್ಶನ ಕೊಟ್ಟಿರೋದು ನೋಡಿ ಕೆಲವರು ಶಾಕ್ ಆಗಿದ್ದಾರೆ. ಇತ್ತೀಚೆಗೆ 'ಸಪ್ತಸಾಗರದಾಚೆ ಎಲ್ಲೋ' ಶೂಟಿಂಗ್ ಮುಗಿಸಿರುವ ಚೆಲುವೆ ವಕೇಷನ್ ಮೂಡ್‌ನಲ್ಲಿದ್ದಾರೆ.

Sapta Sagaradaache Ello movie Actress Chaithra J Achar gets trolled for sharing bikini pictures

ವಿದೇಶದದಲ್ಲಿ ರಜೆಯ ಮಜೆ ಸವಿಯುತ್ತಿರುವ ಬೆಡಗಿ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. 2 ದಿನಗಳ ಹಿಂದೆ ಟೂ ಪೀಸ್ ಬಿಕಿನಿ ತೊಟ್ಟು ರ್ವಾಪ್ ಸ್ಕರ್ಟ್‌ ಸುತ್ತಿಕೊಂಡು ಬೀಚ್‌ನಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ನಂತರ ಹಸಿರು ಬಣ್ಣದ ಮೊನಾಕಿನಿ ತೊಟ್ಟು ಚೈತ್ರಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಚೆಲುವೆಯ ಬೋಲ್ಡ್ ಅವತಾರ ಕಂಡು ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್‌ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮತ್ತೆ ಕೆಲವರು ನಟಿಯ ಹೊಸ ಅವತಾರ ಕಂಡು ಅಚ್ಚರಿಗೊಂಡಿದ್ದಾರೆ.

ತೆರೆಮೇಲೆ ಸಾಂಪ್ರದಾಯಿಕ ಉಡುಗೆಯಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಚೈತ್ರಾ ದಿಢೀರನೇ ಬಿಕಿನಿ ತೊಟ್ಟಿದ್ದು ಕೆಲವರಿಗೆ ಬೇಸರ ತಂದಿದೆ. ಇದೆಲ್ಲಾ ಬೇಕಿತ್ತಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ನಲ್ಲಿ ಚೈತ್ರಾ ಮಾತ್ರ ಸಿಕ್ಕಾಪಟ್ಟೆ ಬಿಂದಾಸ್ ಆಗಿ ಸಾಗರ ತೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಪೋಸ್ಟ್‌ವೊಂದಕ್ಕೆ "ಸಾಗರದಾಚೆ ಎಲ್ಲೊ...." ಎನ್ನುವ ಕ್ಯಾಪ್ಷನ್ ಕೊಟ್ಟಿದ್ದಾರೆ. ಇನ್ನು ಚೆಲುವೆಗೆ ಇನ್‌ಸ್ಟಾಗ್ರಾಂನಲ್ಲಿ 20 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

Sapta Sagaradaache Ello movie Actress Chaithra J Achar gets trolled for sharing bikini pictures

ಸದ್ಯ ಚೈತ್ರಾ ಜೆ. ಆಚಾರ್ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗ್ತಿದೆ. 'ಸ್ಟ್ರಾಬೆರಿ', 'ಬ್ಲಿಂಕ್', 'ಹ್ಯಾಪಿ ಬರ್ತ್‌ಡೇ ಟು ಮಿ', 'ಯಾರಿಗೂ ಹೇಳ್ಬೇಡಿ', 'ಅಕಟಕಟ' ಹೀಗೆ ಈಕೆ ನಟಿಸುತ್ತಿರುವ ನಾಲ್ಕೈದು ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಚಿಕ್ಕಂದಿನಿಂದಲೂ ಚೈತ್ರಾಗೆ ಸಂಗೀತದ ಒಲವಿತ್ತು. ಕರ್ನಾಟಿಕ್ ಕ್ಲಾಸಿಕ್ ಮ್ಯೂಸಿಕ್ ಕಲಿತಿರುವ ಚೆಲುವೆ 'ಸಾರ್ವಜನಿಕರಿಗೆ ಸುವರ್ಣಾವಕಾಶ', 'ಮಾಯಾಬಜಾರ್- 2016' ಸಿನಿಮಾಗಳಲ್ಲಿ ಹಾಡಿದ್ದಾರೆ.

'ಗರುಡಗಮನ ವೃಷಭವಾಹನ' ಚಿತ್ರದ 'ಸೋಜುಗಾದ ಸೂಜಿಮಲ್ಲಿಗೆ' ಹಾಡಿನ ಗಾಯನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಹಾಡಿನಿಂದ ರಾತ್ರೋರಾತ್ರಿ ಚೈತ್ರಾ ಜನಪ್ರಿಯತೆ ಗಳಿಸಿದ್ದರು. ಗಾಯನಕ್ಕಾಗಿ 2 ವರ್ಷಗಳ ಹಿಂದೆ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದರು. 'ಸಪ್ತಸಾಗರದಾಚೆ ಎಲ್ಲೋ' ಚಿತ್ರದಲ್ಲಿ ಸುರಭಿ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಸೀರೆ ಉಟ್ಟು ಮಲ್ಲಿಗೆ ಮುಡಿದು ದರ್ಶನ ಕೊಟ್ಟಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಚೈತ್ರಾ ಪಾತ್ರಕ್ಕೂ ಬಹಳ ಪ್ರಾಮುಖ್ಯತೆ ಇದೆ.

Sapta Sagaradaache Ello movie Actress Chaithra J Achar gets trolled for sharing bikini pictures

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ನಂತರ 'ಸಪ್ತಸಾಗರದಾಚೆ ಎಲ್ಲೋ' ಚಿತ್ರಕ್ಕಾಗಿ ನಿರ್ದೇಶಕ ಹೇಮಂತ್ ರಾವ್ ಹಾಗೂ ರಕ್ಷಿತ್ ಶೆಟ್ಟಿ ಕೈ ಜೋಡಿಸಿದ್ದಾರೆ. ಚಿತ್ರದಲ್ಲಿ ರಕ್ಷಿತ್ ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಬಣ್ಣ ಹಚ್ಚಿದ್ದಾರೆ. ಮತ್ತೊಬ್ಬ ನಾಯಕಿಯಾಗಿ ಚೈತ್ರಾ ಮಿಂಚಿದ್ದಾರೆ. ಈಗಾಗಲೇ ಪೋಸ್ಟರ್, ಟೀಸರ್‌ಗಳಲ್ಲಿ ಸುರಭಿಯಾಗಿ ಚೈತ್ರಾ ಲುಕ್‌ ಗಮನ ಸೆಳೆದಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

More from Filmibeat

English summary
Sapta Sagaradaache Ello movie Actress Chaithra J Achar gets trolled for sharing bikini pictures. Hot Actress flaunts her curves in Green Monokini. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X