ರಕ್ಷಿತ್ ಶೆಟ್ಟಿಯ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ನಾಯಕಿ ಯಾರೆಂದು ಊಹಿಸಿ?
'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಬಳಿಕ ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಎಂದು ಹೆಸರಿಡಲಾಗಿದೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ನಿರ್ಮಿಸಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರಕ್ಕೆ ನಿರ್ಮಾಪಕ.
Recommended Video
'ಚಾರ್ಲಿ' ಸಿನಿಮಾದ ಚಿತ್ರೀಕರಣ ಮುಗಿಸಿರುವ ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿ ಯಾರಾಗಬಹುದು ಎಂಬ ಚರ್ಚೆ ಸಾಮಾಜಿಕ ಜಾಲಜಾಣದಲ್ಲಿ ಹುಟ್ಟಿಕೊಂಡಿದೆ.
ಈ ಕುತೂಹಲಕ್ಕೆ ಫೆಬ್ರವರಿ 3 ರಂದು ಚಿತ್ರತಂಡ ಉತ್ತರ ನೀಡಲಿದೆ. ಸದ್ಯ, ನಾಯಕಿಯ ಅರ್ಧನೋಟದ ಭಾವಚಿತ್ರ ಬಹಿರಂಗಪಡಿಸಿರುವ ಚಿತ್ರತಂಡ ನಾಯಕಿ ಯಾರು ಇರಬಹುದು ಎಂದು ಊಹಿಸಿ ಎಂದಿದ್ದಾರೆ.

ನಾಯಕಿಯ ಭಾವಚಿತ್ರ ನೋಡುತ್ತಿದ್ದರೆ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಅಥವಾ ಪ್ರಿಯಾ ಆನಂದ್ ಎಂದು ಅನೇಕರು ಊಹಿಸುತ್ತಿದ್ದಾರೆ. ಪೈಲ್ವಾನ್ ಸಿನಿಮಾದಲ್ಲಿ ನಟಿಸಿದ್ದ ಆಕಾಂಕ್ಷ ಸಿಂಗ್ ಇದ್ದರೂ ಇರಬಹುದು ಎನ್ನುತ್ತಿದ್ದಾರೆ.
ಇದು ನೆಟ್ಟಿಗರ ಊಹೆ ಅಷ್ಟೇ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡುವ ನಟಿ ಯಾರೆಂದು ನಾಳೆ ಅಧಿಕೃತವಾಗಿ ಬಹಿರಂಗವಾಗಲಿದೆ. ಅಲ್ಲಿಯವರೆಗೂ ಗೆಸ್ ಮಾಡಬಹುದು.


Click it and Unblock the Notifications











