twitter
    For Quick Alerts
    ALLOW NOTIFICATIONS  
    For Daily Alerts

    ರಕ್ಷಿತ್ ಶೆಟ್ಟಿಯ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ನಾಯಕಿ ಯಾರೆಂದು ಊಹಿಸಿ?

    |

    'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಬಳಿಕ ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಎಂದು ಹೆಸರಿಡಲಾಗಿದೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ನಿರ್ಮಿಸಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರಕ್ಕೆ ನಿರ್ಮಾಪಕ.

    Recommended Video

    ಯಾರಿವಳು ಅರ್ಧ ಮುಖದ ಚೆಲುವೆ | Rakshith Shetty | Sapta Sagaradaache Yello

    'ಚಾರ್ಲಿ' ಸಿನಿಮಾದ ಚಿತ್ರೀಕರಣ ಮುಗಿಸಿರುವ ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿ ಯಾರಾಗಬಹುದು ಎಂಬ ಚರ್ಚೆ ಸಾಮಾಜಿಕ ಜಾಲಜಾಣದಲ್ಲಿ ಹುಟ್ಟಿಕೊಂಡಿದೆ.

    ತುಂಬಾ ಕಷ್ಟದ ಹಂತದ ಚಿತ್ರೀಕರಣ ಮಾಡಿ ಮುಗಿಸಿದ ರಕ್ಷಿತ್ ಶೆಟ್ಟಿ '777 ಚಾರ್ಲಿ' ತಂಡತುಂಬಾ ಕಷ್ಟದ ಹಂತದ ಚಿತ್ರೀಕರಣ ಮಾಡಿ ಮುಗಿಸಿದ ರಕ್ಷಿತ್ ಶೆಟ್ಟಿ '777 ಚಾರ್ಲಿ' ತಂಡ

    ಈ ಕುತೂಹಲಕ್ಕೆ ಫೆಬ್ರವರಿ 3 ರಂದು ಚಿತ್ರತಂಡ ಉತ್ತರ ನೀಡಲಿದೆ. ಸದ್ಯ, ನಾಯಕಿಯ ಅರ್ಧನೋಟದ ಭಾವಚಿತ್ರ ಬಹಿರಂಗಪಡಿಸಿರುವ ಚಿತ್ರತಂಡ ನಾಯಕಿ ಯಾರು ಇರಬಹುದು ಎಂದು ಊಹಿಸಿ ಎಂದಿದ್ದಾರೆ.

    Sapta Sagaradaache Yello Team will be revealed Female lead name tomorrow

    ನಾಯಕಿಯ ಭಾವಚಿತ್ರ ನೋಡುತ್ತಿದ್ದರೆ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಅಥವಾ ಪ್ರಿಯಾ ಆನಂದ್ ಎಂದು ಅನೇಕರು ಊಹಿಸುತ್ತಿದ್ದಾರೆ. ಪೈಲ್ವಾನ್ ಸಿನಿಮಾದಲ್ಲಿ ನಟಿಸಿದ್ದ ಆಕಾಂಕ್ಷ ಸಿಂಗ್ ಇದ್ದರೂ ಇರಬಹುದು ಎನ್ನುತ್ತಿದ್ದಾರೆ.

    'ಕಿರಿಕ್ ಪಾರ್ಟಿ'ಗೆ 4 ವರ್ಷದ ಸಂಭ್ರಮ; ವಿಶೇಷ ವಿಡಿಯೋ ಶೇರ್ ಮಾಡಿ ಸಿಂಪಲ್ ಸ್ಟಾರ್ ಹೇಳಿದ್ದೇನು?'ಕಿರಿಕ್ ಪಾರ್ಟಿ'ಗೆ 4 ವರ್ಷದ ಸಂಭ್ರಮ; ವಿಶೇಷ ವಿಡಿಯೋ ಶೇರ್ ಮಾಡಿ ಸಿಂಪಲ್ ಸ್ಟಾರ್ ಹೇಳಿದ್ದೇನು?

    ಇದು ನೆಟ್ಟಿಗರ ಊಹೆ ಅಷ್ಟೇ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡುವ ನಟಿ ಯಾರೆಂದು ನಾಳೆ ಅಧಿಕೃತವಾಗಿ ಬಹಿರಂಗವಾಗಲಿದೆ. ಅಲ್ಲಿಯವರೆಗೂ ಗೆಸ್ ಮಾಡಬಹುದು.

    English summary
    Kannada actor Rakshit shetty starrer Sapta Sagaradaache Yello Team will be revealed Female lead name tomorrow.
    Wednesday, February 3, 2021, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X