ಧನಂಜಯ್-ಸೂರಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ನಟಿಯರು
Recommended Video

'ಟಗರು' ಚಿತ್ರದ ನಂತರ ನಿರ್ದೇಶಕ ಸೂರಿ ಮತ್ತು ಡಾಲಿ ಧನಂಜಯ್ ಜೋಡಿಯಲ್ಲಿ ಇನ್ನೊಂದು ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಹೆಸರಿಡಲಾಗಿದೆ.
ಧನಂಜಯ್ ನಾಯಕನಾಗಿದ್ದು, ನಿವೇದಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ, ಮತ್ತಿಬ್ಬರು ಹೊಸ ನಟಿಯರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ.
ಶ್ರೀನಿವಾಸ ಎಂಬ ಪಾತ್ರದಲ್ಲಿ ಧನಂಜಯ್ ಹಾಗೂ ದೇವಿಕಾ ಪಾತ್ರದಲ್ಲಿ ನಿವೇದಿತಾ ಬಣ್ಣ ಹಚ್ಚಲಿದ್ದು, ಸಪ್ತಮಿ ಹಾಗೂ ಅಮೃತಾ ಎಂಬ ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಿರಿಜಾ ಮತ್ತು ನಂದಿನಿ ಎಂಬ ಪಾತ್ರಗಳನ್ನ ಇವರಿಬ್ಬರು ಪೋಷಿಸಲಿದ್ದಾರೆ.

ದುನಿಯಾ ಸೂರಿ ಸಿನಿಮಾಗಳಲ್ಲಿ ಕಲಾವಿದರನ್ನ ಸುಮ್ಮನೆ ಆಯ್ಕೆ ಮಾಡಿಕೊಳ್ಳುವುದಿಲ್ಲ. ಇಂತಹ ಪಾತ್ರಕ್ಕೆ ಇವರು ಸೂಕ್ತ ಅಂದ್ರೆ ಮಾತ್ರ ಅವರಿಗೆ ಅವಕಾಶ ಸಿಗುತ್ತೆ. ಹೀಗೆ, ಅವಕಾಶ ಪಡೆದುಕೊಂಡವರಲ್ಲಿ ಈ ಹೊಸ ನಟಿಯರಿದ್ದಾರೆ.
ಇನ್ನುಳಿದಂತೆ 'ಟಗರು' ಚಿತ್ರ ನಿರ್ಮಾಣ ಮಾಡಿದ್ದ ಕೆಪಿ ಶ್ರೀಕಾಂತ್ ಅವರೇ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದು, ಮಂಜು ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ. ಇನ್ನುಳಿದಂತೆ 'ಟಗರು' ಚಿತ್ರದ ತಂತ್ರಜ್ಞರೇ ಇಲ್ಲಿಯೂ ಕೆಲಸ ಮಾಡಲಿದ್ದಾರೆ.
ಸದ್ಯ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದಲ್ಲಿ ನಟಿಸಿರುವ ಧನಂಜಯ್, ತೆಲುಗಿನಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ಮಾಣದ 'ಬೈರವ-ಗೀತಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅದಾದ ಬಳಿಕ ದುನಿಯಾ ಸೂರಿಯ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ.


Click it and Unblock the Notifications











