ಯುವರಾಜನಿಗೆ ಸಿಕ್ಕೇಬಿಟ್ಲು ಯುವ ರಾಣಿ: ಯುವ ಜೋಡಿಯಾಗಿ ಸಪ್ತಮಿ ಗೌಡ

ಅಣ್ಣಾವ್ರ ಮೊಮ್ಮಗ ಯುವರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಇತ್ತೀಚೆಗೆ ಸೆಟ್ಟೇರಿತ್ತು. ಇದೀಗ ಚಿತ್ರಕ್ಕೆ ನಾಯಕಿ ಆಯ್ಕೆ ಆಗಿದೆ. ಯುವ ರಾಜ್‌ಕುಮಾರ್ ಚೊಚ್ಚಲ ಚಿತ್ರಕ್ಕೆ 'ಯುವ' ಎನ್ನುವ ಟೈಟಲ್ ಫೈನಲ್ ಆಗಿದೆ. ಸಣ್ಣ ಟೀಸರ್ ಸಮೇತ ಸಿನಿಮಾ ಘೋಷಣೆಯಾಗಿತ್ತು. ಜೊತೆಗೆ ಖಾಸಗಿ ಹೋಟೆಲ್‌ನಲ್ಲಿ ಮುಹೂರ್ತ ನೆರವೇರಿತ್ತು. ಇದೀಗ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆ ಆಗಿರುವ ವಿಚಾರ ಬಹಿರಂಗವಾಗಿದೆ.

ಹೊಂಬಾಳೆ ಸಂಸ್ಥೆ 'ಯುವ' ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ ಎಂದು ಘೋಷಿಸಿದೆ. 'ಕಾಂತಾರ' ಚಿತ್ರದಲ್ಲಿ ಲೀಲಾ ಪಾತ್ರದಲ್ಲಿ ನಟಿಸಿ ಸಪ್ತಮಿ ಮೋಡಿ ಮಾಡಿದ್ದರು. ಅದರ ಬೆನ್ನಲ್ಲೇ ಅಭಿಷೇಕ್ ಅಂಬರೀಷ್ ನಟನೆಯ 'ಕಾಳಿ' ಚಿತ್ರಕ್ಕೂ ಆಯ್ಕೆ ಆಗಿದ್ದರು. ಬಾಲಿವುಡ್‌ ಸಿನಿಮಾದಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದರು. ಇದೀಗ ಬಹುನಿರೀಕ್ಷಿತ 'ಯುವ' ಚಿತ್ರಕ್ಕೆ ನಾಯಕಿಯಾಗುವ ಅವಕಾಶ ಸಿಕ್ಕಿದೆ. 'ಯುವ'ರಾಜನ ಅರಸಿಗೆ ಆದರದ ಸ್ವಾಗತ" ಎಂದು ಎಂದು ಹೊಂಬಾಳೆ ಸಂಸ್ಥೆ ಪೋಸ್ಟ್ ಮಾಡಿದೆ. ಈ ಹಿಂದೆ 'ಯುವ' ಚಿತ್ರದ ನಾಯಕಿ ಪಾತ್ರಕ್ಕೆ ಬೇರೆ ನಟಿಯರ ಹೆಸರು ಕೇಳಿಬಂದಿತ್ತು.

Sapthami Gowda to romance Yuvarajkumar in santhosh ananddram Directed Yuva

ತಮಿಳಿನ ಕಲ್ಯಾಣಿ ಪ್ರಿಯದರ್ಶನ್ ಅಥವಾ ಉಪೇಂದ್ರ ಮಗಳು ಐಶ್ವರ್ಯ ಅಣ್ಣಾವ್ರ ಮೊಮ್ಮೊಗ ಮೊದಲ ಚಿತ್ರಕ್ಕೆ ನಾಯಕಿ ಆಗ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇನ್ನು ಇತ್ತೀಚೆಗೆ ರುಕ್ಮಿಣಿ ವಸಂತ್ ಹೆಸರು ಕೂಡ ಚಾಲ್ತಿಗೆ ಬಂದಿತ್ತು. ಆದರೆ ಆಕೆ ಅದು ಸುಳ್ಳು ಎಂದಿದ್ದರು. ಇದೀಗ ಸಪ್ತಮಿ ಗೌಡ ಅವರನ್ನು ಯುವ ಜೋಡಿಯಾಗಿ ಆಯ್ಕೆ ಮಾಡುವ ಮೂಲಕ ಹೊಂಬಾಳೆ ಸಂಸ್ಥೆ ಅಚ್ಚರಿ ಮೂಡಿಸಿದೆ. ಯುವರಾಜ್‌ಕುಮಾರ್ ಚೊಚ್ಚಲ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.

sapthami-gowda-to-romance-yuvarajkumar-in-santhosh-ananddram-directed-yuva

ಮೊದಲ ಚಿತ್ರದಲ್ಲಿ 'ಯುವ' ಜಬರ್ದಸ್ತ್‌ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಟೀಸರ್‌ನಲ್ಲಿರುವ ಡೈಲಾಗ್‌ಗಳು ಸಖತ್ ಕಿಕ್ ಕೊಡ್ತಿದೆ. 'ಯುವ' 3 ದಿನಕ್ಕೆ 3.4 ಮಿಲಿಯನ್ ವೀವ್ಸ್ ಸಾಧಿಸಿ ಧೂಳೆಬ್ಬಿಸಿದೆ. ಇನ್ನು ಟೀಸರ್‌ನಲ್ಲಿ ಯುವ ಲುಕ್ಕು, ಖದರ್ ಡೈಲಾಗ್ ಡೆಲಿವರಿಗೆ ದೊಡ್ಮನೆ ಅಭಿಮಾನಿಗಳು ಫಿದಾ ಆಗೋಗಿದ್ದಾರೆ. ಶ್ರೀಶ ಕುದುವಳ್ಳಿ ಸಿನಿಮಾಟೋಗ್ರಫಿ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಇನ್ನು ಖಾಸಗಿ ಹೋಟೆಲ್‌ನಲ್ಲಿ ನಡೆದ 'ಯುವ' ಚಿತ್ರದ ಮುಹೂರ್ತ ಸಮಾರಂಭ ವಿಡಿಯೋ ರಿವೀಲ್ ಆಗಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು.

sapthami-gowda-to-romance-yuvarajkumar-in-santhosh-ananddram-directed-yuva

ಡಾಲಿ ಧನಂಜಯ, ಪ್ರಶಾಂತ್ ನೀಲ್, ವಿನಯ್ ರಾಜ್‌ಕುಮಾರ್, ಜಗ್ಗೇಶ್, ನಿರ್ಮಾಪಕರಾದ ಜಯಣ್ಣ ಸೇರಿದಂತೆ ಹಲವರು ಮುಹೂರ್ತ ಸಮಾರಂಭಕ್ಕೆ ಹಾಜರಾಗಿ 'ಯುವ' ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭ ಆಗಲಿದೆ. ಹಾಗಾಗಿ ನಾಯಕಿಯನ್ನು ತಂಡಕ್ಕೆ ಹೊಂಬಾಳೆ ಸಂಸ್ಥೆ ಸ್ವಾಗತಿಸಿದೆ. 'ಪಾಪ್‌ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಸಪ್ತಮಿ ಗೌಡ ಮೊದಲ ಬಾರಿಗೆ ನಟಿಸಿದ್ದರು. ಆದರೆ 'ಕಾಂತಾರ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಲೀಲಾ ನಟಿಸ್ತಿದ್ದಾರೆ.

ಯುವ ರಾಜ್‌ಕುಮಾರ್ ಜೋಡಿಯಾಗಿ ನಟಿಸುವ ಲಕ್ಕಿ ಛಾನ್ಸ್ ಕೂಡ ಸಪ್ತಮಿ ಗೌಡಗೆ ಸಿಕ್ಕಿದೆ. ಸೆಟ್ಟೇರೋಕು ಮೊದಲಿನಿಂದ 'ಯುವ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಸಿನಿಮಾ ಮತ್ತಷ್ಟು ಸದ್ದು ಮಾಡ್ತಿದೆ. ಸಂತೋಷ್ ಆನಂದ್‌ ರಾಮ್ ಚಿತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಒಳ್ಳೆ ಔಟ್‌ಫುಟ್ ಹೊರತರಲು ಪ್ರಯತ್ನಿಸುತ್ತಿದ್ದಾರೆ. ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಟೀಸರ್‌ನಲ್ಲಿ ಘೋಷಿಸಲಾಗಿದೆ. ಹಾಗಾಗಿ ಸಿನಿಮಾ ಶೂಟಿಂಗ್ ಆದಷ್ಟು ಬೇಗ ಶುರುವಾಗುತ್ತಿದೆ.

More from Filmibeat

English summary
Sapthami Gowda to romance Yuvarajkumar in santhosh ananddram Directed Yuva. Dr Rajkumar's Grandson Yuva Rajkumar will make his debut with Yuva. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X