ಸಂಗೊಳ್ಳಿ ರಾಯಣ್ಣ ನಿರೀಕ್ಷೆಗೆ ಸಾಥ್ ನೀಡಿದ ಸಾರಥಿ

<ul id="pagination-digg"><li class="previous"><a href="/news/darshan-sarathi-adds-more-expectation-sangolli-rayanna-069202.html">« Previous</a>

ಈ ಹಿಂದಿನ 'ಚಿಂಗಾರಿ' ನಂತರ ದರ್ಶನ್ ಚಿತ್ರಕ್ಕೆ ಕಾಯುತ್ತಿದ್ದ ಅಭಿಮಾನಿಗಳಿಗೆ ಮೊನ್ನೆ ಕಿರುತೆರೆಯಲ್ಲಿ ಮೂಡಿಬಂದ ಸಾರಥಿ, ಮನರಂಜಿಸುವುದರ ಜೊತೆಗೆ ದರ್ಶನ್ ಮೇಲೆ ಅಭಿಮಾನ ಹೆಚ್ಚಾಗಲು ಕಾರಣವಾಗಿದೆ. ಈ ಕಾರಣಕ್ಕೆ ಬರಲಿರುವ 'ಸಂಗೊಳ್ಳಿ ರಾಯಣ್ಣ' ಚಿತ್ರದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ. ಈ ಚಿತ್ರವು ಕಳೆದ ವಾರವೇ ತೆರೆಗೆ ಬರಬೇಕಿತ್ತಾದರೂ 'ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ'ದಿಂದ ಬಿಡುಗಡೆಗೆ 'ಓಕೆ' ಎಂಬ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ.

ಈಗ ಬಿಡುಡಗೆಯ ದಾರಿ ಸುಗಮ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿಯಲ್ಲ. ರಾಜ್ಯೋತ್ಸವದ ದಿನ ಬಿಡುಗಡೆಯಾದರೆ ರಜಾದಲ್ಲಿರುವ ಜನರು ಥಿಯೇಟರಿನತ್ತ ಹೆಜ್ಜೆ ಹಾಕುವುದು ಖಂಡಿತ. ನಿರ್ಮಾಪಕ ಅಪ್ಪಗೋಳ್ ಹಾಕಿದ 32 ಕೋಟಿ ರು. ಭಾರಿ ಬಂಡವಾಳಕ್ಕೆ ವಾಪಸ್ ಹಣ ಬರುವ ದಾರಿ ಸಾಕಷ್ಟು ಸುಗಮವಾಗಲಿದೆ. ಆದರೆ ಅನಿವಾರ್ಯವಾಗಿ ಬಿಡುಗಡೆಯೇನಾದರೂ ಮುಂದಕ್ಕೆ ಹೋದರೆ? ಕಾಲವೇ ಉತ್ತರಿಸಬೇಕು.

ಅದೇನೇ ಇರಲೀ, ಚಿತ್ರದ ಬಗ್ಗೆ ಮಾತನಾಡಿರುವ ನಿರ್ಮಾಪಕ ಆನಂದ್ ಅಪ್ಪುಗೋಳ್ "ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಗೆ ಹಾಗೂ ದೇಶಭಕ್ತರಿಗಾಗಿಯೇ ಈ ಸಿನಿಮಾ ಮಾಡಿದ್ದೇನೆ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಗೊತ್ತಿಲ್ಲ. ಹಾಕಿದ ಬಜೆಟ್ ಬಗ್ಗೆ ಯಾವುದೇ ಚಿಂತೆಯೂ ನನಗಿಲ್ಲ. ಹಣ ವಾಪಸ್ ಬಾರದಿದ್ದರೆ ಚಿಂತೆಯಾಗದು. ಚಿತ್ರದಿಂದ ನೂರು ಕೋಟಿ ರೂಪಾಯಿ ಲಾಭ ಬಂದರೂ ಸಂತಸವಾಗದು. ರಾಯಣ್ಣನ ಚಿತ್ರ ಮಾಡಬೇಕೆಂಬ ಕನಸಿತ್ತು, ಮಾಡಿದ್ದೇನೆ ಅಷ್ಟೇ" ಅಂದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಿರ್ಮಿಸಲಾಗಿರುವ 'ಅದ್ದೂರಿ' ಚಿತ್ರವೆಂಬ ಪಟ್ಟವನ್ನು ರು. 32 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ 'ಸಂಗೊಳ್ಳಿ ರಾಯಣ್ಣ' ಚಿತ್ರ ಪಡೆದುಕೊಂಡಿದೆ. ರಾಜ್ಯದಾದ್ಯಂತ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ಸಂಗೊಳ್ಳಿ ರಾಯಣ್ಣ' ತೆರೆಗೆ ಬರಲಿದೆ. ಈ ಚಿತ್ರದ ವಿತರಣೆ ಹಕ್ಕುಗಳನ್ನು ಎಚ್ ಡಿ ಗಂಗರಾಜು ಪಡೆದಿದ್ದು ಮೊದಲ ವಾರದಲ್ಲಿ ಟಿಕೆಟ್ ಬೆಲೆಯನ್ನು ಹೆಚ್ಚಿಸಲಾಗುವುದೆಂಬ ಮಾಹಿತಿ ನೀಡಿದ್ದಾರೆ. [ಅಸಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪರಿಚಯ]

ಈ ಚಿತ್ರವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೇ, ಮುಂಬೈ, ಪುಣೆ, ಗೋವಾಗಳಲ್ಲಿಯೂ ಬಿಡುಗಡೆ ಮಾಡಲಾಗುವುದು. ಆನಂದ್ ಅಪ್ಪುಗೋಳ್ ಗೆಳೆಯರು ಇದನ್ನು ಬ್ರಿಟನ್, ಅಮೆರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲೂ ಕೂಡ ಬಿಡುಗಡೆ ಮಾಡಲಿದ್ದಾರಂತೆ. ಒಟ್ಟಿನಲ್ಲಿ ಕಳೆದ ವರ್ಷದ ಸೂಪರ್ ಹಿಟ್ ಚಿತ್ರ ಸಾರಥಿ ಕಿರುತೆರೆಯಲ್ಲಿ ಪ್ರಸಾರ ಕಂಡು ಬರಲಿರುವ 'ಸಂಗೊಳ್ಳಿ ರಾಯಣ್ಣ' ಮೇಲಿನ ನಿರೀಕ್ಷೆಯನ್ನಂತೂ ಹೆಚ್ಚಿಸಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/darshan-sarathi-adds-more-expectation-sangolli-rayanna-069202.html">« Previous</a>

More from Filmibeat

English summary
Darshan last year Super Hit Movie 'Sarathi' adds lot os expectations to his upcoming movie 'Sangolli Rayanna'. Sarathi, which was telecasted on 24th October 2012 at Udaya TV, recorded unexpected TRP. In this Sarathi created more expections for Darshan movie. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X