»   » ಪುನೀತ್ ಹೊಸ ಚಿತ್ರ ಏಪ್ರಿಲ್ ನಿಂದ ಶುರು..!

ಪುನೀತ್ ಹೊಸ ಚಿತ್ರ ಏಪ್ರಿಲ್ ನಿಂದ ಶುರು..!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಇಂದು. ನಾಟಿ @ 40 ಆಗಿರುವ ಅಪ್ಪು ಇವತ್ತು ಸಂಭ್ರಮದಲ್ಲಿದ್ದಾರೆ. ಇದರ ಪ್ರಯುಕ್ತ ಅಪ್ಪು ಅಭಿನಯಿಸಲಿರುವ ಎಲ್ಲಾ ಚಿತ್ರಗಳ ಫಸ್ಟ್ ಲುಕ್ ಪೋಸ್ಟರ್ಸ್ ರಿಲೀಸ್ ಆಗಿವೆ.

ದುನಿಯಾ ಸೂರಿ ಆಕ್ಷನ್ ಕಟ್ ನಲ್ಲಿ ಮೂಡಿ ಬರಲಿರುವ 'ದೊಡ್ಮನೆ ಹುಡುಗ', 'ಬಹದ್ದೂರ್' ಖ್ಯಾತಿಯ ಚೇತನ್ ನಿರ್ದೇಶನದ 'ಜೇಮ್ಸ್', ಶಿವಣ್ಣನ ಜೊತೆ 'PRODUCTION-A' ಫಸ್ಟ್ ಲುಕ್ ಪೋಸ್ಟರ್ ಔಟ್ ಆಗಿದೆ. ['ಅಣ್ಣಾಬಾಂಡ್' ಪುನೀತ್ ಜೇಮ್ಸ್ ಫಸ್ಟ್ ಲುಕ್ ಔಟ್]

Saravanan directorial Puneeth Rajkumar starrer Production No.1 First look poster out

ಇದೀಗ ಇದೇ ಸಾಲಿಗೆ 'PRODUCTION-1' ಪೋಸ್ಟರ್ ಕೂಡ ಔಟ್ ಆಗಿದೆ. ತಮಿಳು ನಿರ್ದೇಶಕ ಶರವಣನ್ ಜೊತೆ ಅಪ್ಪು ಸಿನಿಮಾ ಮಾಡುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. [ಪುನೀತ್ ಮುಂದಿನ ಚಿತ್ರಕ್ಕೆ ಕಾಲಿವುಡ್ ನಿರ್ದೇಶಕರು ಬರ್ತಾರೆ!]

ಈಗ ಆ ಚಿತ್ರಕ್ಕೆ ಏಪ್ರಿಲ್ ನಲ್ಲಿ ಚಾಲನೆ ಸಿಗಲಿದೆ. ಇದೇ ಖುಷಿಯಲ್ಲಿ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಕಾಲಿವುಡ್ ನಿರ್ದೇಶಕ ಶರವಣನ್ 'PRODUCTION-1' ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

Saravanan directorial Puneeth Rajkumar starrer Production No.1 First look poster out

ಸಿನಿಮಾಗೆ ಖುದ್ದು ಕಥೆ-ಚಿತ್ರಕಥೆ ರಚಿಸುತ್ತಿರುವ ಶರವಣನ್, ಟೈಟಲ್ ಇನ್ನೂ ಫಿಕ್ಸ್ ಮಾಡಿಲ್ಲ. ಆದ್ರೆ, ಕಲರ್ ಫುಲ್ ಆಗಿರುವ ಪೋಸ್ಟರ್ ಗಳನ್ನ ಬಿಡುಗಡೆ ಮಾಡಿ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದ್ದಾರೆ.[ಪುನೀತ್-ಶಿವಣ್ಣ-ರಾಘಣ್ಣ ಚಿತ್ರಕ್ಕೆ ಮುಹೂರ್ತ ಫಿಕ್ಸ್..!]

ವಿಶೇಷ ಅಂದ್ರೆ, ಅಪ್ಪು ಅಭಿನಯಿಸುವ ಈ ಚಿತ್ರಕ್ಕೆ ಟಾಲಿವುಡ್ ಹಿಟ್ ಮ್ಯೂಸಿಕ್ ಡೈರೆಕ್ಟರ್ ಎಸ್.ಎಸ್.ಥಮನ್ ಸಂಗೀತ ನೀಡಲಿದ್ದಾರೆ. ಅಲ್ಲಿಗೆ, ಈ ಸಿನಿಮಾ ಮ್ಯೂಸಿಕಲ್ ಹಿಟ್ ಆಗುವುದರಲ್ಲಿ ಡೌಟ್ ಇಲ್ಲ. (ಫಿಲ್ಮಿಬೀಟ್ ಕನ್ನಡ)

  English summary
  Power Star Puneeth Rajkumar starrer 'Production No.1' First look poster is out. The colourful poster which is released on the account of Appu's Birthday. 'Production No.1' is directed by Kollywood Director Saravanan.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X