»   » ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಪ್ರೀತಿಯ ಕಾಣಿಕೆ

ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಪ್ರೀತಿಯ ಕಾಣಿಕೆ

Posted By:
Subscribe to Filmibeat Kannada

ವರನಟ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಅಣ್ಣಾವ್ರ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಅಭಿಮಾನಿಗಳಂತೂ ಸಕಲ ತಯಾರಿ ನಡೆಸುತ್ತಿದ್ದಾರೆ. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]

ಇತ್ತ ಅಣ್ಣಾವ್ರ ಮಕ್ಕಳೂ ಕೂಡ ಅಪ್ಪಾಜಿಗಾಗಿ ಒಂದೊಂದು ಉಡುಗೊರೆ ನೀಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ 'ರಾಜಕುಮಾರ' ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಅಪ್ಪಾಜಿ ಜನ್ಮದಿನದಂದೇ ನಡೆಯಲಿದೆ. [ಪವರ್ ಸ್ಟಾರ್ ಅಭಿನಯದ ಹೊಸ ಚಿತ್ರಕ್ಕೆ 'ಅಣ್ಣಾವ್ರ' ಹೆಸರು]

Saravanan directorial Puneeth Rajkumar starrer Production No.1 to launch on April 25th

ಇದರೊಂದಿಗೆ ಅಪ್ಪು ಅಭಿನಯಿಸಲಿರುವ ಹೊಸ ಚಿತ್ರದ ಮುಹೂರ್ತ ಕೂಡ ಅಣ್ಣಾವ್ರ ಹುಟ್ಟುಹಬ್ಬದ ಬೆನ್ನಲ್ಲೇ ಏಪ್ರಿಲ್ 25 ರಂದು ನೆರವೇರಲಿದೆ. 'ಫಿಲ್ಮಿಬೀಟ್ ಕನ್ನಡ' ಈ ಹಿಂದೆ ವರದಿ ಮಾಡಿದಂತೆ ಕಾಲಿವುಡ್ ನಿರ್ದೇಶಕ ಸರವಣನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಾಗಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. [ಪುನೀತ್ ಹೊಸ ಚಿತ್ರ ಏಪ್ರಿಲ್ ನಿಂದ ಶುರು..!]

ರಾಜಕಾರಣಿ ಬಿ.ರಘುಪತಿ ಮೊಮ್ಮಗ ಲೋಹಿತ್ ನಿರ್ಮಾಣ ಮಾಡಲಿರುವ 'ಪ್ರೊಡಕ್ಷನ್ ನಂ.1' ಚಿತ್ರದ ಮುಹೂರ್ತ ಏಪ್ರಿಲ್ 25ಕ್ಕೆ ನಿಗದಿಯಾಗಿದೆ. ನಿರ್ದೇಶಕ ಸರವಣನ್ ಖುದ್ದು ಕಥೆ-ಚಿತ್ರಕಥೆ ರಚಿಸಿರುವ ಈ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. [ಡಾ.ರಾಜ್ ಹುಟ್ಟುಹಬ್ಬ ; ಎಲ್ಲೆಲ್ಲಿ ಏನೇನು ವಿಶೇಷ..?]

Saravanan directorial Puneeth Rajkumar starrer Production No.1 to launch on April 25th

ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಶುಭ ಸಂದರ್ಭದಲ್ಲೇ ಅಪ್ಪು ಅಭಿನಯದ ಎರಡು ಚಿತ್ರಗಳಿಗೆ ಚಾಲನೆ ಸಿಗುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ. (ಏಜೆನ್ಸೀಸ್)

English summary
Power Star Puneeth Rajkumar starrer 'Production No.1' will be launched on April 25th, the very next day of Dr.Rajkumar's Birthday. The movie is directed by Kollywood Director Saravanan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada