ಅಖಂಡ ಬ್ರಹ್ಮಾಚಾರಿ ಎದುರು ಸೀರೆ ತೊಟ್ಟ ಪೂನಂ ಪಾಂಡೆ

ಹೀಗೆ ಪಾರದರ್ಶಕ ಸೀರೆಯುಟ್ಟು ಬಂದ ಪೂನಂ ಪಾಂಡೆಯನ್ನು ನೋಡಿದ ಆಕೆಯ ಅಭಿಮಾನಿಗಳು ಅರ್ಥಾತ್ ವಿನಾಯಕನ ಭಕ್ತರು ಮುಸಿಮುಸಿ ನಕ್ಕಿದ್ದಾರೆ. ಆದರೆ ಕಳೆದ ವರ್ಷ ಚಡ್ಡಿ ಹಾಕಿಕೊಂಡು ಬಂದಿದ್ದ ಪೂನಂಳನ್ನು ಭಕ್ತರು ಸುತರಾಂ ಒಳಕ್ಕೆ ಬಿಟ್ಟುಕೊಂಡಿರಲಿಲ್ಲ. ಆಗ ಸಿಟ್ಟುಮಾಡಿಕೊಂಡು ಹೋಗಿದ್ದ ಪೂನಂ ಈ ಬಾರಿ ಸೀರೆಯುಟ್ಟು ತುಸು ನಾಚಿಕೆಯೊಂದಿಗೆ ಗಣೇಶನಿಗೆ ದರ್ಶನ ನೀಡಿದ್ದಾಳೆ (ಅಥವಾ ಗಣೇಶನ ದರ್ಶನ ಪಡೆದಿದ್ದಾಳೆ... ಅವರವರ ಭಕುತಿಗೆ ತಕ್ಕಂತೆ)!
ಚಡ್ಡಿ ಹಾಕದೆ ಪಾರದರ್ಶಕ ಸೀರೆಯಲ್ಲಿ 'ಕಾಣಿಸಿಕೊಂಡ' ಪೂನಂ: ಮುಂಬೈ ಆಜಾದ್ ನಗರದ ಸುವಿಖ್ಯಾತ ಅಂಧೇರಿ ರಾಜಾ ಗಣಪನ ಎದುರು ಭಾನುವಾರ ಸಂಜೆ ಪೂನಂ ಹೀಗೆ ಕಾಣಿಸಿಕೊಂಡಿದ್ದಾಳೆ. ಕಳೆದ ವರ್ಷ ವರ್ಜ್ಯಳಾಗಿದ್ದ ಪೂನಂಳನ್ನು ಈ ಬಾರಿ ಖುದ್ದು ಅಂಧೇರಿ ರಾಜಾ ಗಣೇಶನ ಮಂಡಳಿಯವರೇ ವಿಶೇಷ ಆಹ್ವಾನ ನೀಡಿ, ಪೂನಂಳ ಭಜನೆ ಮಾಡಿದ್ದಾರೆ.
ಆದರೂ ಈ ಬಾರಿ ಚಡ್ಡಿ ಹಾಕಿಕೊಳ್ಳದೆ ಇಷ್ಟೊಂದು ಪಾರದರ್ಶಕ ಸೀರೆಯಲ್ಲಿ 'ಕಾಣಿಸಿಕೊಂಡ' ಪೂನಂಳನ್ನು ನೋಡಿ ಹಿರಿಯರೊಬ್ಬರು ಕೆಂಗಣ್ಣುಬೀರಿದ್ದು ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು. ಅಂದಹಾಗೆ ಕಳೆದ ಬಾರಿ ಪೂನಂ ಚಡ್ಡಿ ಹಾಕಿಕೊಂಡು ಗಣೇಶನ ಪೆಂಡಾಲ್ ಎದುರು ಬಂದಾಗ 'ಭಕ್ತರನ್ನು' ನಿಭಾಯಿಸಲು ಮಂಡಳಿಯವರು ಪರದಾಡಿದ್ದರು.
ಮರೆತ ಮಾತು: ಇದು ನಿಜಕ್ಕೂ ಮರೆತಿದ್ದ ಮಾತೇ ಕಣ್ರೀ! ಪೂನಂ ಪಾಂಡೆ ಎಂಬ ಈ ರೂಪದರ್ಶಿ ತನ್ನ ಲೈಫಿನಲ್ಲಿ ಸೀರೆಯುಟ್ಟಿದ್ದು ಇದು ಎರಡನೆಯ ಬಾರಿ. ಹಿಂದೆ ಯಾವಾಗುಟ್ಟಿದ್ದಳು ಅಂತ ಮಾತ್ರ ಕೇಳಬೇಡಿ. ಗೆಪ್ತೀನೇ ಇಲ್ರಿ.


Click it and Unblock the Notifications











