Faceapp ಬಿಟ್ಟಾಕಿ ಈಗ ಸೀರೆಯಲ್ಲಿ ಸ್ಟಾರ್ಸ್ ಮಿಂಚಿಂಗ್: ಇದು ಹೊಸ ಟ್ರೆಂಡ್

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚಾಲೆಂಜ್ ಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಹೆಚ್ಚಾಗಿ ಫಿಟ್ ನೆಸ್ ಗೆ ಸಂಭಂದಿಸಿದ ವರ್ಕೌಟ್ ಚಾಲೆಂಜ್ ಆಗಾಗ ಸದ್ದು ಮಾಡುತ್ತಿರುತ್ತೆದೆ. ಮೊನ್ನೆ ಮೊನ್ನೆವರೆಗು ಬಾಟಲ್ ಕ್ಯಾಪ್ ಓಪನ್ ಚಾಲೆಂಜ್ ಮತ್ತು ಫೇಸ್ ಆಪ್ ಟ್ರೆಂಡಿಂಗ್ ನಲ್ಲಿತ್ತು. ಆದ್ರೀಗ ದಿಢೀರನೆ ಸೀರೆ ಟ್ರೆಂಡ್ ಶುರುವಾಗಿದೆ.

ಭಾರತೀಯ ಸಾಂಪ್ರದಾಯಿಕ ಉಡುಗೆ ಸೀರೆ ಧರಿಸಿ ನಾರಿಯರು ಮುಂಚುತ್ತಿದ್ದಾರೆ. ಎಷ್ಟೇ ತರಹೇವಾರಿ ಕಾಸ್ಟ್ಯೂಮ್ ಗಳು ಮಾರುಕಟ್ಟೆಯಲ್ಲಿ ರಾರಾಜಿಸಿದ್ದರು ಸೀರೆಯನ್ನು ಸೈಡ್ ಲೈನ್ ಮಾಡಲು ಯಾವುದೆ ಧರಿಸಿಗೂ ಸಾಧ್ಯವಾಗಿಲ್ಲ. ಸೀರೆಗೆ ಇರುವ ಮಹತ್ವ ಯಾವತ್ತು ಕಮ್ಮಿ ಆಗಲ್ಲ.

ಈ ಸೀರೆ ಈಗ ದಿಢೀರನೆ ಟ್ರೆಂಡ್ ಆಗಿ ಬಿಟ್ಟಿದೆ. ಟ್ವಿಟ್ಟರ್ ನಲ್ಲಿ ಹ್ಯಾಶ್ ಟ್ಯಾಗ್ ಹಾಕಿ ಸೀರೆಟ್ವಿಟ್ಟರ್ ಎನ್ನುವ ಹೊಸ ಅಭಿಯಾನ ಶುರುವಾಗಿದೆ. #sareetwitter ಈಗ ಬಾರಿ ಸದ್ದು ಮಾಡುತ್ತಿದೆ. ಬಾಲಿವುಡ್, ಸ್ಯಾಂಡಲ್ ವುಡ್ ನಟಿಯರೆಲ್ಲ ಸೀರೆ ಧರಿಸಿ ಪೋಸ್ ಕೊಟ್ಟು ಫೋಸ್ಟ್ ಮಾಡುತ್ತಿದ್ದಾರೆ. ನಾರಿಮಣಿಯರ ಜೊತೆಗೆ ನಟರು ಕೂಡ ಸೀರೆ ಧರಿಸಿ ಸೀರೆ ಟ್ರೆಂಡ್ ನಲ್ಲಿ ಭಾಗಿಯಾಗುತ್ತಿದ್ದಾರೆ.

ವೈರಲ್ ಆಗಿದೆ ಸೀರೆ ಟ್ರೆಂಡ್

ವೈರಲ್ ಆಗಿದೆ ಸೀರೆ ಟ್ರೆಂಡ್

ಸೀರೆ ಧರಿಸಿದ ಹೊಸ ಫೋಟೋವನ್ನೆ ಪೋಸ್ಟ್ ಮಾಡಬೇಕು ಅಂತೆನಿಲ್ಲ. ನಟಿಮಣಿಯರು ಸೀರಿ ಧರಿಸಿದ ಹಳೆಯ ಪೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೆವಲರು ಈ ಚಾಲೆಂಜ್ ಗಾಗಿ ಸೀರೆ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡು ಅಪ್ ಲೋಡ್ ಮಾಡಿದ್ರೆ ಇನ್ನು ಕೆಲವರು ಹಳೆಯ ಫೋಟೋವನ್ನು ಹರಿಬಿಟ್ಟು. ಸೀರೆ ಟ್ರೆಂಡ್ ಮಾಡುತ್ತಿದ್ದಾರೆ.

ಐಶ್ವರ್ಯ ರೈ, ರಮ್ಯಾ, ಪ್ರಿಯಾಂಕಾ ಗಾಂಧಿ

ಐಶ್ವರ್ಯ ರೈ, ರಮ್ಯಾ, ಪ್ರಿಯಾಂಕಾ ಗಾಂಧಿ

ಈ ಸೀರೆ ಟ್ರೆಂಡ್ ಪ್ರಾರಂಭವಾಗಿದ್ದೆ ಪ್ರಿಯಾಂಕಾ ಗಾಂಧಿ ಅವರಿಂದ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಪ್ರಿಯಾಂಕಾ ಗಾಂಧಿ ಇತ್ತೀಚಿಗಷ್ಟೆ ಅವರ ಮದುವೆ ಸಮಯದ ಒಂದು ಫೋಟೋವನ್ನು ಅಪ್ ಲೋಡ್ ಮಾಡಿದ್ದರು. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲಿಂದ ಪ್ರಾರಂಭವಾದ ಈ ಟ್ರೆಂಡ್ ಈಗ ವೈರಲ್ ಆಗಿದೆ. ಐಶ್ವರ್ಯ ರೈ, ಸ್ಯಾಂಡಲು ವುಡ್ ನಟಿ ರಮ್ಯಾ ಸೇರಿದಂತೆ ಅನೇಕರ ಸ್ಟಾರ್ ನಟಿಯರ ಸೀರೆ ಫೋಟೋಗಳು ಅಭಿಮಾನಿಗಳ ಗಮನ ಸಳೆಯುತ್ತಿದೆ.

ಸೀರೆಯಲ್ಲಿ ಸೋನಮ್ ಕಪೂರ್, ಶ್ರದ್ಧಾ ಕಪೂರ್

ಸೀರೆಯಲ್ಲಿ ಸೋನಮ್ ಕಪೂರ್, ಶ್ರದ್ಧಾ ಕಪೂರ್

ಸೀರೆ ಟ್ರೆಂಡ್ ನಲ್ಲಿ ಸೋನಂ ಕಪೂರ್ ಪೋಟೋ ಅಭಿಮಾನಿಗಳ ಗಮನ ಸಳೆಯುತ್ತಿದೆ. ಸೋನಂ ಸೀರೆ ಧರಿಸಿದ ಚಿಕ್ಕ ವಯಸ್ಸಿನ ಫೋಟೋ ಜೊತೆಗೆ ಈಗಿನ ಪೋಟೋವನ್ನು ಹೋಲಿಕೆ ಮಾಡಿ ಎರಡನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಕೂಡ ಸೀರೆಯಲ್ಲಿ ಮಿಂಚುತ್ತಿದ್ದಾರೆ.

ಸೀರೆಯಲ್ಲಿ ಸಾಮಾನ್ಯರು, ವಿದೇಶಿ ಮಹಿಳೆಯರು

ಸೀರೆಯಲ್ಲಿ ಸಾಮಾನ್ಯರು, ವಿದೇಶಿ ಮಹಿಳೆಯರು

ಸೆಲೆಬ್ರಿಟೆಗಳು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ಸೀರೆ ಧರಿಸಿ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ವಿಶೇಷ ಅಂದ್ರೆ ವಿದೇಶಿಯರು ಕೂಡ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಸೀರೆ ಉಡುವುದು ಅಷ್ಟು ಈಸಿಯಲ್ಲ. ಆದ್ರೆ ವಿದೇಶಿ ನಾರಿಯರು ಕಷ್ಟಪಟ್ಟು ಇಷ್ಟಪಟ್ಟು ಸೀರೆ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ. #sareetwitter ನಲ್ಲಿ ಸೀರೆಯುಟ್ಟ ನಾರಿಯರೆ ಮುಂಚುತ್ತಿದ್ದಾರೆ.

ನಾರಿಯರ ಜೊತೆ ಸೀರೆಯಲ್ಲಿ ಅಯುಷ್ಮಾನ್

ನಾರಿಯರ ಜೊತೆ ಸೀರೆಯಲ್ಲಿ ಅಯುಷ್ಮಾನ್

ಮಹಿಳೆಯರು ಮಾತ್ರವಲ್ಲದೆ ನಟ ಕೆಲ ನಟರು ಕೂಡ ಸೀರೆಯಲ್ಲಿ ಪೋಸ್ ನೀಡುತ್ತಿದ್ದಾರೆ. ನಟ ಆಯುಷ್ಮಾನ್ ಕುರಾನ ಸೀರೆ ಧರಿಸಿ ಮಹಿಳೆಯರ ಸೀರೆ ಟ್ರೆಂಡ್ ನಲ್ಲಿ ಭಾಗಿಯಾಗಿದ್ದಾರೆ. ಸಾಕಷ್ಟು ಜನ ಈ ಅಭಿಯಾನದಲ್ಲಿ ಭಾಗಿಯಾಗುತ್ತಿದ್ದಾರೆ. ಸೀರೆ ಧರಿಸಿದ ನಾರಿಯರು ಕ್ಯಾಮರಾಗೆ ತರಹೇವಾರಿ ಪೋಸ್ ಗಳನ್ನು ನೀಡುತ್ತ ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ.

ಕ್ರಿಕೆಟ್ ಮೈದಾನಕ್ಕೆ ನುಗ್ಗಿದ ಸೀರೆ ನಾರಿ

ಕ್ರಿಕೆಟ್ ಮೈದಾನಕ್ಕೆ ನುಗ್ಗಿದ ಸೀರೆ ನಾರಿ

ಸೀರೆ ಟ್ವಿಟ್ಟರ್ ಟ್ರೆಂಡ್ ಅನ್ನು ಬೀಟ್ ಮಾಡಿದ ಪೋಟೋ ಅಂದ್ರೆ ಸೀರೆ ಧರಿಸಿದ ಯುವತಿಯೊಬ್ಬಳು ಕ್ರಿಕೆಟ್ ಮೈದಾನಕ್ಕೆ ಏಕಾಏಕಿ ನುಗ್ಗಿದ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ತುಂಬಾ ಹಳೆಯದಾದ ವಿಡಿಯೋ ಆದ್ರು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೈದಾನಕ್ಕೆ ನುಗ್ಗಿ ನೆಚ್ಚಿನ ಆಟಗಾರನಿಗೆ ಕಿಸ್ ಮಾಡುವ ವಿಡಿಯೋ ಇದಾಗಿದೆ. ಸೀರೆ ಟ್ರೆಂಡ್ ಶುರುವಾಗುತ್ತಿದ್ದಂತೆ ಈ ವಿಡಿಯೋಗೆ ಈಗ ಜೀವ ಬಂದಿದೆ.

More from Filmibeat

English summary
Saree twitter trend is going viral in social media. women share beautiful pictures draped in their favorite saree.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X