'ಸರಿಗಮಪ' ಜ್ಞಾನೇಶ್ ಗೆ ಸಿಕ್ತು ಸಿನಿಮಾದಲ್ಲಿ ಹಾಡುವ ಅವಕಾಶ

By Pavithra

Recommended Video

ಸರಿಗಮಪ ಖ್ಯಾತಿಯ ಜ್ಞಾನೇಶ್ ಗೆ ಒಲಿದ ಅದೃಷ್ಟ..! | Filmibeat Kannada

'ಸರಿಗಮಪ' ಸೀಸನ್ 14 ಕಾರ್ಯಕ್ರಮದಲ್ಲಿ ಪ್ರತಿ ನೋಡುಗರಿಗೂ ಪ್ರಿಯವಾಗಿದ್ದ ಸ್ಪರ್ಧಿ ಜ್ಞಾನೇಶ್. ಆತನ ಮುಗ್ದತೆ ಹಾಗೂ ಧ್ವನಿಗೆ ಸಾವಿರಾರು ಜನರು ಅಭಿಮಾನಿಗಳಾಗಿದ್ದರು. ಅದಷ್ಟೇ ಅಲ್ಲದೆ ತೀರ್ಪುಗಾರರು ಕೂಡ ಜ್ಞಾನೇಶ್ ಧ್ವನಿಯನ್ನು ಮೆಚ್ಚಿಕೊಂಡಿದ್ದರು.

ಸೀಸನ್ 14 ನಲ್ಲಿ ಸುಮಧುರವಾಗಿ ಹಾಡಿ 'ಸರಿಗಮಪ' ಕಾರ್ಯಕ್ರಮದಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನೂ ಪಡೆದಿದ್ದರು. ಇಷ್ಟು ಚಂದವಾಗಿರುವ ಧ್ವನಿಯನ್ನು ಸಿನಿಮಾದಲ್ಲಿಯೂ ಬಳಸಿಕೊಳ್ಳಬೇಕು ಎಂದು ಸಾಕಷ್ಟು ಜನರು ಅಭಿಪ್ರಾಯ ಪಟ್ಟಿದ್ದರು. ಅದರಂತೆ ಇಂದು ಜ್ಞಾನೇಶ್ ಕನ್ನಡ ಚಿತ್ರದಲ್ಲಿ ಹಾಡಿದ್ದಾನೆ.

ಹಾಗಾದರೆ ಜ್ಞಾನೇಶ್ ಹಾಡಿರುವ ಚಿತ್ರ ಯಾವುದು? ಈ ಅವಕಾಶ ಹುಡುಕಿಕೊಂಡು ಬಂದಿದ್ದು ಹೇಗೆ? ಜ್ಞಾನೇಶ್ ಅಭಿಮಾನಿಗಳಿಗೆ ಈ ಹಾಡು ಕೇಳುವ ಅವಕಾಶ ಯವಾಗ ಸಿಗಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿ

ರಿಷಬ್ ಶೆಟ್ಟಿ ಚಿತ್ರಕ್ಕೆ ಹಾಡಿದ ಜ್ಞಾನೇಶ್

ರಿಷಬ್ ಶೆಟ್ಟಿ ಚಿತ್ರಕ್ಕೆ ಹಾಡಿದ ಜ್ಞಾನೇಶ್

ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು' ಸಿನಿಮಾದ ಒಂದು ಹಾಡನ್ನು 'ಸರಿಗಮಪ' ಸೀಸನ್ 14 ನ ರನ್ನರ್ ಅಪ್ ಜ್ಞಾನೇಶ್ ಅವರಿಂದ ಹಾಡಿಸಲಾಗಿದೆ. ಸದ್ಯ ರೆಕಾರ್ಡಿಂಗ್ ಮುಗಿಸಿರುವ ನಿರ್ದೇಶಕರು ಆದಷ್ಟು ಬೇಗ ಆಡಿಯೋ ರಿಲೀಸ್ ಮಾಡಲಿದ್ದಾರೆ.

ಬಳ್ಳಾರಿಯಿಂದ ಒಬ್ಬನೇ ಪ್ರಯಾಣ

ಬಳ್ಳಾರಿಯಿಂದ ಒಬ್ಬನೇ ಪ್ರಯಾಣ

ಜ್ಞಾನೇಶ್ ಸಿನಿಮಾಗೆ ಹಾಡಬೇಕು ಎಂದು ತಿಳಿದ ತಕ್ಷಣ ಬಳ್ಳಾರಿಯಿಂದ ಒಬ್ಬನೆ ಬಸ್ಸು ಹತ್ತಿ ಬೆಂಗಳೂರಿಗೆ ಬಂದಿದ್ದಾನೆ. ಈ ವಿಚಾರವನ್ನು ತಿಳಿದ ನಿರ್ದೇಶಕರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಜ್ಞಾನೇಶ್ ಅಭಿಮಾನಿ ಸಂಗೀತ ನಿರ್ದೇಶಕರು

ಜ್ಞಾನೇಶ್ ಅಭಿಮಾನಿ ಸಂಗೀತ ನಿರ್ದೇಶಕರು

'ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು' ಸಿನಿಮಾಗೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. 'ಸರಿಗಮಪ' ಕಾರ್ಯಕ್ರಮ ನೋಡಿಯೇ ಜ್ಞಾನೇಶ್ ಅವರಿಂದ ಹಾಡನ್ನು ಹಾಡಿಸಬೇಕು ಎನ್ನುವ ಆಸೆಯನ್ನು ಹೊಂದಿದ್ದರಂತೆ ವಾಸುಕಿ ವೈಭವ್. ಅದು ಈ ಚಿತ್ರದ ಮೂಲಕ ನನಸಾಗಿದೆ.

ಜುಲೈ 28ರಂದು ಜ್ಞಾನೇಶ್ ಹಾಡು ರಿಲೀಸ್

ಜುಲೈ 28ರಂದು ಜ್ಞಾನೇಶ್ ಹಾಡು ರಿಲೀಸ್

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಿರ್ಮಾಣ ಮಾಡಿರುವ 'ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು' ಚಿತ್ರದ ಆಡಿಯೋ ಜುಲೈ 28 ರಂದು ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಜ್ಞಾನೇಶ್ ಹಾಡಿರುವ ಹಾಡನ್ನ ಇಂದು ಸಂಜೆ ನಾಲ್ಕು ಗಂಟೆಗೆ ಚಿತ್ರತಂಡ ಬಿಡುಗಡೆ ಮಾಡುತ್ತಿದೆ.

More from Filmibeat

English summary
Saregamapa Season 14 Runner Up Jnanenesh sings for the first time in Kannada movie. Sa.Hi.Pra.Shaale, Kasaragodu kannada movie Directed by Rishab Shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X