ಮೊದಲ ಸಿನಿಮಾ ಹಾಡು ಹಾಡಿದ 'ಸರಿಗಮಪ' ಶ್ರೀ ಹರ್ಷ
ಜೀ ಕನ್ನಡ ವಾಹಿನಿಯ 'ಸರಿಗಮಪ ಸೀಸನ್ 13' ಕಾರ್ಯಕ್ರಮದ ಸ್ಪರ್ಥಿ ಆಗಿದ್ದ ಶ್ರೀ ಹರ್ಷ ಈಗ ಸಿನಿಮಾ ಹಾಡನ್ನು ಹಾಡಿದ್ದಾರೆ. ಕಾರ್ಯಕ್ರಮದಲ್ಲಿ ಹಾಡಿ ಎಲ್ಲರ ಮನ ಗೆದಿದ್ದ ಶ್ರೀ ಹರ್ಷಗೆ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ.
'ಪುಣ್ಯಾತ್ ಗಿತ್ತಿಯರು' ಎಂಬ ಹೊಸ ಕನ್ನಡ ಸಿನಿಮಾದಲ್ಲಿ ಶ್ರೀ ಹರ್ಷ ಒಂದು ಹಾಡನ್ನು ಹಾಡಿದ್ದಾರೆ. ಈ ಹಿಂದೆ 'ಪಾಸಿಬಲ್' ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಜ್.ಬಿ.ಎನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ಹರ್ಷ ಅವರ ಹಾಡಿನ ರೆಕಾರ್ಡಿಂಗ್ ಸದ್ಯ ಮುಗಿದಿದೆ. ಚಿತ್ರಕ್ಕೆ ರಾಮನುಜಂ ಸಂಗೀತ ನೀಡಿದ್ದಾರೆ. ಚಿತ್ರದ ಇನ್ನೊಂದು ಹಾಡನ್ನು ಸುಪ್ರಿಯಾ ಲೋಹಿತ್ ಹಾಡಿದ್ದಾರೆ.

'ಪುಣ್ಯಾತ್ ಗಿತ್ತಿಯರು' ಸಿನಿಮಾದಲ್ಲಿ ಒಟ್ಟು 5 ನಾಯಕಿಯರು ಇದ್ದಾರೆ. ಇವರ ಪೈಕಿ ಜೀ ಕನ್ನಡ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ದಿವ್ಯ ಕೂಡ ಒಬ್ಬರಾಗಿದ್ದಾರೆ. ಇತ್ತೀಚಿಗಷ್ಟೆ ಸರಿಗಪಮ ಕಾರ್ಯಕ್ರಮದ ಮತ್ತೊಬ್ಬ ಸ್ಪರ್ಧಿ ಸಂಚಿತ್ ಹೆಗ್ಡೆ 'ಕಾಲೇಜ್ ಕುಮಾರ್' ಮತ್ತು 'ಚಮಕ್' ಚಿತ್ರದಲ್ಲಿ ಹಾಡಿದ್ದರು. ಈಗ ಶ್ರೀ ಹರ್ಷ ಕೂಡ ಸಿನಿಮಾದಲ್ಲಿ ಹಾಡಿದ್ದಾರೆ.


Click it and Unblock the Notifications











