»   » ಪುನೀತ್ ಹುಟ್ಟುಹಬ್ಬಕ್ಕೆ 'ಸರಿಗಮಪ' ಆಧ್ಯ ಕೊಟ್ಟ ಸರ್ಪ್ರೈಸ್

ಪುನೀತ್ ಹುಟ್ಟುಹಬ್ಬಕ್ಕೆ 'ಸರಿಗಮಪ' ಆಧ್ಯ ಕೊಟ್ಟ ಸರ್ಪ್ರೈಸ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಸ್ಟಾರ್ ಸೆಲೆಬ್ರಿಟಿಗಳಿಂದ ಹಿಡಿದು ಸಾವಿರಾರೂ ಅಭಿಮಾನಿಗಳು ವಿಶ್ ಮಾಡಿದ್ರು. ಪುನೀತ್ ಅವರ ನಿವಾಸದ ಬಳಿ ಆಗಮಿಸಿ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಅಪ್ಪು ಅವರ ಬರ್ತ್ ಡೇಯನ್ನ ಸೆಲೆಬ್ರೇಟ್ ಮಾಡಿದ್ದರು.[ಪುನೀತ್ ಹುಟ್ಟುಹಬ್ಬಕ್ಕೆ 'ಬಿಗ್ ಬಾಸ್ ಪ್ರಥಮ್' ಕೊಟ್ಟ ದುಬಾರಿ ಗಿಫ್ಟ್?]

ಆದ್ರೆ, ಸರಿಗಮಪ ಖ್ಯಾತಿಯ ಪುಟಾಣಿ ಆಧ್ಯ ಮಾತ್ರ, ತನ್ನದೇ ಆದ ಸ್ಟೈಲ್ ನಲ್ಲಿ ತಮ್ಮ ನೆಚ್ಚಿನ ಪುನೀತ್ ರಾಜ್ ಕುಮಾರ್ ವಿಭಿನ್ನವಾಗಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಸೆಲ್ಫಿ ವಿಡಿಯೋ ಮಾಡುವ ಮೂಲಕ ಅಪ್ಪುಗೆ ಡೆಡಿಕೇಟ್ ಮಾಡಿ ಬರ್ತ್ ಡೇ ವಿಶ್ ಮಾಡಿದೆ ಈ ಪುಟಾಣಿ ಆಧ್ಯ.[ಪುನೀತ್ 'ರಾಜಕುಮಾರ' ಹುಟ್ಟುಹಬ್ಬಕ್ಕೆ ಟಪ್ಪಾಂಗುಚ್ಚಿ ಗಿಫ್ಟ್: ಕುಣಿದು ಕುಪ್ಪಳಿಸಿ..]

SaRiGaMaPa Adhya Wish to Puneeth Rajkumar

'ರಾಜಕುಮಾರ' ಚಿತ್ರದ ''ಬೊಂಬೆ ಹೇಳುತೈತೆ....ಬೊಂಬೆ ಹೇಳುತೈತೆ....ನೀನೇ ರಾಜಕುಮಾರ'' ಹಾಡನ್ನ ಹಾಡುವುದರ ಮೂಲಕ ಪವರ್ ಸ್ಟಾರ್ ಗೆ ತಮ್ಮ ಕಡೆಯಿಂದ ಸ್ಪೆಷಲ್ ಆಗಿ ವಿಶ್ ಮಾಡಿ ಗಮನ ಸೆಳೆದಿದೆ ಆಧ್ಯ ಪುಟಾಣಿ. ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅವರು ನಿನ್ನೆಯಷ್ಟೆ (ಮಾರ್ಚ್ 17) ತಮ್ಮ 42ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು.

ಪುನೀತ್ ರಾಜ್ ಕುಮಾರ್ ಅವರಿಗೆ ಸರಿಗಮಪ ಆಧ್ಯ ವಿಶ್ ಮಾಡಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

English summary
SaRiGaMaPa Fame Little Star Adhya Wish to Puneeth Rajkumar For His 42nd Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada