ಅಕ್ಟೋಬರ್ 17ಕ್ಕಾಗಿ ಕಾಯುತ್ತಿದೆ ಸರ್ಜಾ ಮತ್ತು ಮೇಘನಾ ಕುಟುಂಬ
ಸರ್ಜಾ ಕುಟುಂಬ ಅಕ್ಟೋಬರ್ 17ಕ್ಕಾಗಿ ಕಾತರದಿಂದ ಕಾಯುತ್ತಿದೆ. ಚಿರು ಸರ್ಜಾ ಅಗಲಿಕೆಯ ನೋವಿನಿಂದ ಕುಟುಂಬ ಇನ್ನೂ ಹೊರಬಂದಿಲ್ಲ. ದುಃಖದಲ್ಲಿರುವ ಕುಟುಂಬಕ್ಕೆ ಸಂತೋಷದ ಘಳಿಗೆ ಹತ್ತಿರ ಬರುತ್ತಿದೆ. ಅಕ್ಟೋಬರ್ 17ರಂದು ಚಿರು ಸರ್ಜಾ ಪತ್ನಿ ಮೇಘನಾ ರಾಜ್ ಮಡಿಲಿನಲ್ಲಿ ಮಗುವಿನ ನಗು ಕೇಳಿಸಲಿದೆ. ಆ ನಗುವಿಗಾಗಿ ಇಡೀ ಕುಟುಂಬ ಎದುರು ನೋಡುತ್ತಿದೆ.
Recommended Video
ವಿಶೇಷ ಅಂದರೆ ಅಕ್ಟೋಬರ್ 17 ಚಿರಂಜೀವಿ ಸರ್ಜಾ ಹುಟ್ಟಿದ್ದ ದಿನ. ಚಿರು ಹುಟ್ಟಿದ ದಿನದಂದೆ ಚಿರಂಜೀವಿ ಅವರ ಮಗುವಿನ ಜನನದ ಮೂಲಕ ಮರುರೂಪ ನೋಡಲು ಇಡಿ ಸರ್ಜಾ ಕುಟುಂಬ ಕಾಯುತ್ತಿದೆ. ಇದೇ ದಿನ ಧ್ರುವ ಸರ್ಜಾ ತನ್ನ ಗಡ್ಡಕ್ಕೆ ಕತ್ತರಿ ಹಾಕುತ್ತಿದ್ದಾರಂತೆ. ಜೊತೆಗೆ ಅದೇ ದಿನ ಧ್ರುವ ಸರ್ಜಾ ಸಿನಿಮಾದ ಮುಹೂರ್ತ ಕೂಡ ನಡೆಯುತ್ತಿದೆಯಂತೆ.
ಚಿರಂಜೀವಿ ಸರ್ಜಾ ಇದ್ದಿದ್ದರೆ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೀಗ ಚಿರು ನೆನಪು ಮಾತ್ರ. ಅದರೆ ಅದೇ ವಿಶೇಷ ದಿನದಂದು ಮರಿ ಚಿರು ಸರ್ಜಾ ಆಗಮವಾಗುತ್ತಿರುವುದು ಸರ್ಜಾ ಮತ್ತು ಮೇಘನಾ ಕುಟುಂಬದಲ್ಲಿ ಮತ್ತೆ ಸಂತೋಷ ಮನೆಮಾಡಲಿದೆ. ಸರ್ಜಾ ಕುಟುಂಬಕ್ಕೆ ಇನ್ಮುಂದೆಯಾದ್ರು ಸಂತೋಷದ ದಿನಗಳು ಬರಲಿ ಬರಲಿ ಎನ್ನುವುದೇ ಅಭಿಮಾನಿಗಳ ಆಶಯ.

ಇತ್ತೀಚಿಗಷ್ಟೆ ಮೇಘನಾ ರಾಜ್ ಅವರ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಸರ್ಜಾ ಮತ್ತು ಮೇಘನಾ ಕುಟುಂಬ ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅದೇ ದಿನ ಧ್ರುವ ಸರ್ಜಾ ಅವರು ಹುಟ್ಟುಹಬ್ಬ ಸಹ ಆಚರಿಸಿಕೊಂಡಿದ್ದಾರೆ. ಇಡೀ ಕುಟುಂಬ ಸಂಭ್ರಮದಲ್ಲಿ ಭಾಗಿಯಾಗಿತ್ತು.


Click it and Unblock the Notifications











