twitter
    For Quick Alerts
    ALLOW NOTIFICATIONS  
    For Daily Alerts

    ಏನಿದು?, ಚೆನ್ನೈಗಿಂತ ಬೆಂಗಳೂರಿನಲ್ಲಿಯೇ 'ಸರ್ಕಾರ್'ಗೆ ಹೆಚ್ಚು ಶೋ!

    |

    Recommended Video

    ಚೆನ್ನೈಗಿಂತ ಬೆಂಗಳೂರಿನಲ್ಲೇ ತಮಿಳು ಸಿನಿಮಾ ಸರ್ಕಾರ್ ಗೆ ಹೆಚ್ಚು ಶೋಗಳು | FILMIBEAT KANNADA

    ಹಬ್ಬದ ದಿನ ಸಾಮಾನ್ಯವಾಗಿ ಹೊಸ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಕಾಲಿಡುತ್ತವೆ. ಅದೇ ರೀತಿ ಇಂದು ತಮಿಳಿನ ಬಹುನಿರೀಕ್ಷಿತ ಸಿನಿಮಾ 'ಸರ್ಕಾರ್' ಅದ್ಧೂರಿಯಾಗಿ ಬಿಡುಗಡೆಯಾಗಿದೆ.

    ಇಳಯದಳಪತಿ ವಿಜಯ್ ಹಾಗೂ ಕೀರ್ತಿ ಸುರೇಶ್ ಅಭಿನಯದ ಈ ಸಿನಿಮಾ ಇಡೀ ದಕ್ಷಿಣ ಭಾರತದಲ್ಲಿ ದೊಡ್ಡ ಕ್ರೇಜ್ ಹುಟ್ಟು ಹಾಕಿದೆ. ಎ ಆರ್ ಮುರುಘದಾಸ್ ಹಾಗೂ ವಿಜಯ್ ಮತ್ತೆ ಒಂದಾಗಿದ್ದು, ಸಿನಿಮಾ ಹೆಚ್ಚು ನಿರೀಕ್ಷೆ ಸೃಷ್ಟಿ ಮಾಡಿದೆ.

    ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ಬಂದ್ರು ತಮಿಳಿನ ಪ್ರಖ್ಯಾತ ನಿರ್ದೇಶಕ.! ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ಬಂದ್ರು ತಮಿಳಿನ ಪ್ರಖ್ಯಾತ ನಿರ್ದೇಶಕ.!

    ಪರಭಾಷಾ ಸಿನಿಮಾಗಳಿಗೆ ಬೆಂಗಳೂರು ತವರು ಮನೆ ಇದ್ದ ಹಾಗೆ. ತಮಿಳು ತೆಲುಗು, ಹಿಂದಿಯ ದೊಡ್ಡ ಸಿನಿಮಾಗಳು ಬಂದರೆ, ಅವು ಕನ್ನಡ ಚಿತ್ರಗಳಿಗೆ ಪೈಪೋಟಿ ನೀಡುವ ಮಟ್ಟಿಗೆ ರಿಲೀಸ್ ಆಗುತ್ತದೆ.

    ಅಂದಹಾಗೆ, ಈಗ 'ಸರ್ಕಾರ್' ಚಿತ್ರ ಕೂಡ ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಬಿಡುಗಡೆಯಾಗಿದೆ. ಇದು ಅನೇಕ ಕನ್ನಡ ಸಿನಿ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದೆ ಓದಿ....

    ದಿನಕ್ಕೆ 630+ ಶೋಗಳು

    ದಿನಕ್ಕೆ 630+ ಶೋಗಳು

    ಬೆಂಗಳೂರಿನಲ್ಲಿ 'ಸರ್ಕಾರ್' ಸಿನಿಮಾ ಸರ್ವಾಧಿಕಾರ ನಡೆಸಿದೆ. ಒಂದು ದಿನಕ್ಕೆ 630+ ಶೋಗಳನ್ನು ಚಿತ್ರಕ್ಕೆ ನೀಡಲಾಗಿದೆ. ಬೆಂಗಳೂರಿನ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬಂದಿದೆ. ಇದರಲ್ಲಿ ಸಿಂಗಲ್ ಸ್ಕೀನ್ ಹಾಗೂ ಮಲ್ಟಿಪ್ಲೆಕ್ಸ್ ಗಳು ಸೇರಿವೆ.

    ಚೆನ್ನೈನಲ್ಲಿ 35+, ಬೆಂಗಳೂರಿನಲ್ಲಿ 80+ ಚಿತ್ರಮಂದಿರಗಳು

    ಚೆನ್ನೈನಲ್ಲಿ 35+, ಬೆಂಗಳೂರಿನಲ್ಲಿ 80+ ಚಿತ್ರಮಂದಿರಗಳು

    ಬುಕ್ ಮೈ ಶೋ ಪ್ರಕಾರ 'ಸರ್ಕಾರ್' ಸಿನಿಮಾ ಬೆಂಗಳೂರಿನ 80+ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದೆ. ಆದರೆ, ಚೆನ್ನೈನಲ್ಲಿ 35+ ಥಿಯೇಟರ್ ಗಳಲ್ಲಿ ತೆರೆಗೆ ಬಂದಿದೆ. ಅಲ್ಲಿಗೆ ಹೋಲಿಸಿದರೆ ಇಲ್ಲಿಯೇ ಹೆಚ್ಚು ಚಿತ್ರಮಂದಿರಗಳನ್ನು ಸಿನಿಮಾಗೆ ನೀಡಲಾಗಿದೆ. ಅಚ್ಚರಿ ಎನ್ನಿಸಿದರೂ ಇದೇ ಸತ್ಯ.

    ತಮಿಳುನಾಡಿನಲ್ಲೊಬ್ಬ 'ಅಣ್ತಮ್ಮ': ಬ್ರದರ್ ಗೆ ವಿಶ್ ಮಾಡಿದ 'ರಾಜಾಹುಲಿ' ತಮಿಳುನಾಡಿನಲ್ಲೊಬ್ಬ 'ಅಣ್ತಮ್ಮ': ಬ್ರದರ್ ಗೆ ವಿಶ್ ಮಾಡಿದ 'ರಾಜಾಹುಲಿ'

    ಕೆಲ ಮಲ್ಟಿಪ್ಲೆಕ್ಸ್ ಗಳಲ್ಲಿ ದಿನಕ್ಕೆ 14 ಶೋ

    ಕೆಲ ಮಲ್ಟಿಪ್ಲೆಕ್ಸ್ ಗಳಲ್ಲಿ ದಿನಕ್ಕೆ 14 ಶೋ

    ಬೆಂಗಳೂರಿನಲ್ಲಿ ಕೆಲ ಮಲ್ಟಿಪ್ಲೆಕ್ಸ್ ಗಳಲ್ಲಿ ಇಡೀ ದಿನ ಸರ್ಕಾರ್' ಸಿನಿಮಾವನ್ನು ಓಡಿಸುತ್ತಿದ್ದಾರೆ. ವೈಟ್ ಫೀಲ್ಡ್, ಯಶವಂತಪುರ ಹಾಗೂ ಮಾರತ್ ಹಳ್ಳಿಯ ಪಿ ವಿ ಆರ್ ಗಳಲ್ಲಿ ಒಂದು ದಿನಕ್ಕೆ ಬರೋಬ್ಬರಿ 14 ಶೋ ಗಳನ್ನು 'ಸರ್ಕಾರ್'ಗೆ ಕೊಟ್ಟಿದ್ದಾರೆ.

    'ಸರ್ಕಾರ್' ದಾಖಲೆಯ ಶೋ

    'ಸರ್ಕಾರ್' ದಾಖಲೆಯ ಶೋ

    ಬಿಡುಗಡೆಯಾದ ಮೊದಲ ದಿನ ಬೆಂಗಳೂರಿನಲ್ಲಿ ಅತಿ ಹೆಚ್ಚು ಶೋ ಪಡೆದ ತಮಿಳು ಸಿನಿಮಾ ಎಂಬ ದಾಖಲೆ 'ಸರ್ಕಾರ್' ಮಾಡಿದೆ. ಈ ಹಿಂದೆ 'ಕಬಾಲಿ' ಸಿನಿಮಾದ ಮೂಲಕ ರಜನಿ ಮಾಡಿದ್ದ ದಾಖಲೆಯನ್ನು ವಿಜಯ್ ಮುರಿದಿದ್ದಾರೆ. 'ಮೊದಲ ದಿನ ಕಬಾಲಿ' ಸಿನಿಮಾ 580+ ಬಾರಿ ಪ್ರದರ್ಶನ ಆಗಿತ್ತು.

    ಸೈಮಾ ಪ್ರಶಸ್ತಿ 2018: ಅವಾರ್ಡ್ ಪಡೆದ ತಮಿಳು ತಾರೆಯರ ಪಟ್ಟಿ ಸೈಮಾ ಪ್ರಶಸ್ತಿ 2018: ಅವಾರ್ಡ್ ಪಡೆದ ತಮಿಳು ತಾರೆಯರ ಪಟ್ಟಿ

    ಬೆಂಗಳೂರಿನಲ್ಲಿ ಸದ್ದು ಮಾಡಿದ್ದ ಚಿತ್ರಗಳು

    ಬೆಂಗಳೂರಿನಲ್ಲಿ ಸದ್ದು ಮಾಡಿದ್ದ ಚಿತ್ರಗಳು

    ರಾಜಮೌಳಿ ನಿರ್ದೇಶನದ 'ಬಾಹುಬಲಿ' (ಪಾರ್ಟ್ 1, 2) ರಜನಿಕಾಂತ್ ಅಭಿನಯದ 'ಕಬಾಲಿ' ಹಾಗೂ ವಿಜಯ್ ಅವರ ಹಿಂದಿನ ಸಿನಿಮಾ 'ಮೆರ್ಸಲ್' ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರದರ್ಶನ ಕಂಡ ಸಿನಿಮಾಗಳಾಗಿವೆ. ಇನ್ನೊಂದು ಕಡೆ '2.O' ಸಿನಿಮಾ ಬಂದಾಗ ಏನಾಗುತ್ತದೆ ಎಂಬ ಆತಂಕ ಮೂಡಿದೆ.

    ಕನ್ನಡ ಸಿನಿ ಪ್ರಿಯರ ಆಕ್ರೋಶ

    ಕನ್ನಡ ಸಿನಿ ಪ್ರಿಯರ ಆಕ್ರೋಶ

    'ಸರ್ಕಾರ್' ಸಿನಿಮಾಗೆ ಇಷ್ಟೊಂದು ಶೋಗಳನ್ನು ನೀಡಿರುವುದು ಅನೇಕರ ಕನ್ನಡ ಸಿನಿ ಪ್ರಿಯರಿಗೆ ಅಸಮಾಧಾನ ಉಂಟು ಮಾಡಿದೆ. ಕನ್ನಡ ನೆಲದಲ್ಲಿ ವಿಜಯ್ ಸರ್ವಾಧಿಕಾರ ಅನೇಕರಿಗೆ ಖಾರ ವಾಗಿದೆ. ಇನ್ನು ಬೆಳಗ್ಗೆ ಆರು ಗಂಟೆಗೆ ಚಿತ್ರದ ಪ್ರದರ್ಶನ ಬೆಂಗಳೂರಿನಲ್ಲಿ ಶುರುವಾಗಿದೆ.

    English summary
    Tamil actor Vijay's 'Sarkar' movie got 600+ shows in first day at Bengaluru.
    Tuesday, November 6, 2018, 12:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X