twitter
    For Quick Alerts
    ALLOW NOTIFICATIONS  
    For Daily Alerts

    ವಿಜಯ್ 'ಸರ್ಕಾರ್'ಗೆ ಭಾರಿ ವಿರೋಧ, ಥಿಯೇಟರ್ ದ್ವಂಸ, ಕಾರಣ 'ಅಮ್ಮ'.!

    |

    ತಮಿಳಿನ ಕೆಲವು ನಟರು ಅಭಿನಯದ ಚಿತ್ರಗಳು ವಿವಾದಕ್ಕೆ ಗುರಿಯಾಗುವುದು ಸಾಮಾನ್ಯವಾಗಿದೆ. ರಜನಿಕಾಂತ್, ಕಮಲ್ ಹಾಸನ್, ವಿಜಯ್ ಅಂತಹ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುವಾಗ ಒಂದಲ್ಲ ಒಂದು ವಿಷ್ಯಕ್ಕೆ ರಾಜಕೀಯವಾಗಿ ವಿವಾದಕ್ಕೆ ಸಿಲುಕಿಕೊಳ್ಳುತ್ತೆ.

    ಈಗ ವಿಜಯ್ ಅಭಿನಯದ 'ಸರ್ಕಾರ್' ಸಿನಿಮಾಗೂ ಈ ವಿವಾದ ಅಂಟಿಕೊಂಡಿದೆ. 'ಸರ್ಕಾರ್' ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನವಾಗ್ತಿದೆ. ಕೇವಲ ಎರಡೇ ದಿನಕ್ಕೆ ನೂರು ಕೋಟಿ ಗಳಿಸಿದೆ ಎಂದು ಹೇಳಲಾಗ್ತಿದೆ.

    ತಮಿಳಿನ 'ಸರ್ಕಾರ್‌' ಚಿತ್ರದ ವಿರುದ್ಧ 'ಅಮ್ಮಾ' ಅಭಿಮಾನಿಗಳ ಪ್ರತಿಭಟನೆ

    ಹೀಗಿರುವಾಗ, ಸರ್ಕಾರ್ ಚಿತ್ರಕ್ಕೆ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಗಲಾಟೆ ಮಾಡಿ, ಥಿಯೇಟರ್ ದ್ವಂಸ ಮಾಡಿರುವ ಘಟನೆಗಳು ವರದಿಯಾಗಿದೆ. ಇದಕ್ಕೆ ಕಾರಣ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ. ಅಷ್ಟಕ್ಕೂ, 'ಸರ್ಕಾರ್' ಚಿತ್ರಕ್ಕೆ ಅಮ್ಮನ ಪಕ್ಷದವರು ವಿರೋಧ ತೋರುತ್ತಿರುವುದು ಯಾಕೆ.? ಮುಂದೆ ಓದಿ.....

    ಜಯಲಲಿತಾ ಪಾತ್ರ ಇದೆ.?

    ಜಯಲಲಿತಾ ಪಾತ್ರ ಇದೆ.?

    'ಸರ್ಕಾರ್' ಸಿನಿಮಾದಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಪ್ರತಿಪಕ್ಷದ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಕೆಯ ಹೆಸರು ಕೋಮಲವಲ್ಲಿ. ಇದು ಪರೋಕ್ಷವಾಗಿ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನ ಹೋಲುತ್ತಿದೆ. ಅಷ್ಟೇ ಅಲ್ಲದೇ ಕೋಮಲವಲ್ಲಿ ಎಂಬುದು ಜಯಲಲಿತಾ ಅವರ ಮೂಲ ಹೆಸರು ಎಂದು ಹೇಳಲಾಗ್ತಿದೆ. ಆಕೆ ನಟಿಸಿರುವ ಕೆಲವು ದೃಶ್ಯಗಳು ಜಯಲಲಿತಾ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಿದೆ ಎಂದು ಟೀಕಿಸಲಾಗುತ್ತಿದೆ.

    ಅಮ್ಮನಿಗೆ ಅವಹೇಳನ ಮಾಡಲಾಗಿದೆ

    ಅಮ್ಮನಿಗೆ ಅವಹೇಳನ ಮಾಡಲಾಗಿದೆ

    'ಸರ್ಕಾರ್' ಚಿತ್ರದಲ್ಲಿ ಸರ್ಕಾರವು ಜನಗಳಿಗೆ ಉಚಿತವಾಗಿ ನೀಡುವ ವಸ್ತುಗಳನ್ನು ಬೆಂಕಿಗೆ ಹಾಕುವ ದೃಶ್ಯಯವಿದೆ. ಅದರಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಜನರಿಗೆ ಉಚಿತವಾಗಿ ನೀಡಿದ್ದ ವಸ್ತುಗಳೂ ಇವೆ. ಹಾಗಾಗಿ ಈ ದೃಶ್ಯದ ಮೂಲಕ ಜಯಲಲಿತಾ ಅವರಿಗೆ ಅವಮಾನ ಮಾಡಲಾಗಿದೆ ಎಂದು ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಮತ್ತು ಜಯಲಲಿತಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

    'ಸರ್ಕಾರ್' ಚಿತ್ರದಲ್ಲಿ ಜಯಲಲಿತಾ ವಿಲನ್, ಎಐಎಡಿಎಂಕೆ ಕಿಡಿ

    ದೃಶ್ಯ ಮ್ಯೂಟ್ ಮಾಡಲು ನಿರ್ಧಾರ

    ದೃಶ್ಯ ಮ್ಯೂಟ್ ಮಾಡಲು ನಿರ್ಧಾರ

    ಸದ್ಯ ಆಡಳಿತ ಪಕ್ಷದಲ್ಲಿರುವ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ್ ಚಿತ್ರತಂಡ ಎಚ್ಚೆತ್ತುಕೊಂಡಿದೆ. ವರಲಕ್ಷ್ಮಿ ಅವರ ಕೆಲವು ಸನ್ನಿವೇಶಗಳನ್ನ ಮ್ಯೂಟ್ ಮಾಡಲು ನಿರ್ಧರಿಸಿದೆ. ಇನ್ನು ಕೆಲವು ದೃಶ್ಯಗಳನ್ನ ಚಿತ್ರದಿಂದ ತೆಗೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

    ಕರ್ನಾಟಕದ ಗಲ್ಲಾಪೆಟ್ಟಿಗೆ ಶೇಕ್ ಮಾಡಿದ 'ಸರ್ಕಾರ್', ಎರಡೇ ದಿನಕ್ಕೆ ದಾಖಲೆ.!ಕರ್ನಾಟಕದ ಗಲ್ಲಾಪೆಟ್ಟಿಗೆ ಶೇಕ್ ಮಾಡಿದ 'ಸರ್ಕಾರ್', ಎರಡೇ ದಿನಕ್ಕೆ ದಾಖಲೆ.!

    ಮುರುಗದಾಸ್ ವಿರುದ್ಧ ದೂರು

    ಮುರುಗದಾಸ್ ವಿರುದ್ಧ ದೂರು

    ಆಡಳಿತ ಪಕ್ಷದ ವಿರುದ್ಧ ಜನರನ್ನ ಎತ್ತು ಕಟ್ಟುವಂತಹ ಕಥೆ ಮತ್ತು ಚಿತ್ರಕಥೆಯನ್ನ ನಿರ್ದೇಶಕರು ಮಾಡಿದ್ದಾರೆ. ಇದು ಶಾಂತಿಗೆ ಧಕ್ಕೆ ಬರುವಂತಹ ಸಿನಿಮಾ ಎಂದು ಆರೋಪಿಸಿ ವ್ಯಕ್ತಿಯೊಬ್ಬ ನಿರ್ದೇಶಕ ಮುರುಗದಾಸ್ ವಿರುದ್ಧ ದೂರು ದಾಖಲಿಸಿದ್ದಾರಂತೆ.

    ಏನಿದು?, ಚೆನ್ನೈಗಿಂತ ಬೆಂಗಳೂರಿನಲ್ಲಿಯೇ 'ಸರ್ಕಾರ್'ಗೆ ಹೆಚ್ಚು ಶೋ!ಏನಿದು?, ಚೆನ್ನೈಗಿಂತ ಬೆಂಗಳೂರಿನಲ್ಲಿಯೇ 'ಸರ್ಕಾರ್'ಗೆ ಹೆಚ್ಚು ಶೋ!

    'ಮೆರ್ಸಲ್' ಚಿತ್ರಕ್ಕೂ ವಿವಾದ

    'ಮೆರ್ಸಲ್' ಚಿತ್ರಕ್ಕೂ ವಿವಾದ

    ಅಂದ್ಹಾಗೆ, ವಿಜಯ್ ಚಿತ್ರಕ್ಕೆ ಈ ರೀತಿ ರಾಜಕೀಯ ವಿವಾದ ಅಂಟಿಕೊಂಡಿದ್ದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ತೆರೆಕಂಡಿದ್ದ 'ಮೆರ್ಸಲ್' ಚಿತ್ರಕ್ಕೂ ಹೀಗೆ ವಿರೋಧ ವ್ಯಕ್ತವಾಗಿತ್ತು. ಚಿತ್ರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಜಿಎಸ್ ಟಿ ಬಗ್ಗೆ ಪ್ರಶ್ನೆಗಳನ್ನು ಕೇಳುವ ದೃಶ್ಯಗಳಿದ್ದವು ಎಂದು ತಮಿಳುನಾಡು ಬಿಜೆಪಿ ಸಿನಿಮಾ ವಿರುದ್ಧ ಪ್ರತಿಭಟನೆ ಮಾಡಿತ್ತು.

    English summary
    Sarkar is facing flak for its content from politicians. A case has been filed against director AR Murugadoss and the film stating that Sarkar puts the state government (AIADMK) in the wrong light.
    Friday, November 9, 2018, 13:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X