ದಡ್ಡ ಪ್ರವೀಣನ ಹೊಸ ಸಿನಿಮಾ 'SCAM 1770'; ಈ ಸ್ಕ್ಯಾಮ್‌ನಲ್ಲಿ ಏನೆಲ್ಲಾ ನಡೆಯುತ್ತೆ?
ರಿಷಬ್ ಶೆಟ್ಟಿ ನಿರ್ದೇಶಿಸಿದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಸಿನಿಮಾದಲ್ಲಿ ಕನ್ನಡಿಗರು ಮರೆಯೋಕೆ ಸಾಧ್ಯವೇ? ಈ ಸಿನಿಮಾ ಎಷ್ಟು ಸದ್ದು ಮಾಡಿತೋ ಅಷ್ಟೇ ಆ ಸಿನಿಮಾದ ಪಾತ್ರಧಾರಿಗಳು ಕೂಡ ಥಿಯೇಟರ್‌ನಲ್ಲಿ ಸೌಂಡ್ ಮಾಡಿದ್ದರು. ಅದರಲ್ಲೊಂದು ಪಾತ್ರ ದಡ್ಡ ಪ್ರವೀಣ ಎಲ್ಲರಿಗೂ ನೆನಪಿದ್ದೇ ಇರುತ್ತೆ.
ಈ ಸಿನಿಮಾ ಮೂಲಕ ದಡ್ಡ ಪ್ರವೀಣ ಎಂದೇ ಫೇಮಸ್ ಆಗಿದ್ದ ನಟ ರಂಜನ್. ಈ ನಟ ಈಗ ಮತ್ತೊಂದು ಸಿನಿಮಾ ಮೂಲಕ ಪ್ರತ್ಯಕ್ಷ ಆಗುತ್ತಿದ್ದಾರೆ. ಅದುವೇ 'ಸ್ಕ್ಯಾಮ್ 1770'. ಇದು ಕಾಲ್ಪನಿಕ ಕಥೆಯಲ್ಲಿ ಸತ್ಯ ಘಟನೆಯನ್ನು ಆಧರಿಸಿದ ಹೆಣೆದ ಕಥೆ. ಹಾಗಾಗಿ ರಂಜನ್ 'ಸ್ಕ್ಯಾಮ್ 1770'ನಲ್ಲಿ ಹೇಗೆಲ್ಲ ಕಾಣಿಸಿಕೊಳ್ಳಬಹುದು ಅನ್ನೋದು ಕುತೂಹಲ ಸಿನಿಪ್ರಿಯರಿಗಿದೆ.

ಈಗಾಗಲೇ ರಂಜನ್ ನಟಿಸಿದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಹಾಗೂ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಎರಡೂ ಸಿನಿಮಾಗಳಿಂದಲೂ ಗಮನ ಸೆಳೆದಿದ್ದಾರೆ. ಎರಡೂ ಸಿನಿಮಾಗಳಲ್ಲೂ ತಮ್ಮ ಕಾಮಿಡಿ ಸೆನ್ಸ್‌ನಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಈಗ ರಂಜನ್ 'ಸ್ಕ್ಯಾಮ್ 1770' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾದ ವಿಶೇಷ ಅಂದರೆ, ಇದು ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೇಳಲಾಗುತ್ತಿದೆ. ಅಂದ್ಹಾಗೆ ಈ ಸಿನಿಮಾವನ್ನು ದೇವರಾಜ್ ಆರ್ ನಿರ್ಮಿಸಿದ್ದು, ವಿಕಾಸ್ ಪುಷ್ಪಗಿರಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ಏಪ್ರಿಲ್ 12ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಆಧಾರಿತ ಸಿನಿಮಾ ಆಗಿದ್ದು, ಸತ್ಯ ಘಟನೆಗಳ ಇಟ್ಟುಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಅನ್ನೋದನ್ನು ಹೇಳಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಯ ಮಾಲೀಕರು ಈ ಸಿನಿಮಾವನ್ನು ನೋಡಲೇಬೇಕು ಎಂದು ಚಿತ್ರತಂಡ ಹೇಳಿಕೊಂಡಿದೆ.
'ಸ್ಕ್ಯಾಮ್ 1770'(SCAM 1770) ಸಿನಿಮಾಗೆ ಡಾ||ಇಂದು ನಟೇಶ್, ಅಡ್ವೊಕೇಟ್ ನೇತ್ರಾವತಿ ಕಥೆ ಬರೆದಿದ್ದಾರೆ. ವಿಕಾಸ್ ಪುಷ್ಪಗಿರಿ ಹಾಗೂ ಶಂಕರ್ ರಾಮನ್ ಚಿತ್ರಕಥೆ ಹೆಣೆದಿದ್ದಾರೆ. ಈ ಸಿನಿಮಾದಲ್ಲಿ ದಡ್ಡ ಪ್ರವೀಣ ಖ್ಯಾತಿಯ ರಂಜನ್ ಜೊತೆಗೆ ನಾಯಕಿಯಾಗಿ ನಿಶ್ವಿತಾ, ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಸೇರಿದಂತೆ ಕನ್ನಡದ ಕಲಾವಿದರ ದೊಡ್ಡ ದಂಡನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ.


Click it and Unblock the Notifications











