twitter
    For Quick Alerts
    ALLOW NOTIFICATIONS  
    For Daily Alerts

    Sarojini Naidu Biopic : ಭಾರತದ ಕೋಗಿಲೆ'ಯ ಜೀವನ ಆಧರಿತ ಸಿನಿಮಾ ಕನ್ನಡದಲ್ಲಿ

    |

    ಕವಯತ್ರಿ, ಹೋರಾಟಗಾರ್ತಿ, ರಾಜಕಾರಣಿ ಆಗಿದ್ದ 'ಭಾರತದ ಕೋಗಿಲೆ' (ನೈಟಿಂಗೇಲ್ ಆಫ್ ಇಂಡಿಯಾ) ಸರೋಜಿನಿ ನಾಯ್ಡು ಕುರಿತಾದ ಸಿನಿಮಾ ಕನ್ನಡದಲ್ಲಿ ನಿರ್ಮಾಣಗೊಳ್ಳುತ್ತಿದೆ.

    ಕತೆಗಾರ ಧೀರಜ್ ಮಿಶ್ರ ಅವರು ನೈಟಿಂಗೇಲ್ ಆಫ್ ಇಂಡಿಯಾ ಕುರಿತಾದಂತೆ ಸಿನಿಮಾ ಮಾಡಲು ಮುಂದಾಗಿದ್ದು, ಇದಕ್ಕಾಗಿ ಕಳೆದ ಎಂಟು ವರ್ಷ ಸರೋಜಿನಿ ನಾಯ್ಡು ಅವರ ಬಗ್ಗೆ ಅಧ್ಯಯನ ಮಾಡಿರುವುದಾಗಿ ಹೇಳಿದ್ದಾರೆ. ಸಿನಿಮಾಕ್ಕೆ 'ಸರೋಜಿನಿ' ಎಂದು ಹೆಸರಿಡಲಾಗಿದೆ.

    Oscars: ಆಸ್ಕರ್ ಗೆದ್ದ ಮೂಗನ 'ಮಾತುಗಳ' ನೀವೂ ಕೇಳಿOscars: ಆಸ್ಕರ್ ಗೆದ್ದ ಮೂಗನ 'ಮಾತುಗಳ' ನೀವೂ ಕೇಳಿ

    ಸರೋಜಿನಿ ನಾಯ್ಡು ಪಾತ್ರದಲ್ಲಿ ಸೋನಲ್ ಮೊಂಟಾರೊ ಹಾಗೂ ಶಾಂತಿಪ್ರಿಯ ನಟಿಸುತ್ತಿದ್ದಾರೆ. ಸರೋಜಿನಿ ನಾಯ್ಡು ಅವರ ಸಣ್ಣ ವಯಸ್ಸಿನ ಪಾತ್ರದಲ್ಲಿ ಸೋನಲ್ ಮೊಂಟಾರೊ ನಟಿಸಿದರೆ, ಶಾಂತಿಪ್ರಿಯ ವಯಸ್ಸಾದ ಪಾತ್ರದಲ್ಲಿ ನಟಿಸಲಿದ್ದಾರೆ. ಒಂದು ಕಾಲದಲ್ಲಿ ಹಿಂದಿ, ತೆಲುಗು ಹಾಗೂ ಇತರ ಭಾಷೆಗಳಲ್ಲಿ ಜನಪ್ರಿಯ ನಟಿಯಾಗಿದ್ದ ಶಾಂತಿಪ್ರಿಯ ಎರಡು ದಶಕಗಳ ಬಳಿಕ ಈ ಸಿನಿಮಾದ ಮೂಲಕ ನಟನೆಗೆ ವಾಪಸ್ಸಾಗುತ್ತಿದ್ದಾರೆ.

    Sarojini Naidu Life Story Becoming Movie In Kannada, Named Sarojini

    ಸರೋಜಿನಿ ನಾಯ್ಡು ಕುರಿತಾದ ಸಿನಿಮಾವು ಕನ್ನಡದಲ್ಲಿ ಮಾತ್ರವಲ್ಲ ಹಿಂದಿ ಹಾಗೂ ಇತರ ಕೆಲವು ಭಾಷೆಗಳಲ್ಲಿಯೂ ನಿರ್ಮಾಣವಾಗುತ್ತಿದೆ. ''ಕಡಿಮೆ ವಯಸ್ಸಿನಲ್ಲಿಯೇ ಸರೋಜಿನಿ ನಾಯ್ಡು ಅವರು ಸ್ಕಾಲರ್‌ಶಿಫ್ ಪಡೆದು ಲಂಡನ್‌ಗೆ ಹೋಗಿ ವಿದ್ಯಾಭ್ಯಾಸ ಮಾಡಿದರು. ಅವರಿಗೆ ಹಲವು ಭಾಷೆಗಳು ಗೊತ್ತಿತ್ತು, ಹಲವು ದೇಶಗಳಿಗೆ ಅವರು ಅಧ್ಯಯನ ಸಂಬಂಧ ಪ್ರವಾಸ ಮಾಡಿದ್ದರು. ಭಾರತಕ್ಕೆ ಬಂದು ಇಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು. ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ನೀರು ಸಹ ಕುಡಿಯದೆ 50 ಡಿಗ್ರಿ ಸೆಲ್ಶಿಯಸ್ ಬಿಸಿಲಿನಲ್ಲಿ ಕೂತು ಮೂರು ದಿನ ಪ್ರತಿಭಟನೆ ಮಾಡಿದ್ದರು. ಸರೋಜಿನಿ ನಾಯ್ಡು ಅವರ ಕುರಿತಾದ ಇನ್ನೂ ಹಲವಾರು ಸಂಗತಿಗಳಿದ್ದು ಅವುಗಳನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಈ ಸಿನಿಮಾ ಮೂಲಕ ಮಾಡುತ್ತಿದ್ದೇವೆ ಎಂದರು ನಿರ್ದೇಶಕ ವಿನಯ್ ಚಂದ್ರ.

    Ram Gopal Varma: ಅಪ್ಪಟ ನಾಸ್ತಿಕನ ಕೈಲಿ ಕೈ ಮುಗಿಸಿಕೊಂಡ ಅಪ್ಪುRam Gopal Varma: ಅಪ್ಪಟ ನಾಸ್ತಿಕನ ಕೈಲಿ ಕೈ ಮುಗಿಸಿಕೊಂಡ ಅಪ್ಪು

    ಸಿನಿಮಾವನ್ನು ಬೆಂಗಳೂರು, ಹೈದರಾಬಾದ್ ಉತ್ತರ ಪ್ರದೇಶ ಇನ್ನೂ ಕೆಲವೆಡೆ ಚಿತ್ರೀಕರಣ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ. 1878 ರಿಂದ 1920 ರ ನಡುವೆ ನಡೆವ ಕತೆ ಇದಾಗಿರಲಿದ್ದು, ಇದಕ್ಕಾಗಿ ಕೆಲವು ಸೆಟ್‌ಗಳ ನಿರ್ಮಾಣವೂ ಮಾಡಲಿದೆ ಚಿತ್ರತಂಡ. ಈ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ಸಂಗೀತವನ್ನು ನೀಡುತ್ತಿದ್ದಾರೆ ವಿನಯ್ ಚಂದ್ರ. ಸಿನಿಮಾಕ್ಕೆ ಹಳೆಯ ಕಾಲದ ಸಂಗೀತ ಸಂಯೋಜಿಸುವುದು ಸವಾಲಿನ ಕೆಲಸ ಎಂದಿದ್ದಾರೆ ಅವರು.

    ಸಿನಿಮಾದ ಪಾತ್ರವರ್ಗ ಪೂರ್ಣವಾಗಿ ಆಯ್ಕೆ ಆಗಿಲ್ಲ, ಸದ್ಯಕ್ಕೆ ಸೋನಲ್ ಮೊಂಟಾರೊ ಹಾಗೂ ಶಾಂತಿಪ್ರಿಯ ಪಾತ್ರಗಳಷ್ಟೆ ಫೈನಲ್ ಆಗಿವೆ. ಜರೀನಾ ವಹಾಬ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಗೋಪಾಲ್ ಕೃಷ್ಣ ಗೋಖಲೆ ಪಾತ್ರವನ್ನು ರಂಗಾಯಣ ರಘು ಅವರಿಂದ ಮಾಡಿಸುವ ಉದ್ದೇಶ ನಿರ್ದೇಶಕರಿಗಿದೆ. ಆದರೆ ಈ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ.

    Recommended Video

    Upendra | ಉಪೇಂದ್ರ ಡೈರೆಕ್ಷನ್ ಗೆ ಮಾರ್ಚ್ 11 ಕ್ಕೆ ಮುಹೂರ್ತ ಫಿಕ್ಸ್

    ಸರೋಜಿನಿ ನಾಯ್ಡು ಅವರ ಕುಟುಂಬದಿಂದ ಸಿನಿಮಾ ಮಾಡಲು ಒಪ್ಪಿಗೆಯನ್ನು ಪಡೆದುಕೊಂಡಿದ್ದಾರೆ ನಿರ್ದೇಶಕರು. ಇದೇ ಜೂನ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಸಿನಿಮಾವನ್ನು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಿ ಬಳಿಕ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗುತ್ತದೆ.

    English summary
    Nightingale of India Sarojini Naidu's life story becoming movie in Kannada. Sonal Mantaro and Shanti Priya acting as Sarojini Naidu.
    Friday, April 1, 2022, 10:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X