ಡಿಸೆಂಬರ್ 20ರಂದು ಸ್ಯಾಂಡಲ್ವುಡ್ 'ಸಾರ್ವಜನಿಕರಿಗೆ ಸುವರ್ಣಾವಕಾಶ'
'ಆಪರೇಷನ್ ಅಲಮೇಲಮ್ಮ' ನಂತರ ನಟ ರಿಷಿ ಇನ್ನೊಂದು ಆಪರೇಷನ್ ಮಾಡೋಕೆ ಬರ್ತಿದ್ದಾರೆ. 'ಸಾರ್ವಜನಿಕರಿಗೆ ಸುವರ್ಣಾವಕಾಶ' ಎಂದು ಹೇಳಿಕೊಂಡು ಕನ್ನಡ ಕಲಾಭಿಮಾನಿಗಳನ್ನು ನಕ್ಕುನಗಿಸಲು ಸಜ್ಜಾಗಿದ್ದಾರೆ.
ಹೌದು, ರಿಷಿ ನಟನೆಯ ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಔಟ್ ಅಂಡ್ ಔಟ್ ಮನರಂಜನೆಯಿಂದ ತುಂಬಿರುವ ಟ್ರೈಲರ್ ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ.
ಡಿಸೆಂಬರ್ 20 ರಂದು ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾ ತೆರೆಗೆ ಬರ್ತಿದೆ. ಈ ಟ್ರೈಲರ್ ನೋಡಿದ್ಮೇಲೆ ಒಂದೊಳ್ಳೆ ಮನರಂಜನೆಯ ಜೊತೆ 2019ನೇ ವರ್ಷಕ್ಕೆ ಅಂತ್ಯವಾಡಬಹುದು ಎಂಬ ಅಭಿಪ್ರಾಯ ಹುಟ್ಟಿಕೊಂಡಿದೆ.

ಅಂದ್ಹಾಗೆ, 'ಕವಲುದಾರಿ' ಸಿನಿಮಾ ಬಳಿಕ ರಿಷಿ ನಟಿಸಿರುವ ಸಿನಿಮಾ ಇದಾಗಿದ್ದು, ರಿಷಿಗೆ ಜೋಡಿಯಾಗಿ ಧನ್ಯಾ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಸಿದ್, ರಂಗಾಯಣ ರಘು, ದತ್ತಣ್ಣ, ಶಾಲಿನಿ, ಮಿತ್ರ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಅನೂಪ್ ರಾಮಸ್ವಾಮಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಈ ಹಿಂದೆ 'ಗುಳ್ಟು' ಸಿನಿಮಾ ನಿರ್ಮಿಸಿದ್ದ ವಿವಿದ್ ಫಿಲಂಸ್ ಸಂಸ್ಥೆಯಡಿ ದೇವರಾಜ್ ಆರ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ಧನ್ ಚಿಕ್ಕಣ್ಣ ಬಂಡವಾಳ ಹಾಕಿದ್ದಾರೆ. ಮಿಧುನ್ ಮುಕುಂದನ್ ಅವರ ಸಂಗೀತವಿದೆ


Click it and Unblock the Notifications











