ಸತೀಶ್ ನೀನಾಸಂ ಮೊದಲ ಫೋಟೋಶೂಟ್ ಫೋಟೋ ಇದು

ಸತೀಶ್ ನೀನಾಸಂ ಅಂದಾಕ್ಷಣ 'ಲೂಸಿಯಾ' ಹೀರೋ ಅಂತಾರೆ ಕನ್ನಡ ಸಿನಿ ಪ್ರೇಕ್ಷಕರು. ಹೊರರಾಜ್ಯದ ಪ್ರೇಕ್ಷಕರು ಕೂಡ ಸತೀಶ್ ಅವರನ್ನ ಫಟ್ ಅಂತು ಗುರುತಿಸುವುದು 'ಲೂಸಿಯಾ' ಚಿತ್ರದ ಮೂಲಕವೇ.

ಸದ್ಯ 'ಅಯೋಗ್ಯ' ಚಿತ್ರದ ಮೂಲಕ ದೊಡ್ಡ ಯಶಸ್ಸು ಪಡೆದುಕೊಂಡಿರುವ ಸತೀಶ್, ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡ ಸಿನಿಮಾ ಜೊತೆ ತಮಿಳಿನಲ್ಲೂ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಈ ಮಧ್ಯೆ ಸತೀಶ್ ನೀನಾಸಂ ತನ್ನ ಮೊಟ್ಟ ಮೊದಲ ಫೋಟೋಶೂಟ್ ನ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. 2008ರ ಸಮಯದಲ್ಲಿ ಸಿನಿಮಾ ಹೀರೋ ಆಗ್ಬೇಕು ಎಂಬ ಆಸೆಯಿಂದ ಈ ಫೋಟೋಶೂಟ್ ಮಾಡಿಸಿದ್ದರಂತೆ. ಈ ಅಪರೂಪದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ನೀನಾಸಂನಲ್ಲಿ ನಟನೆಯ ತರಬೇತಿ ಪಡೆದಿದ್ದ ಸತೀಶ್ ಗೆ 2008ರಲ್ಲಿ 'ಮಾದೇಶ' ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ನಂತರ ಮನಸಾರೆ, ಪಂಚರಂಗಿ, ಏನೋ ಒಂಥರಾ, ಪರಮಾತ್ಮ, ಲೈಫು ಇಷ್ಟೇನೇ, ಪುಟ್ಟಕ್ಕನ ಹೈವೇ, ಡ್ರಾಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದರು.

2013ರಲ್ಲಿ ತೆರೆಕಂಡ 'ಲೂಸಿಯಾ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾದ ಸತೀಶ್, ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಈ ಸಿನಿಮಾ ಸತೀಶ್ ಜೀವನವನ್ನೇ ಬದಲಾಯಿಸಿತು. ಅಂಜದ ಗಂಡು, ಲವ್ ಇನ್ ಮಂಡ್ಯ, ರಾಕೆಟ್, ಬ್ಯೂಟಿಫುಲ್ ಮನಸುಗಳು, ಟೈಗರ್ ಗಲ್ಲಿ, ಅಯೋಗ್ಯ ಹೀಗೆ ಸಾಲು ಸಾಲು ಸಿನಿಮಾ ಮಾಡಿದ್ರು.

Sathish neenasam first photoshoot photo

ಉತ್ತರ ಕರ್ನಾಟಕದ ಹಳ್ಳಿ ದತ್ತು ಪಡೆಯಲಿದ್ದಾರೆ ನೀನಾಸಂ ಸತೀಶ್

ಅಯೋಗ್ಯನ ಆರ್ಭಟದ ನಂತರ ಸತೀಶ್ ಹವಾ ಮತ್ತಷ್ಟು ಹೆಚ್ಚಾಗಿದ್ದು, ಚಂಬಲ್, ಗೋದ್ರಾ, ರಾಮನು ಕಾಡಿಗೆ ಹೋದಾಗ ಹಾಗೂ ತಮಿಳಿನ ಒಂದು ಸಿನಿಮಾ ಸೇರಿದಂತೆ ಇನ್ನು ಹಲವು ಪ್ರಾಜೆಕ್ಟ್ ಕೈಯಲ್ಲಿದೆ.

ಸತೀಶ್ ಅವರ ಜರ್ನಿ ನೋಡಿದ್ರೆ, ಅನೇಕರಿಗೆ ಸ್ಫೂರ್ತಿಯಾಗಿದೆ. ಅನೇಕ ಏಳುಬೀಳುಗಳನ್ನ ಕಂಡು ಯಶಸ್ಸಿನ ಬಾಗಿಲು ತಟ್ಟಿದ್ದಾರೆ. ಇದರ ಜೊತೆಗೆ ಕೆಲವು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

More from Filmibeat

English summary
kannada actor Sathish neenasam shares his first photoshoot photo in twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X