ಸತೀಶ್ ಹುಟ್ಟುಹಬ್ಬಕ್ಕೆ ಬಂತು ವಿಶೇಷ ಉಡುಗೊರೆ

By Naveen

Recommended Video

ಜೋರಾಗಿತ್ತು ಆಯೋಗ್ಯನ ಹುಟ್ಟುಹಬ್ಬ ..!! | Filmibeat Kannada

ನಟ ನೀನಾಸಂ ಸತೀಶ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಬರ್ತ್ ಡೇ ಖುಷಿಯ ಜೊತೆಗೆ 'ಅಯೋಗ್ಯ' ಚಿತ್ರತಂಡ ಸಿನಿಮಾದ ಟೀಸರ್ ಬಿಡುಗಡೆ ಮಾಡಿದೆ. ಈ ಮೂಲಕ ತಮ್ಮ ನಾಯಕ ನಟನಿಗೆ ಇಡೀ ಚಿತ್ರತಂಡ ಶುಭ ಕೋರಿದೆ.

ಸತೀಶ್ ನೀನಾಸಂ ಅವರ ಜನಪ್ರಿಯ ಸಿನಿಮಾಗಳನ್ನು ಟೀಸರ್ ನಲ್ಲಿ ತೋರಿಸಿದ್ದು, 'ಅಯೋಗ್ಯ' ಕೂಡ ಅದೇ ಮಟ್ಟದಲ್ಲಿ ಇರಲಿದೆ ಎಂಬ ನಂಬಿಕೆಯನ್ನು ಚಿತ್ರತಂಡ ಹುಟ್ಟಿಸಿದೆ. ಟೀಸರ್ ನಲ್ಲಿಯೇ ಹೇಳಿರುವ ಹಾಗೆ ಇದು ನಾಲ್ಕು ಫೈಟ್, ನಾಲ್ಕು ಸಾಂಗ್, 48 ಪಂಚಿಂಗ್ ಡೈಲಾಗ್, 68 ಸೀನ್ಸ್ ಇರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿದೆಯಂತೆ.

ಅಂದಹಾಗೆ, ಈ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ಬಗಳದಲ್ಲಿ ಅವರು ಗುರುತಿಸಿಕೊಂಡಿದ್ದರು. ಇನ್ನು 'ಚಮಕ್' ಚಿತ್ರಕ್ಕೆ ಬಂಡವಾಳ ಹಾಕಿದ್ದ ಚಂದ್ರಶೇಖರ್ 'ಅಯೋಗ್ಯ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಮೊದಲ ಬಾರಿಗೆ ಸತೀಶ್ ಹಾಗೂ ರಚಿತಾ ರಾಮ್ ಜೋಡಿ ಒಂದಾಗಿದೆ.

sathish neenasams Ayogya movie teaser released

ಅಂದಹಾಗೆ, ನಿನ್ನೆ ರಾತ್ರಿಯೇ ಸತೀಶ್ ನೀನಾಸಂ ಹುಟ್ಟುಹಬ್ಬ ಆಚರಣೆ ನಡೆದಿದೆ. ಅಭಿಮಾನಿಗಳು ಹಾಗೂ 'ಅಯೋಗ್ಯ' ಚಿತ್ರತಂಡದ ಜೊತೆಗೆ ಸತೀಶ್ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

More from Filmibeat

English summary
'Ayogya' movie teaser released. On the occasion of Actor Sathish Neenasam's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X