ರಾಜಕೀಯದ ಪ್ರವೇಶದ ಬಗ್ಗೆ ಏನಂತಾರೆ ಸತೀಶ್ ನೀನಾಸಂ

By Naveen

Recommended Video

ಪ್ರತಿ ವರ್ಷಕ್ಕಿಂತ ಈ ವರ್ಷದ ಹುಟ್ಟುಹಬ್ಬ ತುಂಬಾ ಪೆಸಲ್ ಆಗಿತ್ತಂತೆ | Filmibeat Kannada

ಇತ್ತೀಚಿಗೆ ಸಿನಿಮಾ ನಟರ ರಾಜಕೀಯ ಪ್ರವೇಶ ಹೆಚ್ಚಾಗಿದೆ. ಈಗಾಗಲೇ ಉಪೇಂದ್ರ, ಜಗ್ಗೇಶ್, ಅಂಬರೀಶ್ ಸೇರಿದಂತೆ ಸಾಕಷ್ಟು ಜನರು ಸಿನಿಮಾದ ಜೊತೆಗೆ ರಾಜಕೀಯ ಜೀವದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ನಟ ನೀನಾಸಂ ಸತೀಶ್ ಒಬ್ಬ ನಟನಾಗಿ ಮಾತ್ರ ಇರುವುದಕ್ಕೆ ಇಷ್ಟ ಪಡುತ್ತಾರಂತೆ.

ಕೆಲ ದಿನಗಳ ಹಿಂದೆಯಷ್ಟೆ ಸತೀಶ್ ಮಂಡ್ಯ ಜಿಲ್ಲೆಯ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡಿದ್ದರು. ಸಾಮಾಜಿಕ ಕಳಕಳಿ ಮೆರೆದ ಸತೀಶ್ ಇನ್ನಷ್ಟು ಜನರಿಗೆ ಒಳ್ಳೆಯ ಕೆಲಸ ಮಾಡುವ ದೃಷ್ಟಿಯಿಂದ ರಾಜಕೀಯ ಪ್ರವೇಶ ಮಾಡಬಹುದಾ ಎನ್ನುವ ಕುತೂಹಲ ಇತ್ತು. ಆದರೆ ಈಗ ರಾಜಕೀಯದ ಬಗ್ಗೆ ಸತೀಶ್ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

'ಫಿಲ್ಮಿಬೀಟ್ ಕನ್ನಡ'ದ ಸಂದರ್ಶನದಲ್ಲಿ ಮಾತನಾಡಿರುವ ಸತೀಶ್ ನೀನಾಸಂ ಈ ರೀತಿ ಹೇಳಿದ್ದಾರೆ. ಮುಂದೆ ಓದಿ...

ರಾಜಕೀಯದ ಬಗ್ಗೆ ಸ್ವಲ್ಪವೂ ಆಸಕ್ತಿ ಇಲ್ಲ

ರಾಜಕೀಯದ ಬಗ್ಗೆ ಸ್ವಲ್ಪವೂ ಆಸಕ್ತಿ ಇಲ್ಲ

''ರಾಜಕೀಯದ ಬಗ್ಗೆ ನನಗೆ ಸ್ವಲ್ಪವೂ ಆಸಕ್ತಿ ಇಲ್ಲ. ಇಂದಿನ ರಾಜಕೀಯದಲ್ಲಿ ದಿನ ಏನೇನೂ ನಡೆಯುತ್ತದೆ ಎಂಬ ಸುದ್ದಿಗಳನ್ನು ನೋಡುತ್ತಿರುತ್ತೇನೆ. ಎಲ್ಲವನ್ನು ಗಮನಿಸುತ್ತೇನೆ. ಆದರೆ ನಾನೇ ರಾಜಕೀಯ ಪ್ರವೇಶ ಮಾಡುವ ಬಗ್ಗೆ ನನಗೆ ವೈಯಕ್ತಿಕವಾಗಿ ಇಷ್ಟ ಇಲ್ಲ.'' - ಸತೀಶ್ ನೀನಾಸಂ, ನಟ

ಜನರಿಂದ ಉಗಿಸಿಕೊಳ್ಳೊದಕ್ಕೆ ಇಷ್ಟ ಇಲ್ಲ

ಜನರಿಂದ ಉಗಿಸಿಕೊಳ್ಳೊದಕ್ಕೆ ಇಷ್ಟ ಇಲ್ಲ

''ನಾನು ಈಗ ಇರುವ ಬದುಕಿನಲ್ಲಿ ತೃಪ್ತಿಯಾಗಿದ್ದೇನೆ. ನನ್ನ ಇಷ್ಟು ವರ್ಷಗಳಲ್ಲಿ ತುಂಬ ತುಂಬ ಹೋರಾಟ ಮಾಡಿ ಈ ಹಂತಕ್ಕೆ ಬಂದಿದ್ದೇನೆ, ತುಂಬ ನೋವುಗಳನ್ನು ಅನುಭವಿಸಿದ್ದೇನೆ. ಹೀಗಿರುವಾಗ ರಾಜಕೀಯಕ್ಕೆ ಬಂದು ಜನರಿಂದ ಉಗಿಸಿಕೊಳ್ಳೊದಕ್ಕೆ ನಾನು ಇಷ್ಟ ಪಡುವುದಿಲ್ಲ.'' - ಸತೀಶ್ ನೀನಾಸಂ, ನಟ

ರಾಜಕೀಯ ಎನ್ನುವುದು ಸುಲಭದ ಕೆಲಸ ಅಲ್ಲ

ರಾಜಕೀಯ ಎನ್ನುವುದು ಸುಲಭದ ಕೆಲಸ ಅಲ್ಲ

''ರಾಜಕೀಯ ಎನ್ನುವುದು ಸುಲಭದ ಕೆಲಸ ಅಲ್ಲ. ಅದಕ್ಕೆ ಬಂದ ಮೇಲೆ ತುಂಬ ಸಮಯ ನೀಡಬೇಕಾಗುತ್ತದೆ. ಜನರ ಜೊತೆಗೆ ಅದಷ್ಟು ಇರಬೇಕಾಗುತ್ತದೆ. ಅವರ ಸಮಸ್ಯೆಗೆ ಪರಿಹಾರ ನೀಡಬೇಕಾಗುತ್ತದೆ. ರಾಜಕೀಯಕ್ಕೆ ಹೆಚ್ಚು ಶ್ರಮ ಹಾಕಬೇಕು. ಅದೆಲ್ಲ ಮಾಡಲಿಲ್ಲ ಎಂದರೆ ಪ್ರಯೋಜನ ಇಲ್ಲ.'' - ಸತೀಶ್ ನೀನಾಸಂ, ನಟ

ನನ್ನ ಬದುಕಿನಲ್ಲಿ ರಾಜಕೀಯ ಬರುವುದಕ್ಕೆ ಬಿಡುವುದಿಲ್ಲ

''ನನಗೆ ರಾಜಕಾರಣ ಬೇಡ. ನನ್ನ ಬದುಕಿನಲ್ಲಿ ರಾಜಕೀಯ ಬರುವುದಕ್ಕೆ ಬಿಡುವುದಿಲ್ಲ. ಅದು ನನಗೆ ಅಗತ್ಯ ಇಲ್ಲ. ಹಳ್ಳಿಯನ್ನು ದತ್ತು ತೆಗೆದುಕೊಂಡಿದ್ದು ಒಳ್ಳೆಯ ಕೆಲಸ ಮಾಡಬೇಕು ಎಂದು. ನಾನು ಪಟ್ಟ ಕಷ್ಟಗಳು ಈ ಕೆಲಸ ಮಾಡಲು ಸ್ಫೂರ್ತಿ ನೀಡಿತು. ಹಳ್ಳಿಗಳಲ್ಲಿ ಇಂದಿಗೂ ಜನರು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದೆಲ್ಲ ಬಗೆ ಹರಿಯಬೇಕು ಎನ್ನುವುದು ನನ್ನ ಉದ್ದೇಶ.'' - ಸತೀಶ್ ನೀನಾಸಂ, ನಟ

More from Filmibeat

English summary
Kannada Actor Sathish Neenasam spoke about his political entry in an interview with Filmibeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X