ಮೂರು ದಿನಕ್ಕೆ 'ಅಯೋಗ್ಯ'ನ ಅಕೌಂಟ್ ಗೆ ಬಂದ ಹಣ ಎಷ್ಟು?
Recommended Video

ಕಳೆದ ಶುಕ್ರವಾರ ಬಿಡುಗಡೆಯಾದ 'ಅಯೋಗ್ಯ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಪ್ರೇಕ್ಷಕರ ಜೊತೆಗೆ ವಿಮರ್ಶಕರು ಕೂಡ ಸಿನಿಮಾವನ್ನು ಹೊಗಳುತ್ತಿದ್ದಾರೆ. ಈ ಕಾರಣ ಸಿನಿಮಾದ ಕಲೆಕ್ಷನ್ ಕೂಡ ಚೆನ್ನಾಗಿ ಆಗುತ್ತಿದೆ.
ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ ಮೂರು ದಿನ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಸಿನಿಮಾದ ಖಾತೆಗೆ ಸದ್ಯ 4 ಕೋಟಿ ಹಣ ಬಂದಿದೆ. ಮೊದಲ ದಿನ 1.86 ಕೋಟಿ ಕಲೆಕ್ಷನ್ ಮಾಡಿದ್ದ ಈ ಚಿತ್ರ ಮೂರು ದಿನಕ್ಕೆ ನಾಲ್ಕು ಕೋಟಿ ಗಳಿಸಿದೆ.

280 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ 'ಅಯೋಗ್ಯ' ಎಲ್ಲ ಭಾಗಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ಸಿನಿಮಾದ ವಿಜಯಯಾತ್ರೆಯಾಗಿ ನಿನ್ನೆ ನಟ ಸತೀಶ್ ನೀನಾಸಂ, ನಟಿ ರಚಿತಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಮಂಡ್ಯದ ಸಂಜಯ್ ಚಿತ್ರಮಂದಿರ ಹಾಗೂ ಮೈಸೂರಿನ ಸಂಗಂ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು.

ಅಂದಹಾಗೆ, 'ಅಯೋಗ್ಯ' ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದೆ. ಒಳ್ಳೆಯ ಹಾಡುಗಳು, ಒಂದೆರಡು ಫೈಟುಗಳು, ಬೇಕಾದಷ್ಟು ಕಾಮಿಡಿ, ಹೀರೋ - ವಿಲನ್ ಜುಗಲ್ ಬಂದಿ, ಜೊತೆಗೆ ಜೊತೆಗೆ ಪ್ರೀತಿ - ಪ್ರೇಮ ಇವಿಷ್ಟು ಅಂಶಗಳು ಅಯೋಗ್ಯ ಸಿನಿಮಾದಲ್ಲಿ ಇವೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಎಲ್ಲ ವರ್ಗದವರು ನೋಡಬಹುದಾದ 'ಯೋಗ್ಯ' ಸಿನಿಮಾ ಇದು.


Click it and Unblock the Notifications