'ಗೋದ್ರಾ' ಟೈಟಲ್ ಬದಲಾಯಿಸಲು ಸತೀಶ್ ನೀನಾಸಂ ನಿರ್ಧಾರ

ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯಲ್ಲಿ ತಯಾರಾಗಿರುವ ಗೋದ್ರಾ ಸಿನಿಮಾದ ಹೆಸರು ಬದಲಿಸಲು ಚಿತ್ರತಂಡ ನಿರ್ಧರಿಸಿದೆ. ಸೆನ್ಸಾರ್ ಮಂಡಳಿಯ ಸೂಚನೆಯ ಬಳಿಕ ಹೆಸರು ಬದಲಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟ ಸತೀಶ್ ನೀನಾಸಂ ''ಯಾರ ಭಾವನೆಗಳಿಗು ನೋವುಂಟು ಮಾಡುವ ಉದ್ದೇಶ ನಮಗಿಲ್ಲ, ಹಾಗಾಗಿ ಸೆನ್ಸಾರ್ ಮಂಡಳಿಯ ಅಭಿಪ್ರಾಯದಂತೆ "ಗೋದ್ರಾ" ಟೈಟಲ್ ಬದಲಾಯಿಸಲು ಒಪ್ಪಿದ್ದೇವೆ. ಶೀಘ್ರದಲ್ಲೇ ಹೊಸ ಟೈಟಲ್ ಘೋಷಣೆ... ಪ್ರೀತಿಯೊಂದಿಗೆ...'' ಎಂದಿದ್ದಾರೆ.

ಇದಕ್ಕೂ ಮುಂಚೆ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಅಧಿಕಾರಿಗಳು ಚಿತ್ರ ಶೀರ್ಷಿಕೆ ಬದಲಿಸುವಂತೆ ಚಿತ್ರತಂಡಕ್ಕೆ ಸೂಚಿಸಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿ ನೋಂದಾಯಿತ ಟೈಟಲ್ ಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸೆನ್ಸಾರ್ ಮಂಡಳಿ ಸ್ಪಷ್ಟ ಪಡಿಸಿತ್ತು.

Sathish Ninasam and Team decide to change the Title of Godhra

'ಗೋದ್ರಾ' ಚಿತ್ರವನ್ನು ಕೆ.ಎಸ್.ನಂದೀಶ್ ನಿರ್ದೇಶನ ಮಾಡಿದ್ದಾರೆ. ಜಾಕೋಬ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಸತೀಶ್ ನೀನಾಸಂ, ಶ್ರದ್ಧಾ ಜೊತೆ ವಸಿಷ್ಠಸಿಂಹ ಮತ್ತು ರಕ್ಷಾ ಸೋಮಶೇಖರ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಗೋಧ್ರಾ' ಎಂದಾಕ್ಷಣ ಕಣ್ಣೆದುರಿಗೆ ಬರುವುದು ಗುಜರಾತ್‌ನ ಗೋಧ್ರಾ ಹತ್ಯಾಕಾಂಡ, ಆದರೆ ಆ ಗೋಧ್ರಾಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಿರ್ದೇಶಕ ಸತೀಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. 'ಗೋಧ್ರಾ ಎಂಬುದು ಒಂದು ಊರಿನ ಹೆಸರು, ಅಲ್ಲಿ ನಡೆಯುವ ಒಂದು ಥ್ರಿಲ್ಲರ್‌ ಅಂಶ ಇಟ್ಟುಕೊಂಡು ನಿರ್ದೇಶಕ ನಂದೀಶ್ ಕಥೆ ಮಾಡಲಾಗಿದೆ ಎಂದು ತಿಳಿಸಿದ್ದರು.

Recommended Video

ಅಂಬರೀಷ್ ಮನೆ ಪಕ್ಕ ಫ್ಲಾಟ್ ತಗೋಬೇಕು ಅಂತ ತುಂಬಾ ಆಸೆ ಪಟ್ಟಿದ್ದ ಚಿರು : PrashanthSambargi | Chiranjeevi Sarja

More from Filmibeat

English summary
After Censor board instruction Sathish Ninasam and Team decide to change the Title of Godhra. sathish ninasam and shraddha srinath played lead roles in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X