'ಸಿದ್ಲಿಂಗು' ನಿರ್ದೇಶಕನ ಜೊತೆ ಸತೀಶ್ ನೀನಾಸಂ ಹೊಸ ಸಿನಿಮಾ
ಎಲ್ಲ ಅಂದುಕೊಂಡಂತೆ ಆಗಿದ್ದರೆ ಸತೀಶ್ ನೀನಾಸಂ ಮತ್ತು 'ಸಿದ್ಲಿಂಗು' ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್‌ನಲ್ಲಿ ಎರಡು ಸಿನಿಮಾ ಬರಬೇಕಿತ್ತು. ಆದ್ರೆ, ಯಾರ ವಿಘ್ನವೋ ಅಥವಾ ದೃಷ್ಟಿ ಬಿತ್ತೋ ಪ್ರಾಜೆಕ್ಟ್ ಟೇಕ್ ಆನ್ ಆಗಲಿಲ್ಲ.
ಈಗ ಮೂರನೇ ಬಾರಿ ಸಿನಿಮಾ ಮಾಡಲು ಇಬ್ಬರು ಮನಸ್ಸು ಮಾಡಿದ್ದಾರೆ. ಕಥೆ-ಚಿತ್ರಕಥೆ ಎಲ್ಲ ಸಿದ್ದ ಮಾಡಿಕೊಂಡಿರುವ ಸ್ಟಾರ್ ಜೋಡಿ ಅಕ್ಟೋಬರ್ ತಿಂಗಳಿನಿಂದ ಶೂಟಿಂಗ್ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ. ಮುಂದೆ ಓದಿ....

ಲಾಕ್‌ಡೌನ್‌ನಲ್ಲಿ ಫಿಕ್ಸ್ ಆಯ್ತು
ಸತೀಶ್ ನೀನಾಸಂ ಮತ್ತು ವಿಜಯ್ ಪ್ರಸಾದ್ ಬಹಳ ವರ್ಷಗಳಿಂದ ಸ್ನೇಹಿತರು. ಒಟ್ಟಿಗೆ ಸಿನಿಮಾ ಮಾಡುವ ಪ್ರಯತ್ನಗಳು ಫಲ ಕೊಡಲಿಲ್ಲ. ಇದೀಗ, ಅಂತಿಮವಾಗಿ ಹೊಸ ಸಿನಿಮಾ ಮಾಡಲು ಸಜ್ಜಾಗಿದ್ದು, ಲಾಕ್‌ಡೌನ್ ಸಮಯದಲ್ಲಿ ಎಲ್ಲವೂ ಪ್ಲಾನ್ ಮಾಡಿ ಮುಗಿಸಿದ್ದಾರೆ. ಮುಂದಿನ ತಿಂಗಳಿನಿಂದಲೇ ಚಿತ್ರೀಕರಣ ಆರಂಭಿಸುವ ಸಾಧ್ಯತೆ ಇದೆ.

'ತೋತಾಪುರಿ ಬಿಡುಗಡೆ ಆಗಬೇಕಿದೆ
ಸಿದ್ಲಿಂಗು, ನೀರ್‌ದೋಸೆ ಚಿತ್ರಗಳ ಯಶಸ್ಸಿನ ಬಳಿಕ ವಿಜಯ್ ಪ್ರಸಾದ್ ತೋತಾಪುರಿ ಸಿನಿಮಾ ಮಾಡಿದ್ದಾರೆ. ಜಗ್ಗೇಶ್, ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಯಾಗಬೇಕಿದೆ. ಅಷ್ಟರಲ್ಲೇ ಸತೀಶ್ ನೀನಾಸಂ ಚಿತ್ರಕ್ಕೆ ವಿಜಯ್ ಪ್ರಸಾದ್ ಕೈ ಜೋಡಿಸಿದ್ದಾರೆ.

'ಗೋದ್ರಾ'ದಲ್ಲಿ ಸತೀಶ್ ನೀನಾಸಂ
'ಬ್ರಹ್ಮಚಾರಿ' ಸಿನಿಮಾ ಬಳಿಕ ಸತೀಶ್ ನೀನಾಸಂ ಹಲವು ಸಿನಿಮಾಗಳನ್ನು ಕೈಗೆತ್ತಿಕೊಂಡಿದ್ದಾರೆ. ಗೋದ್ರಾ ಬಹುತೇಕ ಮುಗಿದಿದೆ. ಮೈ ನೇಮ್ ಈಸ್ ಸಿದ್ದೇಗೌಡ, ದಸರಾ ಎಂಬ ಚಿತ್ರವನ್ನು ಮಾಡಲಿದ್ದಾರೆ. ಆ ಕಡೆ ತಮಿಳಿನಲ್ಲಿ ಒಂದು ಸಿನಿಮಾ ಮಾಡ್ತಿದ್ದಾರೆ. ಇದೀಗ, ವಿಜಯ್ ಪ್ರಸಾದ್ ಜೊತೆ ಚಿತ್ರಕ್ಕೂ ಸೈ ಎಂದಿದ್ದಾರೆ.
Recommended Video

ಎರಡು ಸಲ ವಿಘ್ನ ಬಂದಿತ್ತು
'ಸಿದ್ಲಿಂಗು' ಸಿನಿಮಾ ಬಳಿಕ ಸತೀಶ್ ನೀನಾಸಂ ಮತ್ತು ವಿಜಯ್ ಪ್ರಸಾದ್ 'ಪೆಟ್ರೋಮ್ಯಾಕ್ಸ್' ಚಿತ್ರ ಮಾಡಬೇಕಿತ್ತು. ಅದು ಆಗಲಿಲ್ಲ, ನೀರ್‌ದೋಸೆ ಬಳಿಕ ಲೂಸ್ ಮಾದ ಹಾಗೂ ಸತೀಶ್ ಜೊತೆಯಲ್ಲಿ 'ಪರಿಮಳ ಲಾಡ್ಜ್' ಸಿನಿಮಾ ಮಾಡಿದರು. ಈ ಚಿತ್ರ ಏನಾಯಿತು ಎಂದು ಸದ್ಯಕ್ಕೆ ಮಾಹಿತಿ ಇಲ್ಲ. ಈಗ ಮತ್ತೊಂದು ಚಿತ್ರಕ್ಕೆ ಈ ಜೋಡಿ ಮುಂದಾಗಿದೆ.


Click it and Unblock the Notifications











