For Quick Alerts
  ALLOW NOTIFICATIONS  
  For Daily Alerts

  ಬಾಲಕಿ ಮೇಲೆ ಅತ್ಯಾಚಾರ ಕೊಲೆ ಖಂಡಿಸಿದ ನಟ ಸತೀಶ್ ನೀನಾಸಂ

  |

  ಕಬ್ಬು ಕಟಾವಿಗೆಂದು ಗದ್ದೆಗೆ ಬಂದಿದ್ದ ಬಾಲಕಿಯನ್ನು ಬಲವಂತವಾಗಿ ಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನ ನಡೆಸಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ.

  ಮಂಡ್ಯದಲ್ಲೂ ನಡೆದೇ ಹೋಯ್ತು ಅಮಾನವೀಯ ಘಟನೆ | Filmibeat Kannada

  12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ನಡೆದ ದುಷ್ಕೃತ್ಯಕ್ಕೆ ನಟ ಸತೀಶ್ ನೀನಾಸಂ ಖಂಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸತೀಶ್ ''ಅತ್ಯಾಚಾರದ ಬಗ್ಗೆ ಕೇಳಿ ಅಸಹ್ಯವಾಯಿತು'' ಎಂದಿದ್ದಾರೆ.

  ಆಟೋ ಚಾಲಕರ ಜೊತೆ ಕನ್ನಡ ರಾಜ್ಯೋತ್ಸವ ಆಚರಿಸಿದ ಸತೀಶ್ ನೀನಾಸಂ ಆಟೋ ಚಾಲಕರ ಜೊತೆ ಕನ್ನಡ ರಾಜ್ಯೋತ್ಸವ ಆಚರಿಸಿದ ಸತೀಶ್ ನೀನಾಸಂ

  ''ಮಂಡ್ಯ ಜಿಲ್ಲೆ, ಮದ್ದೂರ್ ತಾಲುಕು, "ಆರತಿ" ಮೇಲೆ ನಡೆದ ಅತ್ಯಾಚಾರದ ಬಗ್ಗೆ ಕೇಳಿ ಅಸಹ್ಯವಾಯಿತು. ಮನುಷ್ಯ ಸಂತತಿ ಬೆಳೆದಂತೆಲ್ಲ, ಅವನ ವಿಕೃತಿಗಳು ಹೆಚ್ಚುತ್ತಿವೆ. ಎಷ್ಟೇ ವಿದ್ಯಾವಂತರಾದರು ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲವಾಗುತ್ತಿರುವುದು, ಈ ಭೂಮಿಯ ದುರಂತ'' ಎಂದು ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ.

  ಮದ್ದೂರಿನ ಹುರುಗಲ ವಾಡಿ ಗ್ರಾಮದ ರೈತ ಚೆಲುವರಾಜ್ ಅವರ ಕಬ್ಬಿನ ಗದ್ದೆಯಲ್ಲಿ ಈ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಮೂಲದ ಬಾಲಕಿ ಗದ್ದೆಯಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದಳು. ಈ ವೇಳೆ ಆಕೆಯನ್ನು ಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

  ಮೃತ ಬಾಲಕಿಯ ದೇಹವನ್ನು ಅಂತ್ಯ ಸಂಸ್ಕಾರಕ್ಕೆಂದು ಇಂದು ಹೊಸಪೇಟೆಯ ಮೂಲ ಊರಿಗೆ ತೆಗೆದುಕೊಂಡು ಬರಲಾಗಿದೆ. ಈ ವೇಳೆ ಊರಿನ ಗ್ರಾಮಸ್ಥರು ಬಾಲಕಿ ಶವವನ್ನು ಮುಂದಿಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಡಿಸಿ ನಕುಲ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು.

  English summary
  Actor Sathish Ninasam condemns the rape of a 12 year old girl in mandya

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X