'ಎಲ್ಲಾ ಸನ್ಮಾನಗಳು ನಿನಗೆ ನಿನ್ನಿಂದಲೇ': ಸತೀಶ್ ನೀನಾಸಂ

ಸ್ಯಾಂಡಲ್ ವುಡ್ ನಟ ನೀನಾಸಂ ಸತೀಶ್ ಸದ್ಯ 'ಬ್ರಹ್ಮಚಾರಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಕ್ವಾಟ್ಲೆ ಸತೀಶ್ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ತನ್ನ ಜೀವನದ ಖುಷಿ, ಯಶಸ್ಸು, ಗೌರವ ಮತ್ತು ಸಲ್ಮಾನಗಳನ್ನು ಸತೀಶ್ ಪ್ರಮುಖ ವ್ಯಕ್ತಿಗೆ ಅರ್ಪಿಸಿದ್ದಾರೆ.

ಹೌದು, ಅದು ಮತ್ಯಾರು ಅಲ್ಲ ಸತೀಶ್ ತಾಯಿ. ಅಮ್ಮನಿಗೆ ಸತೀಶ್ ವಿಶೇಷವಾದ ಅಭಿನಂದನೆ ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸತೀಶ್ ಅಭಿನಯದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. 'ಬ್ಯೂಟಿಫುಲ್ ಮನಸುಗಳು', 'ಅಯೋಗ್ಯ' ಮತ್ತು 'ಚಂಬಲ್' ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಪ್ಪೆಯಾಗಿದ್ದ ಸತೀಶ್ ಸಿನಿ ಜೀವನವೀಗ ರಂಗೇರಿದೆ.

ಈ ಎಲ್ಲಾ ಯಶಸ್ಸಿಗೆ ಕಾರಣ ತಾಯಿ ಎಂದು ಅವರಿಗೆ ಗೌರವ ಸಲ್ಲಿದ್ದಾರೆ. ಅಮ್ಮನನ್ನು ಚೇರ್ ಮೇಲೆ ಕೂರಿಸಿ ದೊಡ್ಡ ಹೂವಿನ ಹಾರ ಹಾಕಿ ಅಭಿನಂದಿಸಿದ್ದಾರೆ. 'ಎಲ್ಲಾ ಸನ್ಮಾನಗಳು ನಿನಗೆ ನಿನ್ನಿಂದಲೇ' ಎಂದು ಬರೆದುಕೊಂಡು ಅಮ್ಮನ ಜೊತೆ ಇರುವ ಫೋಟೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸತೀಶ್ ತಾಯಿಯ ಪ್ರೀತಿ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ.

 sathish ninasam honored his mother

ಸತೀಶ್ ಸದ್ಯ ಚಂದ್ರ ಮೋಹನ್ ನಿರ್ದೇಶನದ ಕಾಮಿಡಿ ಸಿನಿಮಾ 'ಬ್ರಹ್ಮಚಾರಿ' ಯಲ್ಲಿ ಅಭಿನಯಿಸುತ್ತಿದ್ದಾರೆ. ಸತೀಶ್ ಗೆ ನಾಯಕಿಯಾಗಿ ಅದಿತಿ ಪ್ರಬುದೇವ ಬಣ್ಣಹಚ್ಚಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸತೀಶ್ 'ಬ್ರಹ್ಮಚಾರಿ' ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
Kannada actor ninasam sathish honored his mother, because satish's all success to reason of his mother.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X