ಲಂಡನ್ ನಲ್ಲಿ ಕನ್ನಡ ನಟ ಸತೀಶ್ ನೀನಾಸಂಗೆ ಏನು ಕೆಲಸ.?
'ಅಯೋಗ್ಯ' ಮತ್ತು 'ಚಂಬಲ್' ಯಶಸ್ವಿ ಪ್ರದರ್ಶನ ಕಂಡ ಮೇಲೆ ನಟ ಸತೀಶ್ ನೀನಾಸಂ ಕೈಯಲ್ಲಿ ಸಾಲು ಸಾಲು ಪ್ರಾಜೆಕ್ಟ್ ಗಳಿವೆ. 'ಬ್ರಹ್ಮಾಚಾರಿ', 'ಗೋಧ್ರಾ', 'ಪರಿಮಳ ಲಾಡ್ಜ್' ಚಿತ್ರಗಳ ಶೂಟಿಂಗ್ ನಲ್ಲಿ ಸತೀಶ್ ನೀನಾಸಂ ಬಿಜಿಯಾಗಿದ್ದಾರೆ.
ಈ ಎಲ್ಲದರ ನಡುವೆ ಸತೀಶ್ ನೀನಾಸಂ ಲಂಡನ್ ಗೆ ಹಾರಿದ್ದಾರೆ. ಸತೀಶ್ ನೀನಾಸಂ ಏಕ್ದಂ ಲಂಡನ್ ಗೆ ಫ್ಲೈಟ್ ಹತ್ತಿದ್ಯಾಕೆ ಅಂದ್ರೆ ಹೊಸ ಸಿನಿಮಾದ ಶೂಟಿಂಗ್ ಗೆ.! ಹೌದು, 'ವೈತರಣಿ' ಎಂಬ ಹೊಸ ಚಿತ್ರಕ್ಕೆ ಸತೀಶ್ ನೀನಾಸಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ಸಾಗುತ್ತಿದೆ.

ಅಂದ್ಹಾಗೆ, 'ವೈತರಣಿ' ಚಿತ್ರವನ್ನು ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಣ ಮಾಡುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಟಿಸಿ, ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸತೀಶ್ ನೀನಾಸಂ ಹೀರೋ. 'ವೈತರಣಿ' ಮೂಲಕ ಇದೇ ಮೊದಲ ಬಾರಿಗೆ ಸತೀಶ್ ನೀನಾಸಂ ಮತ್ತು ಶರ್ಮಿಳಾ ಮಾಂಡ್ರೆ ಜೊತೆಯಾಗಿದ್ದಾರೆ.

ಈ ಹಿಂದೆ 'ಕಹಿ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅರವಿಂದ್ ಶಾಸ್ತ್ರಿ ಇದೀಗ 'ವೈತರಣಿ' ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಅತ್ತ 'ಅಳಿದು ಉಳಿದವರು' ಚಿತ್ರದಲ್ಲೂ ಅರವಿಂದ್ ಶಾಸ್ತ್ರಿ ಬಿಜಿಯಿದ್ದಾರೆ.


Click it and Unblock the Notifications











