For Quick Alerts
  ALLOW NOTIFICATIONS  
  For Daily Alerts

  25 ಸಾವಿರಕ್ಕೆ ಅಚ್ಯುತ್ ಕುಮಾರ್‌ಗೆ ಕರೆ ಮಾಡಿ ಗೋಳಾಡಿದ ನೀನಾಸಂ ಸತೀಶ್!

  |

  ನಟ ನೀನಾಸಂ ಸತೀಶ್ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನೀನಾಸಂ ಅಭಿನಯದ 'ಡಿಯರ್ ವಿಕ್ರಂ' ಸಿನಿಮಾ ರಿಲೀಸ್ ಆಗಿದೆ. ಕೊರೊನಾ ಕಡಿಮೆ ಆದ ಬಳಿಕ ಅವರ ಕೆಲವು ಸಿನಿಮಾಗಳು ಶೂಟಿಂಗ್ ಶುರುವಾಗಿದೆ.

  ಈಗ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೇ ತಿಂಗಳು ನೀನಾಸಂ ಸತೀಶ್ ಮತ್ತೊಂದು ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್ ಆಗುತ್ತಿರುವುದೇನೊ ಸರಿ. ಆದರೆ ನೀನಾಸಂ ಸತೀಶ್‌ಗೆ ಏನಾಯ್ತು ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ.

  25 ದಿನಗಳನ್ನು ಪೂರೈಸಿದ '777 ಚಾರ್ಲಿ': ರಕ್ಷಿತ್ ಶೆಟ್ಟಿ ಸಿನಿಮಾ ಕಲೆಕ್ಷನ್ ಎಷ್ಟು?25 ದಿನಗಳನ್ನು ಪೂರೈಸಿದ '777 ಚಾರ್ಲಿ': ರಕ್ಷಿತ್ ಶೆಟ್ಟಿ ಸಿನಿಮಾ ಕಲೆಕ್ಷನ್ ಎಷ್ಟು?

  ಹೌದು, ನಟ ನೀನಾಸಂ ಸತೀಶ್ 25 ಸಾವಿರ ರೂಪಾಯಿಗಾಗಿ ಗೋಳಾಡಿದ್ದಾರೆ. ಅದು ತಮ್ಮ ಮಗಳ ಮದುವೆಗಾಗಿ ದುಡ್ಡು ಕೇಳಿದ್ದಾರೆ. ಇದನ್ನು ನೋಡಿ ಅಚ್ಚರಿ ಪಡಬೇಡಿ, ಮುಂದೆ ಓದಿ...

  25 ಸಾವಿರಕ್ಕೆ ಗೋಳಾಡಿದ ಸತೀಶ್!

  25 ಸಾವಿರಕ್ಕೆ ಗೋಳಾಡಿದ ಸತೀಶ್!

  ನಟ ನೀನಾಸಂ ಸತೀಶ್ ತಮ್ಮ ಮಗಳ ಮದುವೆಗಾಗಿ 25 ಸಾವಿರ ದುಡ್ಡು ಕೇಳುತ್ತಾರೆ. ಅಷ್ಟಕ್ಕೂ ಅವರು ತಮ್ಮ ಹೆಸರಿನಲ್ಲಿ ಕರೆ ಮಾಡುವುದಿಲ್ಲ. ಪ್ರೊಡಕ್ಷನ್ ಮ್ಯಾನೇಜರ್ ವೆಂಕಟೇಶ್ ಎಂದು ಕರೆ ಮಾಡುತ್ತಾರೆ. "ಅಣ್ಣ ನಾನು ಪ್ರೊಡಕ್ಷನ್ ಮ್ಯಾನೇಜರ್ ಮಾತಾಡೋದು. ನನ್ನ ಮಗಳ ಮದುವೆ ಅಣ್ಣ 25 ಸಾವಿರ ದೊಡ್ಡು ಬೇಕು ಅಣ್ಣ. ನಿಮ್ಮ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದೀನಿ ಅಣ್ಣ. 'ಕೆಜಿಎಫ್' ಸಿನಿಮಾಗೂ ಕೆಲಸ ಮಾಡಿದ್ದೇನೆ ಅಣ್ಣ" ಎನ್ನುತ್ತಾರೆ ನೀನಾಸಂ ಸತೀಶ್.

  ನಟ ಸುದೀಪ್ ಬಗ್ಗೆ ಅವಹೇಳನಕಾರಿ ಕಮೆಂಟ್: ಆಕ್ರೋಶಗೊಂಡ ನಿರ್ದೇಶಕ ನಂದ ಕಿಶೋರ್!ನಟ ಸುದೀಪ್ ಬಗ್ಗೆ ಅವಹೇಳನಕಾರಿ ಕಮೆಂಟ್: ಆಕ್ರೋಶಗೊಂಡ ನಿರ್ದೇಶಕ ನಂದ ಕಿಶೋರ್!

  ಅಚ್ಯುತ್ ಕುಮಾರ್ ಬಳಿ ಹಣ ಕೇಳಿದ ಸತೀಶ್!

  ಅಚ್ಯುತ್ ಕುಮಾರ್ ಬಳಿ ಹಣ ಕೇಳಿದ ಸತೀಶ್!

  ಅಷ್ಟಕ್ಕೂ ನಟ ನೀನಾಸಂ ಸತೀಶ್ ಕರೆ ಮಾಡಿದ್ದು ಮತ್ಯಾರಿಗೂ ಅಲ್ಲ. ಹಿರಿಯ ನಟ ಅಚ್ಯುತ್ ಕುಮಾರ್ ಅವರಿಗೆ. ಹಿರಿಯ ನಟ ನೀನಾಸಂ ಸತೀಶ್ ಕರೆ ಮಾಡಿ ಮಗಳ ಮದುವೆಗಾಗಿ ದುಡ್ಡು ಕೊಡಿ ಸರ್ ಎಂದು ಕೇಳಿದ್ದಾರೆ. ಆದರೆ ಅತ್ತ ಅಚ್ಯುತ್ ಕುಮಾರ್, ನೀನು ಯಾರೆಂದು ಗೊತ್ತಿಲ್ಲ. ಯಾರೆಂದು ಗೊತ್ತಾಗುತ್ತಿಲ್ಲ. ಇದ್ದಕ್ಕಿದ್ದ ಹಾಗೆ ಈ ರೀತಿ ಫೋನ್ ಮಾಡಿ ದುಡ್ಡು ಕೇಳಿದರೆ ಕೊಡೋಕಾಗುತ್ತಾ ಎಂದು ರೇಗುತ್ತಾರೆ.

  ಇದು ನೀನಾಸಂ ಸತೀಶ್ ಪ್ರಚಾರದ ಗಿಮಿಕ್!

  ಇದು ನೀನಾಸಂ ಸತೀಶ್ ಪ್ರಚಾರದ ಗಿಮಿಕ್!

  ನಟ ನೀನಾಸಂ ಸತೀಶ್ ಈ ರೀತಿ ಮಾಡಲು ಕಾರಣ ಅವರ ಮಗಳ ಮದುವೆ ಅಲ್ಲ. ಬದಲಿಗೆ 'ಪೆಟ್ರೋಮ್ಯಾಕ್ಸ್' ಸಿನಿಮಾದ ಪ್ರಚಾರ. ಹೌದು, ಸಿನಿಮಾ ಪ್ರಚಾರಕ್ಕಾಗಿ ಅಚ್ಯುತ್ ಕುಮಾರ್‌ಗೆ ಕರೆ ಮಾಡಿ ಸತೀಶ್ ಬೇರೆಯವರ ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ ಇದು ಪ್ರ್ಯಾಂಕ್ ಕರೆ ಎಂದು ಅಚ್ಯುತ್ ಕುಮಾರ್‌ಗೆ ಗೊತ್ತಾಗಿಲ್ಲ.

  ಕಾಮಿಡಿ ಕಿಂಗ್ ಕೋಮಲ್‌ಗೆ ಹುಟ್ಟು ಹಬ್ಬದ ಸಂಭ್ರಮ!ಕಾಮಿಡಿ ಕಿಂಗ್ ಕೋಮಲ್‌ಗೆ ಹುಟ್ಟು ಹಬ್ಬದ ಸಂಭ್ರಮ!

  ಜುಲೈ 15ಕ್ಕೆ 'ಪೆಟ್ರೋಮ್ಯಾಕ್ಸ್' ರಿಲೀಸ್!

  ಜುಲೈ 15ಕ್ಕೆ 'ಪೆಟ್ರೋಮ್ಯಾಕ್ಸ್' ರಿಲೀಸ್!

  'ಪೆಟ್ರೋಮ್ಯಾಕ್ಸ್' ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಜುಲೈ 15 'ಪೆಟ್ರೋಮ್ಯಾಕ್ಸ್' ತೆರೆಗೆ ಬರ್ತಿದೆ. ಹಾಗಾಗಿ ಸಿನಿಮಾ ಪ್ರಚಾರಕ್ಕಾಗಿ ಈ ರೀತಿಯ ವಿಡಿಯೋ ಮಾಡಿದ್ದಾರೆ ನೀನಾಸಂ ಸತೀಶ್. ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್ ಜೊತೆಗೆ ಮೇಘನಾ ರಾಜ್ ನಟಿಸಿದ್ದಾರೆ.

  English summary
  Sathish Ninasam Prank To Actor Achyuth Kumar For 25 Thousand Rupees, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X