'ಬರೀ ನಾವು ಚೆನ್ನಾಗಿದ್ರೆ ಸಾಲದು': ನಟ ಸತೀಶ್ ನೀನಾಸಂ ವಿನಂತಿ

''ಕೊರೊನಾ ವೈರಸ್ ಇಂದಿನ ಪರಿಸ್ಥಿತಿಗೆ ನಾವೇ ಕಾರಣ, ವೈದ್ಯರು ಈ ವೈರಸ್ ಬಗ್ಗೆ ಎಷ್ಟೇ ಸಲಹೆ ಕೊಟ್ಟರು ಬಹುತೇಕರು ಅದನ್ನು ನಿರ್ಲಕ್ಷ್ಯಿಸಿದರು. ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಕಾಪಾಡಿಲ್ಲ'' ಎಂದು ನಟ ಸತೀಶ್ ನೀನಾಸಂ ಟ್ವಿಟ್ಟರ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

Recommended Video

ದಯವಿಟ್ಟು ಡಾಕ್ಟರ್ ಹೇಳೋದನ್ನ ಕೇಳಿ ನಿರ್ಲಕ್ಷ್ಯ ಮಾಡ್ಬೇಡಿ ಅಂದ್ರು ನಿನಾಸಂ ಸತೀಶ್ | Filmibeat Kannada

'ಈಗಿನ ವೈರಸ್ ರೂಪಾಂತರಗೊಂಡಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಯಾವುದೇ ರೋಗಲಕ್ಷಣಗಳು ಇಲ್ಲದಿದ್ದರೂ ತೊಂದರೆಗೆ ಒಳಗಾಗುತ್ತಿದ್ದಾರೆ. ನಾವು ಆರಾಮಾಗಿದ್ದೇವೆ ಎಂದು ರಾಜಾರೋಷವಾಗಿ ಸುತ್ತಾಡುವುದು ಬಿಡಿ, ನಿಮ್ಮಿಂದ ಬೇರೆಯೊಬ್ಬರಿಗೆ ಸಮಸ್ಯೆಯಾಗದಂತೆ ಜಾಗೃತಿ ವಹಿಸಿ' ಎಂದು ಸತೀಶ್ ವಿನಂತಿಸಿದ್ದಾರೆ.

'ಹಾಸನದಲ್ಲೊಬ್ಬ ವ್ಯಕ್ತಿ ತನ್ನ ತಾಯಿಯನ್ನು ಉಳಿಸಿಕೊಳ್ಳಲಾಗದೇ ತಾನೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ನಮ್ಮ ದೊಡ್ಡಮ್ಮನೇ ತೀರಿಕೊಂಡರು. ಅವರ ಅಂತಿಮ ದರ್ಶನ ಸಹ ಪಡೆಯಲು ಸಾಧ್ಯವಾಗಲಿಲ್ಲ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಾವು ಇದ್ದೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.

Sathish ninasam Request to Stay safe and Stay home

'ಇದಕ್ಕೆ ಯಾರು ಹೊಣೆ ಎಂದು ಆರೋಪಿಸುವುದಕ್ಕಿಂತ ನಮ್ಮಿಂದ ಬೇರೆ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವುದು ಈಗ ನಾವು ಮಾಡಬೇಕಾದ ಕೆಲಸ. ನೀವು ಸುರಕ್ಷಿತಯಂದಿರಿ, ಬೇರೆಯವರನ್ನು ಸುರಕ್ಷಿತಯಂದಿರಲು ಬಿಡಿ' ಎಂದು ನೀನಾಸಂ ಸತೀಶ್ ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಿನಿಮಾ ಜಗತ್ತಿನಲ್ಲಿ ಹಲವು ಜನರು ಪ್ರಾಣ ಕಳೆದುಕೊಂಡರು. ಕೆಲವು ಕೊರೊನಾ ಸೋಂಕಿನಿಂದ ಮೃತಪಟ್ಟರೆ, ಇನ್ನು ಕೆಲವರು ಇತರೆ ಕಾಯಿಲೆಗಳಿಂದ ಸಾವನ್ನಪ್ಪಿದರು.

ಕನ್ನಡ ಚಿತ್ರರಂಗದ ಮೇಕಪ್ ಕಲಾವಿದ ಶ್ರೀನಿವಾಸ್, ನಿರ್ಮಾಪಕ ರಾಮು, ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್, ರನ್ನ ಚಿತ್ರದ ನಿರ್ಮಾಪಕ ಚಂದ್ರಶೇಖರ್, ತಮಿಳು ಹಾಸ್ಯ ನಟ ವಿವೇಕ್, ಬಾಲಿವುಡ್ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಸೇರಿದಂತೆ ಹಲವು ಕೊನೆಯುಸಿರೆಳೆದಿದ್ದಾರೆ.

More from Filmibeat

English summary
Kannada actor Sathish ninasam Request to Stay safe and Stay home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X