ಸತೀಶ್ ನೀನಾಸಂ ವೃತ್ತಿ ಜೀವನದಲ್ಲಿ ಇಂದು ಮರೆಯಲಾಗದ ದಿನ

ಲಾಕ್‌ಡೌನ್ ಆದ್ಮೇಲೆ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆ ಸತೀಶ್ ನೀನಾಸಂ ಬಹಳ ಬ್ಯುಸಿಯಾಗಿದ್ದಾರೆ. ಸತತ ಸಿನಿಮಾಗಳನ್ನು ಮಾಡುವ ಮೂಲಕ ಸಕ್ರಿಯರಾಗಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಯೋಜನೆ ಮಾಡಿದಂತೆ ಹಿಂದೆಂದೆನೇ ಹೊಸ ಸಿನಿಮಾಗಳ ಚಿತ್ರೀಕರಣ ಆರಂಭಿಸಿದ್ದಾರೆ ಸತೀಶ್. ಈ ಕುರಿತು ಸ್ವತಃ ಸತೀಶ್ ನೀನಾಸಂ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

''ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ, ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ. "ಮ್ಯಾಟ್ನಿ" ಮತ್ತು "ದಸರಾ" ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೇ, ಮೈಸೂರಿನಲ್ಲಿ "ಪೆಟ್ರೊಮ್ಯಾಕ್ಸ್" ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ. ಲವ್ ಯೂ ಆಲ್...'' ಎಂದು ಟ್ವೀಟ್ ಮಾಡಿದ್ದಾರೆ.

Sathish Ninasam Shooting 3 movie in One day

ನೀರ್‌ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ಚಿತ್ರ 'ಪೆಟ್ರೋಮ್ಯಾಕ್ಸ್'. ಈ ಚಿತ್ರದಲ್ಲಿ ಸತೀಶ್ ಜೊತೆ ಹರಿಪ್ರಿಯಾ ಜೋಡಿಯಾಗಿ ನಟಿಸುತ್ತಿದ್ದಾರೆ. ಕಳೆದ ಎರಡು ದಿನದಿಂದ ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ.

ಸತೀಶ್ ಮತ್ತು ಮನೋಹರ್ ಕಾಂಪಲ್ಲಿ ಕಾಂಬಿನೇಷನ್‌ನಲ್ಲಿ 'ಮ್ಯಾಟ್ನಿ' ಸಿನಿಮಾ ಸೆಟ್ಟೇರಿದ್ದು, ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 'ಮ್ಯಾಟ್ನಿ' ಸಿನಿಮಾ ಚಿತ್ರೀಕರಣ ಮಾಡುತ್ತಿದೆ.

ಇನ್ನು ಅರವಿಂದ್ ಶಾಸ್ತ್ರಿ ನಿರ್ದೇಶನದ 'ದಸರಾ' ಸಿನಿಮಾ ಚಿತ್ರೀಕರಣ ಸಹ ಇಂದು ಬೆಂಗಳೂರಿನಲ್ಲಿ ಆರಂಭವಾಗಿದೆ. ಈ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಮುತ್ತು ರುಕ್ಮಿಣಿ ವಿಜಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor Sathish Ninasam doing 3 movie shooting in a single day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X