For Quick Alerts
  ALLOW NOTIFICATIONS  
  For Daily Alerts

  ಸತೀಶ್ ನೀನಾಸಂ ವೃತ್ತಿ ಜೀವನದಲ್ಲಿ ಇಂದು ಮರೆಯಲಾಗದ ದಿನ

  |

  ಲಾಕ್‌ಡೌನ್ ಆದ್ಮೇಲೆ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆ ಸತೀಶ್ ನೀನಾಸಂ ಬಹಳ ಬ್ಯುಸಿಯಾಗಿದ್ದಾರೆ. ಸತತ ಸಿನಿಮಾಗಳನ್ನು ಮಾಡುವ ಮೂಲಕ ಸಕ್ರಿಯರಾಗಿದ್ದಾರೆ.

  ಲಾಕ್‌ಡೌನ್ ಸಮಯದಲ್ಲಿ ಯೋಜನೆ ಮಾಡಿದಂತೆ ಹಿಂದೆಂದೆನೇ ಹೊಸ ಸಿನಿಮಾಗಳ ಚಿತ್ರೀಕರಣ ಆರಂಭಿಸಿದ್ದಾರೆ ಸತೀಶ್. ಈ ಕುರಿತು ಸ್ವತಃ ಸತೀಶ್ ನೀನಾಸಂ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

   ಮೈಸೂರಿನಲ್ಲಿ 'ಪೆಟ್ರೋಮ್ಯಾಕ್ಸ್' ಹಿಡಿದು ಓಡಾಡುತ್ತಿರುವ ಸತೀಶ್ ಮತ್ತು ಹರಿಪ್ರಿಯಾ ಮೈಸೂರಿನಲ್ಲಿ 'ಪೆಟ್ರೋಮ್ಯಾಕ್ಸ್' ಹಿಡಿದು ಓಡಾಡುತ್ತಿರುವ ಸತೀಶ್ ಮತ್ತು ಹರಿಪ್ರಿಯಾ

  ''ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ, ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ. "ಮ್ಯಾಟ್ನಿ" ಮತ್ತು "ದಸರಾ" ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೇ, ಮೈಸೂರಿನಲ್ಲಿ "ಪೆಟ್ರೊಮ್ಯಾಕ್ಸ್" ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ. ಲವ್ ಯೂ ಆಲ್...'' ಎಂದು ಟ್ವೀಟ್ ಮಾಡಿದ್ದಾರೆ.

  ನೀರ್‌ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ಚಿತ್ರ 'ಪೆಟ್ರೋಮ್ಯಾಕ್ಸ್'. ಈ ಚಿತ್ರದಲ್ಲಿ ಸತೀಶ್ ಜೊತೆ ಹರಿಪ್ರಿಯಾ ಜೋಡಿಯಾಗಿ ನಟಿಸುತ್ತಿದ್ದಾರೆ. ಕಳೆದ ಎರಡು ದಿನದಿಂದ ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ.

  ಸತೀಶ್ ನೀನಾಸಂ-ಕಾಂಪಲ್ಲಿಯ 'ಮ್ಯಾಟ್ನಿ' ಚಿತ್ರದ ಫಸ್ಟ್ ಲುಕ್ ಸತೀಶ್ ನೀನಾಸಂ-ಕಾಂಪಲ್ಲಿಯ 'ಮ್ಯಾಟ್ನಿ' ಚಿತ್ರದ ಫಸ್ಟ್ ಲುಕ್

  ಸತೀಶ್ ಮತ್ತು ಮನೋಹರ್ ಕಾಂಪಲ್ಲಿ ಕಾಂಬಿನೇಷನ್‌ನಲ್ಲಿ 'ಮ್ಯಾಟ್ನಿ' ಸಿನಿಮಾ ಸೆಟ್ಟೇರಿದ್ದು, ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 'ಮ್ಯಾಟ್ನಿ' ಸಿನಿಮಾ ಚಿತ್ರೀಕರಣ ಮಾಡುತ್ತಿದೆ.

  ಮೇಘನಾ ಮಡಿಲು ಸೇರಿದ ಜೂನಿಯರ್ ಚಿರು | Meghana Raj blessed with baby boy | Filmibeat Kannada

  ಇನ್ನು ಅರವಿಂದ್ ಶಾಸ್ತ್ರಿ ನಿರ್ದೇಶನದ 'ದಸರಾ' ಸಿನಿಮಾ ಚಿತ್ರೀಕರಣ ಸಹ ಇಂದು ಬೆಂಗಳೂರಿನಲ್ಲಿ ಆರಂಭವಾಗಿದೆ. ಈ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಮುತ್ತು ರುಕ್ಮಿಣಿ ವಿಜಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada actor Sathish Ninasam doing 3 movie shooting in a single day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X