ಸತೀಶ್ ನೀನಾಸಂ ಹುಟ್ಟುಹಬ್ಬಕ್ಕೆ 'ಬ್ರಹ್ಮಚಾರಿ' ಟೀಸರ್ ಗಿಫ್ಟ್
ಸತೀಶ್ ನೀನಾಸಂ 'ಬ್ರಹ್ಮಚಾರಿ'ಯಾಗಿ ತಿಂಗಳುಗಾಳೆ ಆಗಿವೆ. ಆದ್ರೆ ಈ 'ಬ್ರಹ್ಮಚಾರಿಗೆ' ಅದಿತಿ ಪ್ರಭುದೇವ ಜೊತೆ ಏನು ಕೆಲಸ ಎನ್ನುವುದು ಅನೇಕರ ಪ್ರಶ್ನೆ. '100 ಪರ್ಸೆಂಟ್ ವರ್ಜಿನ್' ಅಂತ ಟ್ಯಾಗ್ ಲೈನ್ ಬೇರೆ ಹಾಕಿಕೊಂಡಿದ್ದಾರೆ. ಇಷ್ಟಿದ್ರೂ ಈ 'ಬ್ರಹ್ಮಚಾರಿ', ಅದಿತಿ ಜೊತೆ ಫಸ್ಟ್ ನೈಟ್ ಮಾಡಿಕೊಳ್ಳುತ್ತಿದ್ದಾರೆ.
ಹೌದು, ಸತೀಶ್ ಅಭಿನಯದ 'ಬ್ರಹ್ಮಚಾರಿ' ಚಿತ್ರದ ಫೋಸ್ಟರ್ ಒಂದು ರಿಲೀಸ್ ಆಗಿದೆ. ಚಿತ್ರದ ಟೈಟಲ್ ಗೂ ಈ ಪೋಸ್ಟರ್ ಗೂ ತದ್ವಿರುದ್ಧವಾಗಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಕೊಂಚ ಜಾಸ್ತಿ ಆಗಿದೆ. 'ಬ್ರಹ್ಮಚಾರಿ' ಫಸ್ಟ್ ನೈಟ್ ಮಾಡಿಕೊಳ್ಳುತ್ತಿದ್ದಾನೆ ಎಂದು ಚಿತ್ರಾಭಿಮಾನಿಗಳು ಅಚ್ಚರಿ ಪಟ್ಟುಕೊಳ್ಳುತ್ತಿದ್ದಾರೆ.

ಸದ್ಯ ಇಂಟ್ರೆಸ್ಟಿಂಗ್ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ ಚಿತ್ರದ ಟೀಸರ್ ಅನ್ನು ಇದೆ ತಿಂಗಳು 20ಕ್ಕೆ ಅಂದ್ರೆ ಸತೀಶ್ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ. ಇನ್ನು ವಿಶೇಷ ಅಂದ್ರೆ ಟೀಸರ್ ಗೆ ಒಂದು ಟೀಸರ್ ರಿಲೀಸ್ ಮಾಡುತ್ತಿದ್ದೆ ಚಿತ್ರತಂಡ.
ಇದೆ ತಿಂಗಳು 10ಕ್ಕೆ ಟೀಸರ್ ನ ಟೀಸರ್ ರಿಲೀಸ್ ಮಾಡಲಾಗುತ್ತಿದೆ. ಪ್ರಮುಖ ಟೀಸರ್ ಅನ್ನು 20ಕ್ಕೆ ಅಂದ್ರೆ ಸತೀಶ್ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ನೀಡುತ್ತಿದೆ ಚಿತ್ರತಂಡ. ಟೈಟಲ್ ಮತ್ತು ಪೋಸ್ಟರ್ ಗಳ ಮೂಲಕವೆ ಭಾರಿ ಕುತೂಹಲ ಮೂಡಿಸಿರುವ 'ಬ್ರಹ್ಮಚಾರಿ' ಬಹುತೇಕ ಚಿತ್ರೀಕರಣ ಮುಗಿಸಿದೆ.
ಅಂದ್ಹಾಗೆ ಚಿತ್ರಕ್ಕೆ ಚಂದ್ರಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಉದಯ್ ಕೆ ಮೆಹ್ತ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ 'ಬ್ರಹ್ಮಚಾರಿ' ಸಧ್ಯದಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











