'ಬ್ರಹ್ಮಚಾರಿ' ಸತೀಶ್ ನೀನಾಸಂಗೆ ಜೊತೆಯಾದ ದತ್ತಣ್ಣ
ನೀನಾಸಂ ಸತೀಶ್ ಈಗ 'ಬ್ರಹ್ಮಚಾರಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'ಚಂಬಲ್' ಚಿತ್ರದ ಸಕ್ಸಸ್ ನ ನಂತರ 'ಬ್ರಹ್ಮಚಾರಿ'ಯಾಗಿದ್ದಾರೆ. ಅಂದ್ಹಾಗೆ 'ಬ್ರಹ್ಮಚಾರಿ' ಚಿತ್ರದ ಮುಹೂರ್ತ ಇತ್ತೀಚಿಗಷ್ಟೆ ನೆರವೇರಿದ್ದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರಕ್ಕೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. 'ಬ್ರಹ್ಮಚಾರಿ' ಚಿತ್ರದ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಿದೆ.
'ಬ್ರಹ್ಮಚಾರಿ' ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ಟೈಟಲ್ ಜೊತೆಗೆ 100 ಪರ್ಸೆಂಟ್ ವರ್ಜಿನ್ ಎನ್ನುವ ಸಬ್ ಟೈಟಲ್ ಇಡಲಾಗಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹಳ್ಳಿ ಮತ್ತು ನಗರ ಎರಡು ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಚಿತ್ರದಲ್ಲಿ ಸತೀಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸತೀಶ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಬಣ್ಣ ಹಚ್ಚುತ್ತಿದ್ದಾರೆ. ಅದಿತಿ ಗ್ರಂಥಾಲಯವೊಂದರ ಗ್ರಂಥಪಾಲಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮತ್ತೊಂದು ವಿಶೇಷ ಅಂದ್ರೆ ಚಿತ್ರದ ಪ್ರಮುಕ ಪಾತ್ರದಲ್ಲಿ ಹಿರಿಯ ನಟ ದತ್ತಣ್ಣ ಬಣ್ಣ ಹಚ್ಚುತ್ತಿದ್ದಾರೆ. ಸಾಕಷ್ಟು ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ದತ್ತಣ್ಣ ಈಗ' ಬ್ರಹ್ಮಚಾರಿ' ಜೊತೆಯಾಗಿರುವುದು ಸಿನಿಪ್ರಿಯರ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಅಂದ್ಹಾಗೆ 'ಬ್ರಹ್ಮಚಾರಿ' ಈ ಹಿಂದೆ 'ಬಾಂಬಿ ವಿಠಾಯಿ' ಮತ್ತು 'ಡಬಲ್ ಇಂಜಿನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಚಂದ್ರ ಮೋಹನ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಉದಯ್ ಮೆಹ್ತಾ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.


Click it and Unblock the Notifications











